ಕೈಕಂಬ : ಪ್ರಸಕ್ತ ಕೊರೋನಾ ಪ್ರಕ್ಷಬ್ಧ ಕಾಲದಲ್ಲಿ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ಸಮಸ್ಯೆಯಾಗಿದ್ದರೆ, ಇತ್ತ ಗ್ರಾಹಕರಿಗೆ ಅಡುಗೆ ಗ್ಯಾಸ್ ಸಿಲಿಂಡರ್ ದರ ಸುಲಿಗೆ ಸಮಸ್ಯೆ ಬೆಂಬಿಡದೆ ಕಾಡುವಂತಾಗಿದೆ.gur-may-23-rashidi(25 rs)

ಅಡುಗೆ ಅನಿಲ ದರ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣಗಳು ಹಲವಿರಬಹುದು. ಆದರೆ ಸಿಲಿಂಡರ್ ವಿತರಕ ಸಂಸ್ಥೆಗಳು ಸುಲಿಗೆಗಾಗಿ ಹೊಸ ವಿಧಾನ ಕಂಡುಕೊಂಡಿದೆ ಎಂದು ಗುರುಪುರದ ಎಚ್‍ಪಿ ಗ್ಯಾಸ್ ಗ್ರಾಹಕರು ದೂರಿದ್ದಾರೆ.

ಕುಲಶೇಖರ ಕಲ್ಪನೆಯ ಕರಾವಳಿ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ವಿತರಿಸುತ್ತಿರುವ ಅಡುಗೆ ಅನಿಲ ಸಿಲಿಂಡರ್‍ನಲ್ಲಿ ಭಾರೀ ಮೋಸವಾಗುತ್ತಿದೆ. ಸಿಲಿಂಡರ್ ಪೇ-ಸ್ಲಿಪ್‍ನ(ರಶೀದಿ) ಮೇಲ್ಗಡೆ 20/35/35/40 ರೂಪಾಯಿ ಹೆಚ್ಚುವರಿ ಮೊತ್ತ ನಮೂದಿಸಲಾದ(ರಬ್ಬರ್ ಸ್ಟಾಂಪ್ ಮುದ್ರೆ) ರಶೀದಿ ನೀಡುವ ಡೆಲಿವರಿ ಬಾಯ್, ಸಾಗಾಟದ ದರ ಎಂದು ಪುನಾ 20/25 ರೂ ವಸೂಲಿ ಮಾಡುತ್ತಿದ್ದಾನೆ. ಈ ಬಗ್ಗೆ ಗ್ರಾಹಕರು ಪ್ರಶ್ನಿಸಿದರೆ, “ಸಿಲಿಂಡರ್‍ನ ಮೂಲಬೆಲೆ, ಹೆಚ್ಚುವರಿ ಮೊತ್ತ ಹಾಗೂ ಡೆಲಿವರಿ ಮೊತ್ತ ವಸೂಲಿ ಮಾಡಲು ನಮಗೆ ಏಜೆನ್ಸಿ ಸೂಚಿಸಿದೆ” ಎಂದು ಡೆಲಿವರಿ ಬಾಯ್ ಉತ್ತರಿಸುತ್ತ ಜಗಳಕ್ಕೆ ನಿಲ್ಲುತ್ತಾನೆ.

ಶನಿವಾರ ಗುರುಪುರ ಕೊಳದಬದಿಯಲ್ಲಿ ಮಂಗಳೂರು ನಗರ ಉತ್ತರ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಜಿ ಕೆ ಸಂದೀಪ್ ಅವರು ಕರಾವಳಿ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್‍ನ ಅವ್ಯವಹಾರದ ಬಗ್ಗೆ ನೇರವಾಗಿ ಎಚ್‍ಪಿ ಕಂಪೆನಿಗೆ ದೂರಿಕೊಂಡರು. ತಕ್ಷಣ ಪ್ರತಿಕ್ರಿಯಿಸಿದ ಕಂಪೆನಿ, `ರಶೀದಿಯಲ್ಲಿ ನಮೂದಿಸಿ ಮೂಲಬೆಲೆಗಿಂತ ಹೆಚ್ಚು ಹಣ ನೀಡಬೇಡಿ” ಎಂದು ದೂರುದಾರರಿಗೆ ಉತ್ತರಿಸಿದರೆ, ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್‍ಗೆ ಎಚ್ಚರಿಕೆ ನೀಡಿ ಈ-ಮೇಲ್ ಸಂದೇಶ ರವಾನಿಸಿತು.

ವರ್ಷಗಳಿಂದ ನಿರಂತರ ಗ್ರಾಹಕರಿಗೆ ಮೋಸ ಮಾಡುತ್ತ ಬಂದಿರುವ ಕರಾವಳಿ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ವಿರುದ್ಧ ದೂರಿದರೆ, ಬೆದರಿಕೆಯೊಡ್ಡುತ್ತಿದೆ. ಆದರೆ ಈ ಬಾರಿ ಡೆಲಿವರಿ ಬಾಯ್ ರಶೀದಿಯಲ್ಲಿ ನಮೂದಿಸಿದ ಮೂಲಬೆಲೆ ಸ್ವೀಕರಿಸಿ ತೆಪ್ಪಗೆ ಮರಳಿದ. ಈ ಗ್ಯಾಸ್ ಡಿಸ್ಟ್ರಿಬ್ಯೂಟರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಮತ್ತು ಗ್ಯಾಸ್ ವಾಹನ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಗುರುಪುರ ಎಚ್‍ಪಿ ಗ್ಯಾಸ್ ಗ್ರಾಹಕರು ಎಚ್ಚರಿಕೆ ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *