ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಕ್ಷೇತ್ರ ಪ್ರಚಾರ ನಿದರ್ೇಶನಾಲಯ ಇಲಾಖೆ ವತಿಯಿಂದ ಚಲನಚಿತ್ರ ಪ್ರದರ್ಶನ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಬುಧವಾರ ನಡೆಯಿತು.
ಇದೇ ವೇಳೆ ಚಲನಚಿತ್ರ ಪ್ರದರ್ಶನ ಜೊತೆಗೆ ವಿದ್ಯಾರ್ಥಿಗಳಿಂದ ಗುಂಪು ಚರ್ಚ್ , ಛಾಯಾಚಿತ್ರ ಪ್ರದರ್ಶನ, ವಿಚಾರ ಸಂಕಿರಣ ಮೂಲಕ ರಾಷ್ಟ್ರೀಯ ಏಕತೆ, ಕುಡಿತದ ದುಷ್ಪರಿಣಾಮ, ಸಾಮಾಜಿಕ ಅಸ್ಪ್ರಶ್ಯತೆ ಮತ್ತಿತರ ವಿಷಯಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.ಇಲ್ಲಿನ 8ಮತ್ತು 9ನೇ ತರಗತಿ ಒಟ್ಟು 537 ಮಂದಿ ವಿದ್ಯಾರ್ಥಿಗಳು ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಿರ್ದೇಶನಾಲಯ ಮಾರ್ಗದರ್ಶಿ ಪ್ರಕಾಶ್, ಮುಖ್ಯಶಿಕ್ಷಕ ವಸಂತ ಮಾಧವ, ಕುಶಾಲಪ್ಪ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *