ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆರಂಭಗೊಂಡ ‘ವಾರ್ಷಿಕ ವಿಶೇಷ ಶಿಬಿರ’ವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಮಧುಕರ ಬಂಗೇರ, ಪ್ರಾಂಶುಪಾಲೆ ಕೆ.ಸರಸ್ವತಿ ಭಟ್, ಮುಖ್ಯಶಿಕ್ಷಕ ಶಮಂತ್, ಕೆ.ರಮೇಶ ನಾಯಕ್ ರಾಯಿ ಮತ್ತಿತರರು ಇದ್ದರು. 
