ಮುಂಬೈ: ಬಾಲಿವುಡ್ ನ ಐಟಂ  ಗರ್ಲ್ ರಾಖಿ ಸಾವಂತ್ ಮುಂಬೈ ವಾಯುವ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸ್ವಲ್ಪ ಸಮಯ ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದ ರಾಖಿ ಅದೇಕೊ ನಂತರ ಪಕ್ಷದಿಂದ ದೂರವುಳಿದಿದ್ದರು. ಜನರಲ್ ವಿ.ಕೆ ಸಿಂಗ್ ಬಿಜೆಪಿ ಸೇರುವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಖಿ ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

rakhi
ಬಿಜೆಪಿ ರಾಖಿಗೆ ಪಶ್ಚಿಮ ಬಂಗಾಳದ ಶ್ರೀರಾಂಪುರ್ ನಿಂದ ಟಿಕೆಟ್ ನೀಡುವುದಾಗಿ ಹೇಳಿತ್ತು ಆದರೆ ಅಲ್ಲಿಂದ ಸ್ಪರ್ಧಿಸಲು ಆಕೆಗೆ ಮನಸ್ಸಿರಲಿಲ್ಲ ಎಂದಾಕೆ ತಿಳಿಸಿದ್ದಾರೆ. ನನಗೆ ಹಿಂದಿ ಮತ್ತು ಮರಾಠಿ ಭಾಷೆ ತಿಳಿದಿದೆ. ಆದರೆ ಪಶ್ಚಿಮ ಬಂಗಾಳದ ಸ್ಥಳೀಯ ಭಾಷೆ ನನಗೆ ತಿಳಿದಿಲ್ಲ ಹಾಗಾಗಿ ಅಲ್ಲಿ ಸ್ಪರ್ಧಿಸಲು ನನಗೆ ಇಷ್ವಿಲ್ಲ. ಮುಂಬೈ ನನ್ನ ಮನೆಯಾಗಿದ್ದು ಇಲ್ಲೇ ಸ್ಪರ್ಧಿಸುತ್ತೇನೆ ಎಂದು ರಾಖಿ ತಿಳಿಸಿದ್ದಾರೆ. ರಾಜಕೀಯ ಸೇರಿ ಜನರ ಬವಣೆಯನ್ನು ದೂರ ಮಾಡುವ ಸಲುವಾಗಿ ಚಿತ್ರರಂಗವನ್ನು ತೊರೆಯುವುದಾಗಿ ರಾಖಿ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *