ಕೈಕಂಬ: ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಎಡಪದವು ಸಮೀಪದ ಪಾಡ್ಯಾರು ಎಂಬಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟ್ ಸ್ಥಾಪಿಸುವ ಪ್ರಸ್ತಾವನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಎಡಪದವು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಾಡ್ಯಾರು ಗ್ರಾಮಸ್ಥರ ಜತೆ ಶಾಸಕ ಡಾ. ವೈ ಭರತ್ ಶೆಟ್ಟಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಈ ಕುರಿತಂತೆ ಸ್ಥಳೀಯರು ಮನವಿ ನೀಡಿದ್ದು,ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನಿಮ್ಮಿಂದ ಶಾಸಕನಾಗಿ ಆಯ್ಕೆಯಾಗಿರುವ ನಾನು ಯಾವಾಗಲೂ ನಿಮ್ಮ ಜತೆಯಲ್ಲಿ ಇದ್ದೇನೆ ಜನರಿಗೆ ಬೇಡವಾದ ಯಾವುದೇ ಯೋಜನೆಗೆ ನನ್ನ ವಿರೋಧವಿದೆ ಎಂದು ಹೇಳಿದರು.20210905_161514

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಎಡಪದವು ಸಮೀಪದ ಪಾಡ್ಯಾರು ಎಂಬಲ್ಲಿರುವ ಖಾಸಗೀಯವರ ಸುಮಾರು ೩೪ ಎಕರೆ ಜಾಗದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟ್ ನರ‍್ಮಿಸುವ ಉದ್ದೇಶ ಹೊಂದಿದ್ದು, ಇಲ್ಲಿ ಪ್ಲಾಂಟ್ ನರ‍್ಮಿಸಿದರೆ ಪರಿಸರ ಮಾಲಿನ್ಯವಾಗುವುದರ ಜತೆಗೆ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಅಲ್ಲದೇ ಬೇರೆ ಊರಿನಿಂದ ಇಲ್ಲಿಗೆ ಬರುವ ಕರ‍್ಮಿಕರಿಂದ ಸ್ಥಳೀಯರಿಗೆ ತೊಂದರೆಯಾಗಲಿದೆ ಮತ್ತು ಸ್ವಚ್ಛತೆಯ ಸಮಸ್ಯೆ ಎದುರಾಗಲಿದೆ ಎಂದು ಸ್ಥಳೀಯರು ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ, ಉಪಾಧ್ಯಕ್ಷೆ ಪ್ರೇಮಾ, ಪಂಚಾಯತ್ ಸದಸ್ಯರುಗಳು ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಕುಮಾರ್ ಎಂ.,ಶಕ್ತಿ ಕೇಂದ್ರದ ಅಧ್ಯಕ್ಷ ರಾಮಚಂದ್ರ,ಕುಶಾಲ್ ಕುಮಾರ್ ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *