ಬಂಟ್ವಾಳ:ಇಲ್ಲಿನ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ನಿವೃತ್ತ ಯೋಧ ಐವನ್ ಮಿನೇಜಸ್ ಇವರನ್ನು ಬುಧವಾರ ಸಂಜೆ ಸನ್ಮಾನಿಸಿದರು. ಇದೇ ವೇಳೆ ಪತ್ರಿಕಾ ದಿನಾಚರಣೆ ಪ್ರಯುಕ್ತ ಸ್ಥಳೀಯ ಪತ್ರಕರ್ತರಾದ ರತ್ನದೇವ್ ಪುಂಜಾಲಕಟ್ಟೆ, ಸಂದೀಪ್ ಸಾಲ್ಯಾನ್, ಮೋಹನ್ ಕೆ. ಶ್ರೀಯಾನ್ ರಾಯಿ ಇವರನ್ನು ಸನ್ಮಾನಿಸಲಾಯಿತು.
ಕ್ಲಬ್ಬಿನ ಅಧ್ಯಕ್ಷ ರಾಘವೇಂದ್ರ ಭಟ್, ಕಾರ್ಯದರ್ಶಿ ರಮೇಶ್ ನಾಯಕ್ ರಾಯಿ, ಪೂರ್ವಾಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಅಂತೋನಿ ಸಿಕ್ವೇರಾ, ಸ್ಥಾಪಾಕಾಧ್ಯಕ್ಷ ಅವಿಲ್ ಮಿನೇಜಸ್, ವಕೀಲ ಸುರೇಶ ಶೆಟ್ಟಿ ಮತ್ತಿತರರು ಇದ್ದರು.
