ಆಸ್ಕರ್ ಪ್ರಶಸ್ತಿ ವಿಜೇತೆ ಜೆನ್ನಿಫರ್ ಲಾರೆನ್ಸ್ ಪ್ರಸಿದ್ದ ಹಾಡುಗಾರ ಕ್ರಿಸ್ ಜೊತೆ ಡೇಟಿಂಗ್ ಮುಗಿಸಿ, ಆತನ ಜೊತೆಗಿದ್ದ ಸಂಬಂಧವನ್ನೂ ಮುರಿದು ಹಾಕಿದ್ದಾಳೆ. ಆತನ ಜೊತೆ ಕಳೆದ ನಾಲ್ಕು ತಿಂಗಳ ಜೊತೆ ಡೇಟಿಂಗ್ ನಡೆಸುತ್ತಿದ್ದ ಲಾರೆನ್ಸ್ ಚಿಕ್ಕ ಮನಸ್ತಾಪವನ್ನೇ ಮುಂದಿಟ್ಡುಕೊಂಡು ಆತನ ಸಂಬಂಧಕ್ಕೆ ಇತಿಶ್ರೀ ಹಾಕಿದ್ದಾಳೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತನ್ನ ಮುಂದಿನ ಆದರ್ಶ ಪ್ರಿಯತಮನ ಕನಸು ಕಾಣುತ್ತಿರುವ ಜೆನ್ನಿಫರ್ ಲಾರೆನ್ಸ್ ನನ್ನ ಜೊತೆಗಾರ ಆದರ್ಶ ವ್ಯಕ್ತಿಯಾಗಿರಬೇಕೆಂದು ಕನಸು ಕಾಣಲಾರಂಭಿಸಿದ್ದಾಳೆ. ತನ್ನ ಹಳೆಯ ಲವ್ವರ್ ಬಗ್ಗೆ ಹೇಳಿದ ಲಾರೆನ್ಸ್ ಅಸ್ಥಿರ ಜೊತೆಗಾರನ ಜೊತೆ ಡೇಟ್ ಮಾಡುವುದಕ್ಕಿಂತ ಒಂಟಿಯಾಗಿ ಉಳಿಯುವುದೇ ಲೇಸು ಎಂದಿದ್ದಾರೆ ಈ “ಹಂಗರ್ ಗೇಮ್ಸ್” ಖಾತಿಯ ೨೪ ವರ್ಷದ ಚೆಲುವೆ ಜೆನ್ನಿಫರ್ ಲಾರೆನ್ಸ್.
ಈಗಾಗಲೇ ಬೇರ್ಪಟ್ಟಿರುವ ತನ್ನ ಹೆಂಡತಿ ಗ್ವೈನೆಥ್ ಪ್ಯಾಲ್ಟ್ರೊ ಅವರೊಂದಿಗೆ ಕ್ರಿಸ್ ಮಾರ್ಟಿನ್ ಇನ್ನೂ ತನ್ನ ಗೆಳೆತನವನ್ನು ಮುಂದುವರೆಸಿರುವುದೇ, ಈ ಸಂಬಂಧ ಮುರಿದು ಬೀಳಲು ಕಾರಣ ಎನ್ನಲಾಗಿದೆ. ಕ್ರಿಸ್ ಮಾರ್ಟಿನ್ ಅವರ ಹೆಂಡತಿಗೆ ಇಬ್ಬರು ಮಕ್ಕಳಿದ್ದಾರೆ.

