ಸುದ್ದಿ9 ಬಿ.ಸಿ.ರೋಡು : ಕಂಬಳ ನಮ್ಮ ಮಣ್ಣಿನ ಜಾನಪದ ಕ್ರೀಡೆ. ಇದನ್ನು ಉಳಿಸಿ-ಬೆಳಸಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ನ ಮೊರೆ ಹೋಗಲಿ ಎಂದು ಸಂಸದ ನಳಿನ್ ಕುಮಾರ್ ಕುಮಾರ್ ಕಟೀಲ್ ಸಲಹೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನ ಬ್ರಹ್ಮರಕೂಟ್ಲು, ಬ್ರಹ್ಮಸನ್ನಿಧಿಯ ಸಮೀಪ ಗದ್ದೆಯಲ್ಲಿ ಜುಮಾದಿಗುಡ್ಡೆ ಹಿಂದೂ ಸೇವಾ ಸಂಘ ವತಿಯಿಂದ ಆಯೋಜಿಸಿದ 3ನೇ ವರ್ಷದ ಬಂಟ್ವಾಳ ತಾಲೂಕು ಮಟ್ಟದ “ಕೆಸರ್ಡ್ ಒಂಜಿ ದಿನ” ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಂಬಳವನ್ನು ನಿಷೇಧಿಸುವ ಪ್ರಸ್ತಾಪದಲ್ಲಿ ರಾಜಕೀಯ ಹಿನ್ನೆಲೆಯಿದೆ.
ಅದನ್ನು ಈ ದೇಶದ ರಾಷ್ಟ್ರೀಯ ಕ್ರೀಡೆಯನ್ನಾಗಿಸಲು ರಾಜ್ಯ ಸರಕಾರ ಪ್ರಯತ್ನಿಸಬೇಕು. ಕಂಬಳದ ಹಕ್ಕನ್ನು ರೈತರಿಗೆ ಕೊಟ್ಟಾಗ ಮಾತ್ರ ಇಲ್ಲಿನ ಕೃಷಿಯನ್ನು ಉಳಿಸಲು ಸಾಧ್ಯ. ಕುಮ್ಕಿ ಹಕ್ಕು ಉಳಿಸಬೇಕಾದರೆ, ಕಂಬಳದ ಹಕ್ಕು ಮರುಸ್ಥಾಪನೆಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಹೆಣ್ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಈ ಸಮಾಜದ ವ್ಯವಸ್ಥೆಯೇ ಕಾರಣ. ಅತ್ಯಾಚಾರ, ಕಿರುಕುಳ, ದೈಹಿಕ ಹಿಂಸೆಗಳು ಮಹಿಳೆಯರ ಆತ್ಮವಿಶ್ವಾಸಗಳನ್ನು ಕುಂದಿಸುವಂತೆ ಮಾಡಿದೆ. ಇದರ ಮೇಲೆ ಮಹಿಳಾ ಸಮಾಜ ಸಂಪೂರ್ಣ ನಿಯಂತ್ರಣ ಹೇರಬೇಕು. ಗೋಹತ್ಯೆ ಕೂಡ ಈ ದೇಶ ಎದುರಿಸುತ್ತಿರುವ ಅಪಾಯಕಾರಿಯಾದ ಆಪತ್ತು. ಗೋ ಸಂಸತಿ ನಿರ್ಮುಲನಗೊಂಡರೆ ಕೃಷಿಯು ನಾಶವಾಗುತ್ತದೆ. ಕೃಷಿ ನಾಶವಾದರೆ, ಜನಜೀವನಕ್ಕೆ ತಿಲಾಂಜಲಿ ಹಾಡಬೇಕು ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕೆಸರ್ಡ್ ಒಂಜಿದಿನ ಕಾರ್ಯಕ್ರಮವನ್ನು ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ತುಳುನಾಡಿನ ಕ್ರಷಿಚಟುವಟಿಕೆಯ ಸಾಂಪ್ರದಾಯಕ ಮುಟ್ಟಾಳೆ ತಲೆಗೆ ಮುಡಿಗೆರಿಸಿದಾಗ ಶೋಭಾಕ್ಕ 
ಭತ್ತ ನಾಟಿ ಮಾಡುತ್ತಿರುವ ಮಹಿಳೆಯರು.

ಗದ್ನಿದೆಯಲ್ಧಿ ನಿಧಿ ಶೋದಿಸಿ ಗೆದ್ದ ಮನಿಸ್ 
(ಕೆಸರು ಗದ್ದೆಯಲ್ಲಿ ವಿವಿಧ ಆಟೋಟದಲ್ಲಿ ನಡೆಸಲಾಯಿತು.)
ಬಿ.ಸಿ.ರೋಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಭಂಡಾರಿ ಕುಳತ್ತಬೆಟ್ಟು ಅಧ್ಯಕ್ಷತೆ ವಹಿಸಿದ್ದು, ಮಾಜಿ ಶಾಸಕ ರುಕ್ಮಯ ಪೂಜಾರಿ, ಭಾಜಪ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಕ್ಯಾಂಪ್ಕೋ ಅಧ್ಯಕ್ಷ ಪದ್ಮನಾಭ ಭಟ್ ಕೊಂಕೊಡಿ, ಕೆಎಂಎಫ್ ಅಧ್ಯಕ್ಷ ರವಿರಾಜ ಹೆಗ್ಡೆ, ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ ಪೊನ್ನೋಡಿ, ಭಾಜಪ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್, ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಉದ್ಯಮಿ ಎಂ.ಗೋಪಾಲಕೃಷ್ಣ ಮೆಲಾಂಟ, ಚಂದ್ರಹಾಸ್ ಶೆಟ್ಟಿ ಉಪಸ್ಥಿತರಿದ್ದರು.
1ಲಕ್ಷ ಎಕರೆಯಲ್ಲಿ ಸಾಮೂಹಿಕ ನಾಟಿ!
`ತುಳ್ನಾಡ್ಡ್ ಕೃಷಿ ಕ್ರಾಂತಿ’ಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ದಕ್ಷಿಣ ಮಧ್ಯ ಕ್ಷೇತೀಯ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು, ರೈತನೊಬ್ಬ ಈ ದೇಶದ ಅಪ್ಪಟ ದೇಶಭಕ್ತ, ದೇಶಾರಾಧಕ. ಆತನ ಮಣ್ಣಿನ ಪ್ರೀತಿ; ಮಾತೃಪ್ರೀತಿಗೆ ಪ್ರೇರೇಪಿಸುವಂತೆ ಮಾಡಿದೆ. ಹಣದ ದುರಾಸೆಗೆ ಕಟ್ಟು ಬಿದ್ದು ನಾವು ಮಣ್ಣಿಗೆ ವಿಷ ಬೆರೆಸುತ್ತಿದ್ದೇವೆ. ಯಾಂತ್ರಿಕ ಕೃಷಿ ಪದ್ಧತಿಯನ್ನು ಬಿಟ್ಟು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ಮುಂದಿನ ದಿನಗಳಲ್ಲಿ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ 1ಲಕ್ಷ ಎಕರೆ ಭೂಮಿಯಲ್ಲಿ ಸಾಮೂಹಿಕ ಕೃಷಿ ನಡೆಯಲಿದೆ ಎಂದರು. ಅವರು ಶೋಭಾ ಕರಂದ್ಲಾಜೆಗೆ (ಉರಬಡು) ಬೆತ್ತ .ನೀಡಿ ಅತ್ಯಚಾರಮಾಡುವವರನ್ನು ಎದುರಿಸಲು ಉಪಯೋಗವಾಗಬಹುದು ಎಂದು ಹಾಸ್ಯಚಟಾಕಿಯಲ್ಲಿ
ವೇದಿಕೆಯಲ್ಲಿ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ತಾಪಂ ಅಧ್ಯಕ್ಷ ಯಶವಂತ ದೇರಾಜೆ, ವಿಶ್ವಹಿಂದೂ ಪರಿಷತ್ ಮಂಗಳೂರು ಕಾರ್ಯಾಧ್ಯಕ್ಷ ಜೀತೇಂದ್ರ ಕೊಟ್ಟಾರಿ, ಉದ್ಯಮಿ ಉದಯ ಕುಮಾರ್ ರಾವ್, ವಿವೇಕ್ ಶೆಟ್ಟಿ ನಗ್ರಿಗುತ್ತು, ಸುರೇಶ್ ಭಂಡಾರಿ ಕುಳತ್ತಬೆಟ್ಟು, ಡಾ.ಪ್ರಶಾಂತ್ ಮಾರ್ಲ, ಡಾ.ಹರಿಕಿರಣ್ ಬಂಗೇರ, ಶ್ರೀಕಾಂತ್ ಶೆಟ್ಟಿ, ದಿನೇಶ್ ಭಂಡಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ರೂವಾರಿ ರಾಜೇಶ್ ನಾಕ್ ಉಳಿಪಾಡಿಗುತ್ತು ಪ್ರಸ್ತಾಪಿಸಿದರು. ದಿವಾಕರ್ ಶೆಟ್ಟಿ ಕುಪ್ಪಿಲ ಸ್ವಾಗತಿಸಿದರು. ದಯಾನಂದ ಕತ್ತಲ್ಸರ್, ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕುಪ್ಪಿಲಗುತ್ತು ವಿಠಲ ಶೆಟ್ಟಿ, ಕುಪ್ಪಿಲಗುತ್ತು ಜಗದೀಶ್ ಶೆಟ್ಟಿ, ಕುಪ್ಪಿಲಗುತ್ತು ರಮಾನಾಥ ಶೆಟ್ಟಿ ಸಹಕರಿಸಿದರು.
ಅದೊಂದು ಬ್ರಹ್ಮಸನ್ನಿಧಿ! ರಾಷ್ಟ್ರೀಯ ಹೆದ್ದಾರಿಯ ಸನಿಹ ಇರುವ ಈ ಕ್ಷೇತ್ರಕ್ಕೆ ಪೌರಾಣಿಕ ಮಹತ್ವವೂ ಇದೆ. ಬ್ರಹ್ಮನ ಸನ್ನಿಧಿ ಇರುವ ಕಾರಣದಿಂದಾಗಿ ಇಲ್ಲಿಗೆ ಬ್ರಹ್ಮರೆಗುಡಿ ಎನ್ನುತ್ತಿದ್ದರು. ಈಗ ಬ್ರಹ್ಮರಕೂಟ್ಲು ಎಂದು ಹೆಸರು. ವಾಹನ ಚಾಲಕರು, ಪ್ರಯಾಣಿಕರು, ಸ್ಥಳೀಯ ಗ್ರಾಮಸ್ಥರು, ರೈತರು ಈ ಸನ್ನಿಧಿಗೆ ನಿತ್ಯವೂ ಹರಕೆ ಹಾಕುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ. ಇತ್ತೀಚಿನ ಕೆಲವೊಂದು ದಿನಗಳಿಂದ ಸನ್ನಿಧಿ ಕಾಲವಶಕ್ಕೆ ಸೇರುವ ಅಪಾಯವೂ ಇದೆ. ಭಾನುವಾರ ನಡೆದ ಕೃಷಿಕ್ರಾಂತಿ ಬ್ರಹ್ಮರಸನ್ನಿಧಿಗೆ ಪುನರ್ ಕಾಯಕಲ್ಪಕ್ಕೆ ವಿಶೇಷ ಸ್ಪರ್ಶ ನೀಡಿದೆ.
ಉಪಹಾರಕ್ಕೆ ತುಳುನಾಡಿನ ಸಂಪ್ರದಾಯಿಕ ತಿಂಡಿ-ತಿನಸುಗಳು, ಕೆಸರಿನ ಗದ್ದೆಯಲ್ಲಿ ಮಕ್ಕಳ, ಮಹಿಳೆಯರ ಜಾನಪದ ಆಟೋಟ, ಕೃಷಿ ಮಾಹಿತಿಯುಳ್ಳ ಪುಸ್ತಕ ಮಳಿಗೆ, ವೇದಿಕೆಯಲ್ಲಿ ಬೇಸಾಯ ಪರಿಕರಗಳು, ಅಪರೂಪದ ತುಳು ಪದಗಳು `ಕೃಷಿಕ್ರಾಂತಿ’ ಕಾರ್ಯಕ್ರಮದಲ್ಲಿ ವಿಶೇಷ ಗಮನ ಸೆಳೆದವು.
ಬ್ರಹ್ಮರಕೂಟ್ಲು, ಜುಮಾದಿಗುಡ್ಡೆ ಹಿಂದೂ ಸೇವಾ ಸಂಘ ಮತ್ತು ಸ್ಥಳೀಯ ಗ್ರಾಮಸ್ಥರ ಸಹಯೋಗದಲ್ಲಿ ಬ್ರಹ್ಮರಕೂಟ್ಲುವಿನಲ್ಲಿ ನಡೆದ ಕೃಷಿಕ್ರಾಂತಿ ವಿಭಿನ್ನ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆ ಗಳಿಸುವ ಜತೆಗೆ ರಾಜ್ಯಕ್ಕೆ ಮಾದರಿಯಾಗಿದೆ. ಗದ್ದೆಯಲ್ಲಿ ಆಡುತ್ತಾ ಭತ್ತ ನಾಟಿ ಮಾಡುವ ಪರಿಕಲ್ಪನೆಯನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.
ಮಹಿಳೆಯರು, ಹೆಣ್ಮಕ್ಕಳು, ಹುಡುಗರು, ಪುರುಷರು ಗದ್ದೆಗಿಳಿದು ನಾಮೂಹಿಕ ಭತ್ತ ನಾಟಿಗೆ ಕೈ ಜೋಡಿಸಿದವರು. ನಾಟಿ ನೆಡಲು ಮಹಿಳೆಯರೊಂದಿಗೆ ಪುರುಷರೂ ಸಾಥ್ ನೀಡಿ ಗಮನ ಸೆಳೆದರು. ಕೆಸರಿನಲ್ಲಿ ಮಹಿಳೆಯರ ಓಟ, ಹೆಣ್ಮಕ್ಕಳ ಓಟ, ಮಕ್ಕಳ ಓಟ, ನಿಧಿಶೋದ, ಹುಡುಗರು ಕಬ್ಬಡಿ ಆಡಿದರು. ನಿಧಿ ಶೋಧ ಸ್ಪರ್ಧೆ ಯಲ್ಲಿ ತುಂಬೆ ಬಿಎ ಶಾಲೆಯ 9ನೇ ತರಗತಿವಿದ್ಯಾರ್ಥಿ ಮನೀಶ್ ವಿಜೇತರಾದರು. ಕೈಕಂಬ, ಗಂಜಿಮಠ ಮುತ್ತ ಬಳಗದವರು ಡೋಲು ಬಾರಿಸಿದರು. ಕೃಷಿಕ ರಮಾನಾಥ ಶೆಟ್ಟಿ ದೀಪಾವಳಿಯ ಹಿನ್ನೆಲೆಯನ್ನು ಸಾರುವ ತುಳುವಿನಲ್ಲಿ ಬಲೇಂದ್ರ ಕರೆದರು. ಹಬ್ಬಹರಿದಿನ ವಿಶೇಷಗಳನ್ನು ತಿಳಿಸಲಾಯಿತು.
ಕೃಷಿ ಪುಸ್ತಕ ಮಳಿಗೆ:
ಲೇಖಕರಾದ ಉಗ್ಗಪ್ಪ ಪೂಜಾರಿ, ಡಾ.ಪಾಲ್ಪಾಡಿ ರಾಮಕೃಷ್ಣ ಆಚಾರ್, ನಾರಾಯಣ ಭಟ್ ರಾಮಕುಂಜ, ಬನ್ನಂಜೆ ಬಾಬು ಅಮೀನ್, ಶೈಲೇಜ್ ಹೊಳ್ಳ ಅವರ ಕೃಷಿ ಸಂಬಂಧ ಕೃತಿಗಳ ಮಳಿಗೆ ಏರ್ಪಡಿಸಲಾಯಿತು. ಅವುಗಳಿಗೆ ಭಾರೀ ಬೇಡಿಕೆ ಇತ್ತು. ವಿವಿಧ ತಳಿಯ ಭತ್ತ ಬೀಜಗಳಿಗೆ ಬೇಡಿಕೆ ಇತ್ತು. ಅವುಗಳ ಬಗ್ಗೆ ಸಾರ್ವಜನಿಕರು ರೈತರಿಂದ ಮತ್ತು ಸಂಘಟಕರಿಂದ ಮಾಹಿತಿ ವಿನಿಮಯ ಮಾಡುತ್ತಿದ್ದರು. ವೇದಿಕೆಯಲ್ಲಿ ಗಣ್ಯರು ಪಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಕಲಸೆ, ಭತ್ತ ಬೀಜಗಳು, ಪಡಿ, ನೇಗಿಲು, ಹಗ್ಗ ಮತ್ತಿತರ ಬೇಸಾಯ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಯಿತು. ಕೋಣಗಳನ್ನು ಗದ್ದೆಗೆ ಇಳಿಸುವ ಮೂಲಕ ಭತ್ತ ನಾಟಿಗೆ ಚಾಲನೆ ನೀಡಿದರು. ಗದ್ದೆಗಳಿಗೆ ಗುರಿಕಂಡ, ಪೋಂಕೆಕಂಡ, ಕಾಯರ್ದಡಿ ಕಂಡ, ನರ್ತೆಕಂಡ ಎನ್ನುವ ಹಳೆಯ ಹೆಸರಿಡಲಾಯಿತು. ದಯಾನಂದ ಕತ್ತಲ್ಸರ್, ನಾಗೇಶ್ ಕುಲಾಲ್ ಮತ್ತು ರಾಜೇಂದ್ರ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.














