ಬಂಟ್ವಾಳ:ತಾಲೂಕಿನ ಮಂಚಿಗ್ರಾಮದ ಮನೆಯೊಂದಕ್ಕೆ ಬಂಟ್ವಾಳ ಉಪವಿಭಾಗದ ಅಬಕಾರಿ ಅಧಿಕಾರಿಗಳು ದಾಳಿ ಮಾಡಿಅಕ್ರಮವಾಗಿ ದಾಸ್ತಾನಿರಿಸಿದ್ದ ಗೋವಾ ಮದ್ಯ ಹಾಗೂ ಹೋಮ್ ಮೇಡ್ ವೈನ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಚಿ ಗ್ರಾಮದ ನಿವಾಸಿ ಅರುಣ್ ನರೋನ್ಹ ಎಂಬವರ ಮನೆಯ ಮೇಲೆ ಈ ದಾಳಿ ಕಾರ್ಯಾಚರಣೆ ನಡೆಸಲಾಗಿದೆ.ಆರೋಪಿಯ ಮನೆಯಲ್ಲಿಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ ಮಧ್ಯ ತುಂಬಿದ ಬಾಟಲಿಗಳು,ವಿದೇಶಿ ಮದ್ಯ ,ವಿವಿಧ ಫ್ಲೇವರ್ ಗಳ ಹೋಮ್ ಮೇಡ್ ವೈನ್ ಸಹಿತ ಒಟ್ಟು 13 ಬಾಟಲಿಗಳಲ್ಲಿ ತುಂಬಿಸಿಟ್ಟಿದ್ದ ವಿವಿಧ ಮಾದರಿಯ ಒಟ್ಟು 6.25 ಲೀಟರ್ ನಷ್ಟು ಅಕ್ರಮ ಮಧ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿದ್ದಾರೆ.
ಸಂದರ್ಭ ಪ್ರಕರಣದ ಆರೋಪಿ ತಲೆಮೆರೆಸಿಕೊಂಡಿದ್ದಾನೆ.ಆರೋಪಿ ಹಾಗೂ ಮನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ
