ಪೊಳಲಿ: ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಮಣಿಕಂಠ ಭಜನಾ ಮಂದಿರದ ೧೫ನೇ ವರ್ಷದ ಭಜನಾ ಸಂಕೀರ್ತನೆಗೆ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ದೀಪಪ್ರಜ್ವಲನೆ ಗೊಳಿಸಿ ಭಜನೆಯ ಮೂಲಕ ಸನಾತನ ಧರ್ಮವನ್ನು ಎಲ್ಲರಿಗೂ ಪಸರಿಸುವಂತಾಗಬೇಕು ಆಧ್ಯತ್ಮಿಕ ಶಕ್ತಿಯಿಂದ ದುಶ್ಚಟಗಳು ದೂರವಾಗಲು ಭಜನೆಯಿಂದ ಮಾತ್ರ ಸಾಧ್ಯ ಎಂದು ತಮ್ಮ ಆಶೀರ್ವಚನದಲ್ಲಿ ನುಡಿದರು.4vpmanikanta

ಪುತ್ತೂರು ಜಿಲ್ಲಾ ಸಂಘ ಚಾಲಕರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಮಾತನಾಡಿ ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರನಿರ್ಮಾಣ ಆಗಲು ಶ್ರೀ ರಾಮನ ನಾಮಸ್ಮರಣೆಯಿಂದ ಸಾಧ್ಯವೋ ಹಾಗೇಯೆ ಮಣಿಕಂಠಪುರದಲ್ಲಿ ೧೫ ವರ್ಷಗಳಿಂದ ಭಜನಾ ಸಂಕೀರ್ತನೆ ನಡೆದ ಈ ಜಾಗದಲ್ಲಿ ಅಯ್ಯಪ್ಪನ ಭವ್ಯ ಮಂದಿರ ನಿರ್ಮಾಣಗೊಳ್ಳಲಿ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಂದಿರದ ಗುರುಸ್ವಾಮಿ ಬಾಬು ಪೂಜಾರಿ, ಮಹಬಲ ಸುವರ್ಣ, ಗೋಪಾಲ ಪೂಜಾರಿ, ಜಯಂತ , ದಯಾನಂದ, ತಾರನಾಥ, ರೋಕ್ಷಿತ್ ,ಸೇವಂತ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಮಣಿಕಂಠ ಭಜನಾ ಮಂಡಳಿಯವರಿಂದ ಭಜನೆ ಪ್ರಾರಭಗೊಂಡಿತು.

By suddi9

Leave a Reply

Your email address will not be published. Required fields are marked *