ಬಂಟ್ವಾಳ: ಪುರಸಭೆಯಲ್ಲಿ ಶುಕ್ರವಾರ ನಡೆದ ಆಯವ್ಯಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿದರು. ಕಳೆದ ವರ್ಷ ಮಹಿಳೆಯರಿಂದ ಬಂದಿರುವ ಬೇಡಿಕೆಯಂತೆ ಬಿ.ಸಿ.ರೋಡು ಮಿನಿವಿಧಾನಸೌಧ ಬಳಿ ‘ಪಿಂಕ್ ಶೌಚಾಲಯ’ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು, ಮುಂಬರುವ ಮಾಚ್ ð ತಿಂಗಳು ಕಾಮಗಾರಿ ಆರಂಭಿಸುವುದಾಗಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ತಿಳಿಸಿದ್ದಾರೆ.

ಇಲ್ಲಿನ ಪುರಸಭೆಯಲ್ಲಿ ಶುಕ್ರವಾರ ನಡೆದ ಆಯವ್ಯಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಮೆಲ್ಕಾರ್ ನಲ್ಲಿ ಶೌಚಾಲಯ ನಿರ್ಮಿಸಲು ಸೂಕ್ತ ಜಮೀನಿನ ಕೊರತೆ ಎದುರಾಗಿದ್ದು, ಬಿ.ಸಿ.ರೋಡು ಪಿಂಕ್ ಶೌಚಾಲಯಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ತಿಳಿಸಿದರು.

ಬಂಟ್ವಾಳ ಕೊಟ್ರಮಣಗಂಡಿ ಬಸ್ ತಂಗುದಾಣದಲ್ಲಿ ಖಾಸಗಿ ಸಂಸ್ಥೆ ನಿರ್ಮಿಸಿದ ಶೌಚಾಲಯ ಶುಚಿತ್ವವಿಲ್ಲದೆ ಸಾರ್ವಜನಿಕರ ಬಳಕೆಗೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂತು. ಬಿ.ಸಿ.ರೋಡಿನ ಅಂಚೆ ಕಚೇರಿ ಬಳಿ ನೀರಿನ ಪೈಪ್ ಲೈನ್ ಗಾಗಿ ಕಾಂಕ್ರೀಟ್ ರಸ್ತೆ ಅಗೆದು ಹಾಕಲಾಗಿದೆ.

ಸಂಚಯಗಿರಿ ಎಂಬಲ್ಲಿ ಚರಂಡಿ ಇಲ್ಲದೆ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಕುಡಿಯುವ ನೀರು ಸಮರ್ಪಕ ಪೂರೈಕೆಯಾಗದಿದ್ದರೂ ಗಾಳಿಗೆ ಮೀಟರ್ ತಿರುಗುತ್ತಿದೆ ಎಂಬ ದೂರು ಕೇಳಿ ಬಂತು. ಆಯಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೂ ರಸ್ತೆ ಬದಿ ಕಸದ ರಾಶಿ ಕಂಡು ಬರುತ್ತಿದೆ ಎಂದು ನಿವೃತ್ತ ಮುಖ್ಯಾಧಿಕಾರಿ ಶಿವಶಂಕರ್ ತಿಳಿಸಿದರು. ಪುರಸಭೆ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಪುರಸಭಾ ಮಾಜಿ ಸದಸ್ಯೆ ವಸಂತಿ ಗಂಗಾಧರ್, ಎಂಜಿನಿಯರ್ ಶೋಭಾಲಕ್ಷ್ಮೀ, ಮೆನೇಜರ್ ಲೀಲಾವತಿ, ಸಮುದಾಯ ಅಭಿವರದ್ಧಿ ಅಧಿಕಾರಿ ಉಮಾವತಿ, ದಾಮೋದರ್ ಸಂಚಯಗಿರಿ, ಪ್ರದೀಪ್ ಅಜ್ಜಿಬೆಟ್ಟು ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *