ಕೈಕಂಬ :ಗುರುಪುರ ಕೈಕಂಬದ ರೋಸಾ ಮಿಸ್ತಿಕಾ ಪ್ರೌಢ ಶಾಲೆಯಲ್ಲಿ ಜೂ. 5ರಿಂದ ಜುಲೈ 3ರವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂದರ್ಭದಲ್ಲಿ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಿದ ಗುರುಪುರ, ಕಂದಾವರ ಮತ್ತು ಗಂಜಿಮಠ ಪಂಚಾಯತ್ ಆಡಳಿತ ವರ್ಗ ಹಾಗೂ ಪರೀಕ್ಷಾರ್ಥಿಗಳ ಆರೋಗ್ಯ ತಪಾಸಣೆ, ಥರ್ಮಲ್ ಸ್ಕ್ರೀನಿಂಗ್, ಅಂತರ ಕಾಯ್ದುಕೊಳ್ಳುವಿಕೆಯಲ್ಲಿ ಸಹಕರಿಸಿದ ಗಂಜಿಮಠ ಆರೋಗ್ಯ ಕೇಂದ್ರದ ಸಿಬ್ಬಂದಿ, ಕೌಂಟರ್‍ಗಳಲ್ಲಿ ಕೆಲಸ ನಿರ್ವಹಿಸಿದ ಆಶಾ ಕಾರ್ಯಕರ್ತೆಯರು, ಗೈಡ್ಸ್ ಶಿಕ್ಷಕರನ್ನು ಜು. 3ರಂದು ಮಧ್ಯಾಹ್ನ ಶಾಲಾ ಮುಖ್ಯ ಶಿಕ್ಷಕಿ ಲೊಲಿಟಾ ಪಿರೇರ ಗೌರವಿಸಿ, ಕೃತಜ್ಞತೆ ಸಲ್ಲಿಸಿದರು.gur-july-3-rosa mistica

By suddi9

Leave a Reply

Your email address will not be published. Required fields are marked *