ಬಂಟ್ವಾಳ:ಸರ್ಕಾರಿ ನೌಕರರ ಸಂಘದ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ರಾಯಿ ನಿವಾಸಿ ಹೇಮಾ ಮನೋಹರ ಗಾಣಿಗ ಇವರು 200 ಮೀ.ಓಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ಗಳಿಸಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಮಂಗಳೂರು ಪಣಂಬೂರು ಇಎಸ್ಐ ಆಸ್ಪತ್ರೆ ಶುಶ್ರೂಷಕಿಯಾಗಿದ್ದು, ಕೋವಿಡ್ ವಾರಿಯರ್ಸ್ ಆಗಿ ಗುರುತಿಸಿಕೊಂಡಿದ್ದರು.
