ಬಂಟ್ವಾಳ: ದುಷ್ಕರ್ಮಿಗಳು ಕೋತಿಯ ಸೊಂಟಕ್ಕೆ ಬೆಲ್ಟ್ ತೊಡಿಸಿದ ಅಮಾನವೀಯ ಘಟನೆ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನ ದ ವಠಾರದಲ್ಲಿ ನಡೆದಿದ್ದು ಮಂಗಳವಾರ ಬೆಳಕಿಗೆ ಬಂದಿದೆ.

ದೇವಸ್ಥಾನ ದ ಕೆಳಭಾಗದಲ್ಲಿರುವ ಗದಾ ತೀರ್ಥಕೆರೆಯ ರಥ ಬೀದಿಯಲ್ಲಿ ಈ ಕೋತಿ ಕಂಡು ಬಂದಿದ್ದು, ಸುಮಾರು ಏಳೆಂಟು ದಿನಗಳ ಹಿಂದೆ ಬೆಲ್ಟ್ ತೊಡಿಸಿರಬೇಕೆಂದು ಸ್ಥಳೀಯರು ಶಂಕಿಸಿದ್ದಾರೆ. ಈ ಬಗ್ಗೆ ದೇವಸ್ಥಾನ ದ ಮೇನೇಜರ್ ಸತೀಶ್ ಪ್ರಭು ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
