ಬಂಟ್ವಾಳ : ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಧುಸೂಧನ್ ಐತಾಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಯಾಗಿ ತೋಟಗಾರಿಕೆ ಇಲಾಖಾ ಜಂಟಿ ನಿರ್ದೇಶಕ ಐ ಕೆ ದೊಡ್ಡಮಣಿ ಮಂಗಳೂರು, ಗೋಳ್ತಮಜಲು ಗ್ರಾ ಪಂ ಪಿಡಿಒ ಸುನಿಲ್, ಶಾಲಾ ಹಿರಿಯ ವಿದ್ಯಾರ್ಥಿ ಕೆ ಪದ್ಮನಾಭ ರೈ ಕಲ್ಲಡ್ಕ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಚಂದನ್ ಜೈನ್, ಸದಸ್ಯರುಗಳಾದ ಸುರೇಶ್ ನಾಯ್ಕ್, ಹಮೀದ್ ಅಲಿ, ನವೀನ್, ನಝೀರ್, ಮಾಲಿನಿ, ಸುರೇಶ್ ಪೂಜಾರಿ, ಶಾಲಾ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಮೊದಲಾದವರು ಭಾಗವಹಿಸಿದ್ದರು.

ಶಾಲಾ ಮಕ್ಕಳಿಂದ ವೈಭವದ ಮೆರವಣಿಗೆ ನಡೆಯಿತು. ಬಳಿಕ ಮೆಗಾ ಪೋಷಕರ ಸಭೆ ನಡೆಸಲಾಯಿತು. ಶಾಲಾ ಹಳೆ ವಿದ್ಯಾರ್ಥಿ, ಹೋಟೆಲ್ ಲಕ್ಷ್ಮಿ ನಿವಾಸ (ಕೆಟಿ ಹೋಟೆಲ್) ಮಾಲಕ ಶಿವರಾಮ ಹೊಳ್ಳ ಅವರ ವತಿಯಿಂದ ಶಾಲೆಯ ಸುಮಾರು ಒಂದು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.
