ಕುಪ್ಪೆಪದವು: ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿಯಾದ ಘಟನೆ ಕುಪ್ಪೆಪದವು ಸಮೀಪದ ಕೆಂಪುಗುಡ್ಡೆ ಎಂಬಲ್ಲಿ ಬುಧವಾರ ಮುಂಜಾನೆ ನಡೆದಿದೆ. ಇಲ್ಲಿನ ನಿವಾಸಿ ಗೋಪಾಲಕೃಷ್ಣ ಎಂಬವರ ಮನೆಯ ಮೇಲೆ ಮುಂಜಾನೆ ಸುಮಾರು ನಾಲ್ಕೂವರೆ ಗಂಟೆಗೆ ಮನೆಯ ಪಕ್ಕದಲ್ಲಿದ್ದ ಹೈ ಟೆನ್ಶನ್ ವಿದ್ಯುತ್ ತಂತಿಗಳಿದ್ದ ವಿದ್ಯುತ್ ಕಂಬ ಏಕಾಏಕಿ ಮಗುಚಿ ಬಿದ್ದಿದೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದ ಕಾರಣ ಯಾವುದೇ ಅನಾಹುತ ಆಗಿಲ್ಲ.
ಮನೆಯ ಹೆಂಚು, ಪಕ್ಕಾಸುಗಳಿಗೆ ಹಾನಿಯಾಗಿದ್ದು ಸುಮಾರು 70 ಸಾವಿರ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಕಿಲೆಂಜಾರು ಗ್ರಾಮಕರಣಿಕರು, ಎಡಪದವು ಮೆಸ್ಕಾಂ ಜೆ.ಇ.ಸ್ಥಳಕ್ಕೆ ಭೇಟಿ ನೀಡಿದ್ದು, ವಿದ್ಯುತ್ ಕಂಬ ತೆರವು ಕಾರ್ಯ ನಡೆಸಲಾಗಿದೆ.
