ಬಂಟ್ವಾಳ : ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಳೆದ ಐದು ವರ್ಷದ ಅವಧಿಯಲ್ಲಿ ಮಾಡಿರುವ ಸಾಧನೆಯ ಬಗ್ಗೆ ಬಿಜೆಪಿ ಮಾಡಿರುವ ಸವರ್ೆಯಲ್ಲ. ಅದು ಸರಕಾರಿ ಅಂಕಿ-ಅಂಶಗಳನ್ನು ಆಧರಿಸಿ ಖಾಸಗಿ ಸಂಸ್ಥೆಗಳು ನಡೆಸಿದ ಸವರ್ೆಯಾಗಿದೆ. ಇದು ವಿದ್ಯುನ್ಮಾನ ಚಾನೆಲ್ಗಳೂ ಸೇರಿದಂತೆ ಎಲ್ಲ ಮಾಧ್ಯಮಗಳು ಪ್ರಸಾರ ಮಾಡಿದ್ದರೂ ಈ ಬಗ್ಗೆ ಅರಿವಿಲ್ಲದ ಬಂಟ್ವಾಳ ಪುರಸಭಾ ಕಾಂಗ್ರೆಸ್ ಸದಸ್ಯ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ. ಆನಂದ ಅವರು ತಿರುಗೇಟು ನೀಡಿದ್ದಾರೆ.
ಮಂಗಳವಾರ ಸಂಜೆ ಬಿ.ಸಿ.ರೋಡಿನ ಪಕ್ಷದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದರು ಲೋಕಸಭೆಯಲ್ಲಿ ಮಾತನಾಡಿರುವ ಬಗ್ಗೆಯೂ ಈಗಾಗಲೇ ಜಿಲ್ಲಾ ಬಿಜೆಪಿ ನಾಯಕರು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ರಾಷ್ಟ್ರ, ರಾಜ್ಯ ರಾಜಕಾರಣದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕಾರಣದಿಂದ ಸದಾಶಿವ ಬಂಗೇರ ಅವರು ‘ಕೌನ್ಸಿಲರ್ ಕೊಗ್ಗಣ್ಣ’ ನಂತೆ ವತರ್ಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು ಪುರಸಭಾ ವ್ಯಾಪ್ತಿಯ ಸಂಚಯಗಿರಿ ವಾಡರ್ಿನ ಅಭಿವೃದ್ದಿಯ ಬಗ್ಗೆ ಚಿಂತಿಸಲಿ ಎಂದು ತಿಳಿಸಿದರು. ಪುರಸಭಾ ವ್ಯಾಪ್ತಿಯಲ್ಲಿ ಈ ಹಿಂದೆ ಬಿಜೆಪಿ ಸರಕಾರವಿದ್ದ ಅವಧಿಯಲ್ಲಿ ಮುಖ್ಯಮಂತ್ರಿ ಅವರ ವಿಶೇಷ 5 ಕೋಟಿ ರೂಪಾಯಿ ಅನುದಾನದ ಕಾಮಗಾರಿ ಇದೀಗ ನಡೆಯುತ್ತಿದೆಯೇ ಹೊರತು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪುರಸಭೆಗೆ ನಯಾಪೈಸೆಯ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು.
ಸದಾಶಿವ ಬಂಗೇರ ಅವರು ಈ ಹಿಂದೆ ನಗರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನೀಡಿದ ರಾಜೀನಾಮೆ ಪಕ್ಷದಿಂದ ಪುರಸ್ಕೃತವಾಗಿಯೇ ಅಥವಾ ತಿರಸ್ಕೃತವಾಗಿದೆಯೇ ಎಂಬ ಬಗ್ಗೆ ಮತದಾರರಿಗೆ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ ಜಿ ಆನಂದ ಅವರು ಬಂಗೇರ ತಮ್ಮ ಇತಿ-ಮಿತಿಯನ್ನು ಅರಿತುಕೊಂಡು ಮಾತನಾಡಲಿ ಎಂದು ಸಲಹೆ ನೀಡಿದರು.
ನಳಿನ್ ಪ್ರವಾಸ : ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಎ 10 ರಂದು ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಬಂಟ್ವಾಳ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಕಾರ್ಯಕರ್ತರ ಭೇಟಿಯಾಗಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಬಂಟ್ವಾಳ ವೆಂಕಟ್ರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಸಿದ್ದಕಟ್ಟೆ, ವಾಮದಪದವು, ಪಿಲಾತಬೆಟ್ಟುವಿನ ನಯನಾಡು, ಮೂಡಪಡುಕೋಡಿಯ ಬಂಗೇರಕೆರೆ, ಗೋಳ್ತಮಜಲಿನ ಶಕ್ತಿ ಕೇಂದ್ರ, ವೀರಕಂಭದ ಕೆಲಿಂಜ, ಸಂಜೆ ಮಂಚಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ನಂತರ ಸಾಲೆತ್ತೂರು, ಕನ್ಯಾನ, ಕೆರೋಪಾಡಿ ಮೊದಲಾದೆಡೆ ಕಾರ್ಯಕರ್ತರ ಭೇಟಿ ಮಾಡಲಿದ್ದಾರೆ ಮತ್ತು ಮತಯಾಚನೆಗೈಯಲಿದ್ದಾರೆ ಎಂದು ಕ್ಷೇತ್ರ ಸಮಿತಿ ಕಾರ್ಯದಶರ್ಿ ಆನಂದ ಕುಲಾಲ್ ಎಡ್ತೂರು ಅವರು ಈ ಸಂದರ್ಭದಲ್ಲಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಪುರುಷ ಎನ್. ಸಾಲಿಯಾನ್, ಗೋವಿಂದ ಪ್ರಭು, ದಿನೇಶ್ ಅಮ್ಟೂರು, ದಿನೇಶ್ ಭಂಡಾರಿ, ರಾಮದಾಸ್ ಬಂಟ್ವಾಳ್, ಪುಷ್ಪರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
