ಮೂಡುಬಿದಿರೆ: ಶ್ರೀಕ್ಷೇತ್ರ ನೆಲ್ಲಿತೀರ್ಥ ಶ್ರೀಸೋಮನಾಥೇಶ್ವರ ಗುಹಾಲಯದಲ್ಲಿ ಜನವರಿ 3ವರೆಗೆ ನಡೆಯಲಿರುವ ವರ್ಷಾವಧಿ ಮಹೋತ್ಸವವು ಮಂಗಳವಾರ ಆರಂಭಗೊಂಡಿದೆ.

ಮಂಗಳವಾರದಂದು ಶ್ರೀದೇವರಿಗೆ ನವಕಲಶಾಭೀಷೇಕ, ಮಹಾಗಣಪತಿ ಹೋಮ, ಧ್ವಜಾರೋಹಣ, ಮಹಾಪೂಜೆ, ಹರಕೆ ಸೇವೆಗಳು, ಉತ್ಸವ ಬಲಿ ನಡೆಯಿತು.
ಡಿಸೆಂಬರ್ 30ರಂದು ವಿಶೇಷ ಹುಣ್ಣಿಮ್ಮೆ ತೀರ್ಥಸ್ನಾನ ಪ್ರಾರಂಭವಾಗಲಿದ್ದು, ಸಾಯಂಕಾಲ ದೀಪಾರಾಧನೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಡಿಸೆಂಬರ್ 31ರಂದು ಹಗಲು ರಥೋತ್ಸವ, ಪಲ್ಲಕ್ಕಿ ಸೇವೆ ನಡೆಯಲಿದೆ. ಜನವರಿ 1ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ, ಶ್ರೀ ವಾಘ್ರಚಾಮುಂಡಿ ದೈವದ ಭೇಟಿ, ಬಟ್ಟಲು ಕಾಣಿಕೆ, ಪಲ್ಲಪೂಜೆ ಹಾಗೂ ಡಿಸೆಂಬಬರ್ 2 ಹಾಗೂ 3ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

By Suddi9 Author

Suddi9

Leave a Reply

Your email address will not be published. Required fields are marked *