ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಬಜರಂಗದಳ ಪುತ್ತೂರು ಜಿಲ್ಲಾ ‘ಗೋರಕ್ಷಕರ ಅಭ್ಯಾಸವರ್ಗ’ ಉಪ್ಪಿನಂಗಡಿಯ ನಟ್ಟಬೈಲು ಶ್ರೀ ರಾಮ ಶಾಲಾ ಸಭಾಂಗಣದಲ್ಲಿ ನಡೆಯಿತು. ಸುಳ್ಯ,ಪುತ್ತೂರು,ಕಡಬ,ವಿಟ್ಲ,ಬಂಟ್
ಕಾನೂನುಬದ್ದವಾಗಿ ಗೋರಕ್ಷಣೆ ಹೇಗೆ ಮಾಡಬಹುದು ಎಂಬ ವಿಷಯದ ಕುರಿತು ನ್ಯಾಯವಾದಿ ಅಗರ್ತ ಸುಬ್ರಹ್ಮಣ್ಯ ಭಟ್ ,ಗೋವಿನ ಮೇಲಿನ ಪ್ರೀತಿ,ಶೃದ್ಧೆ ಹೇಗಿರಬೇಕು ಎಂಬ ವಿಷಯದ ಕುರಿತು ಗೋರಕ್ಷ ಪ್ರಾಂತೀಯ ಕಾರ್ಯಕರ್ತ ದಿನೇಶ್ ಪೈ ಕಟೀಲ್ ಅವರು ಮಾಹಿತಿ ನೀಡಿದರು. ವಿ.ಹಿಂ.ಪ.ನ ಜಿಲ್ಲಾಧ್ಯಕ್ಷ ಕೃಷ್ಣಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ವಿ.ಹಿಂ.ಪ.ಗೋರಕ್ಷಾ ಪ್ರಮುಖರಾದ ಸರಪಾಡಿ ಆಶೋಕ ಶೆಟ್ಟಿ,ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್.,ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ,ಸಹಕಾರ್ಯದರ್ಶಿ ನವೀನ್ ನೆರಿಯ,ಬಜರಂಗದಳ ಗೋರಕ್ಷಾ ಪ್ರಮುಖ ಮಹೇಶ್ ಬಜತ್ತೂರು ಉಪಸ್ಥಿತರಿದ್ದರು.
