ಬಂಟ್ವಾಳ: ಪುದು ಗ್ರಾಮದಲ್ಲಿ ಕೋವಿಡ್-೧೯ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಫರಂಗಿಪೇಟೆ ಸೇರಿದಂತೆ ಗ್ರಾಮ ವ್ಯಾಪ್ತಿಯಲ್ಲಿ ಜು.10 ರಿಂದ ಮಧ್ಯಾಹ್ನದ ಬಳಿಕ   ಸ್ವಯಂಪ್ರೇರಿತ ಬಂದ್ ಮಾಡಲು ನಿರ್ಧರಿಸಲಾಗಿದೆ.ಬುಧವಾರ ಪುದು ಗ್ರಾಪಂ ನ ಸಭಾಂಗಣದಲ್ಲಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
0807ks1 ph

ಜು. ೧೦ರಿಂದ ಬೆಳಗ್ಗೆ ೬ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿದ್ದು,  ಈಬಗ್ಗೆ ವಾಡ್೯ಗಳಲ್ಲಿ ಪ್ರಚಾರ ನಡೆಸಲು ಆಯಾಯಾ ವಾಡ್೯ ನ ಸದಸ್ಯರಿಗೆ ಜವಾಬ್ದಾರಿ ನೀಡಲಾಯಿತು.   ಗ್ರಾಮ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಹೀಗಾಗಿ ಸ್ವಯಂಪ್ರೇರಿತ ಬಂದ್‌ನ ತೀರ್ಮಾನ ಕೈಗೊಳ್ಳಲಾಗಿದೆ, ರಿಕ್ಷಾ ಯೂನಿಯನ್‌ನವರು, ವರ್ತಕರು ಈಗಾಗಲೇ  ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ಗ್ರಾ.ಪಂ.ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ ಭಾಸ್ಕರ್ ರೈ, ಎಂ.ಹುಸೇನ್, ಇಕ್ಬಾಲ್ ಸುಜೀರ್, ನಝೀರ್ ಕುಂಜರ್ಕಳ, ರಿಯಾಜ್ ಕುಂಪನಮಜಲು, ಝಾಹೀರ್ ಕುಂಪನಮಜಲು, ಮುಸ್ತಾಫಾ ಅಮ್ಮೆಮಾರ್, ಮನೋಜ್ ಆಚಾರ್ಯ ನಾಣ್ಯ, ಸಂತೋಷ್ ನೆತ್ತರಕೆರೆ, ಮೊಹಮ್ಮದ್ ಫರಂಗಿಪೇಟೆ, ಕಿಶೋರ್‌ಕುಮಾರ್, ಗ್ರಾ.ಪಂ.ಅಭಿವೃದ್ಧಿ ಅಽಕಾರಿ ಆನಂದ್, ಗ್ರಾಮ ಲೆಕ್ಕಿಗ ಬಾಲಕೃಷ್ಣ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *