ಬಂಟ್ವಾಳ: 1905ರಲ್ಲಿ ಆರಂಭಗೊಂಡ ಬ್ಯಾಕಿಂಗ್ ಕ್ಷೇತ್ರವು ಇಂದು ಭಾರತದ ಆರ್ಥಿಕ ಪ್ರಗತಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ. ಕೆಲವಾರು ರಾಜಕೀಯ ಕಾರಣಗಳಿಂದ 1963ರಲ್ಲಿ ಕೆಲ ಬ್ಯಾಂಕ್‍ಗಳು ರಾಷ್ರೀಕರಣಗೊಂಡರೂ ಪ್ರತಿಯೊಬ್ಬ ಭಾರತೀಯ ಆರ್ಥಿಕ ಪುನಃಶ್ಚೇತನಕ್ಕೆ ಅವು ತನ್ನದೇ ಆದ ಕೊಡುಗೆ ನೀಡುತ್ತಿವೆ. ಬ್ಯಾಕಿಂಗ್ ವ್ಯವಸ್ಥೆ ಇತಿಹಾಸವು ಆರಂಭ ಕಾಲ ರಾಷ್ತ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್‍ಗಳೆಂಬ ಮೂರು ಘಟ್ಟಗಳನ್ನು ಒಳಗೊಂಡಿದೆ. ಪಿಗ್ಮಿಯಂತಹ ಉಳಿತಾಯ ಠೇವಣಿಯು ಪ್ರತಿಯೊಬ್ಬ ಬಡವನು ತನ್ನ ಜೀವನ ಸುಧಾರಣೆಗೆ ದಾರಿ ಮಾಡುವಲ್ಲಿ ಸಹಕಾರಿಯಾಗಿದೆ. ಎಟಿಎಂ, ಮೊಬೈಲ್ ಬ್ಯಾಕಿಂಗ್, ಇಬ್ಯಾಕಿಂಗ್ ಮತ್ತು ಅಂರ್ತಜಾಲದ ಮೂಲಕ ಹಣಕಾಸಿನ ವ್ಯವಹಾರದ ಸೌಲಭ್ಯ ಕಲ್ಪಿಸಿ ಗ್ರಾಹಕರ ಬೇಡಿಕೆಗೆ ತಕ್ಕುದಾದ ಸೇವೆಯನ್ನು ಬ್ಯಾಕಿಂಗ್ ಕ್ಷೇತ್ರ ಇಂದು ನೀಡುತ್ತಿದೆ. ಭಾರತೀಯ ರಿಸರ್ವ್ ಬ್ಯಾಕಿಂಗ್‍ನ ನಿಯಮಾವಳಿ ಇದ್ದರೂ ಭಾರತದ ಅಭಿವೃದ್ಧಿಯಲ್ಲಿ ಬ್ಯಾಕಿಂಗ್ ಕ್ಷೇತ್ರ ಪರಿಣಾಮಕಾರಿಯಾದ ಪಾತ್ರ ವಹಿಸುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಆಡಳಿತ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಡಾ| ಮಲ್ಲಿಕಾರ್ಜುನಪ್ಪ ಟಿ ಹೇಳಿದರು.

DSC_4516ಅವರು ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ಬಂಟ್ವಾಳದ ಅರ್ಥಶಾಸ್ತ್ರ ವಿಭಾಗ, ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಬಿ.ಬಿ.ಎಂ ವಿಭಾಗ ಹಾಗೂ ಮಂಗಳೂರು ವಿ.ವಿ.ಯ ಅರ್ಥಶಾಸ್ತ್ರ ಉಪನ್ಯಾಸಕರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ “ಎಮರ್ಜಿಂಗ್ ಟ್ರೆಂಡ್ಸ್ ಇನ್ ಇಂಡಿಯನ್ ಬ್ಯಾಂಕಿಂಗ್ ಎಂಡ್ ಫೈನಾನ್ಸಿಯಲ್ ಇನ್‍ಕ್ಲೂಷನ್ “ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಮಾತನಾಡಿ ಇಂತಹ ವಿಚಾರ ಸಂಕಿರಣಗಳು ಆಧುನಿಕ ಭಾರತದ ಬ್ಯಾಕಿಂಗ್ ವ್ಯವಸ್ಥೆಯ ಇತಿಹಾಸ ಮತ್ತು ಬೆಳವಣಿಗೆಯನ್ನು ತಿಳಿಯುವಲ್ಲಿ ಸಹಕಾರಿಯಾಗಲಿ ಎಂದರು.
ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ತುಕಾರಾಂ ಪೂಜಾರಿ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಯೋಜಕಿ ಮತ್ತು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಪ್ರೇಮಲತಾ ಪೈ ಪ್ರಾಸ್ತಾವಿಕ ಮಾತುಗಳೊಂದಿಗೆ ವಿಚಾರ ಸಂಕಿರಣದ ಆಶಯ ಮತ್ತು ಅತಿಥಿಗಳ ಪರಿಚಯ ಮಾಡಿದರು. ಮಂಗಳೂರ ವಿ.ವಿ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ| ಜಯಕುಮಾರ ಶೆಟ್ಟಿ ವಂದಿಸಿದರು.

By Suddi9

Leave a Reply

Your email address will not be published. Required fields are marked *