ಕೈಕಂಬ:ಹಲವಾರು ವರ್ಷಗಳ ಹಿಂದೆ ಪ್ರಚಲಿತ ಗೋಲಿ ಸೋಡಾ ಈಗ ಅಪೂರ್ವವೆಂಬಂತೆ ಒಂದೆರಡು ಕಡೆಗಳಲ್ಲಿ ಕುಡಿಯಲು ಸಿಗುತ್ತದೆ. ಯುವ ಪೀಳಿಗೆಗೆ ಗೋಲಿ ಸೋಡಾದ ಬಗ್ಗೆ ಏನೇನೂ ಗೊತ್ತಿಲ್ಲ. ಅದೇನೇ ಇದ್ದರೂ ತಿಳಿದವರು ವಿವರಿಸಬೇಕು. 25 ವರ್ಷಗಳ ಹಿಂದೆ ಗುರುಪುರ ಕುಕ್ಕುದಕಟ್ಟೆಯಲ್ಲಿ ಗೋಲಿ ಸೋಡಾ ಮಾಡುತ್ತಿದ್ದ ಬೂಬ ಪೂಜಾರಿಯವರು ಗುರುಪುರ, ಪರಾರಿ, ಉಳಾಯಿಬೆಟ್ಟು, ಪೆರ್ಮಂಕಿ ಸುತ್ತಲ ಪ್ರದೇಶಗಳ ಅಂಗಡಿಗಳಿಗೆ ಸೈಕಲ್ ತುಳಿದು ಸೋಡಾ ಇಡುತ್ತಿದ್ದರು. ಆಗ ಇವರು ದಿನಕ್ಕೆ 500ರಿಂದ 600 ಸೋಡಾ ತಯಾರಿಸುತ್ತಿದ್ದರು. ಇವರು ನಿಧನರಾಗುವುದಕ್ಕಿಂತ ಸುಮಾರು 15 ವರ್ಷ ಮುಂಚೆ ಸೋಡಾ ವ್ಯಾಪಾರ ಮುಚ್ಚಿದ್ದರು. ಆಧುನಿಕತೆಯ ಭರಾಟೆಯಿಂದ ಗೋಲಿ ಸೋಡಾ ತೆರೆಮರೆಗೆ ಸರಿಯುತ್ತಲೇ ಗ್ರಾಹಕರು ಇತರ ಎಸೆನ್ಸ್(ಕಲರ್) ಪಾನೀಯಗಳಿಗೆ ಮೊರೆ ಹೋಗಿದ್ದರು. ಅಚ್ಚರಿಯೆಂದರೆ, ಈಗ ಗುರುಪುರದಲ್ಲಿ ಮತ್ತೆ ಗೋಲಿ ಸೋಡಾ ಫ್ಯಾಕ್ಟರಿಯೊಂದು ಆರಂಭಗೊಂಡಿದೆ. ಬಿಕರ್ಣಕಟ್ಟೆ ಕೈಕಂಬದಲ್ಲಿ ಇಂತಹದೊಂದು ಫ್ಯಾಕ್ಟರಿ ಇದೆ.gur-may-22-goli soda-1

ವಾಮಂಜೂರಿನ ಮನ್ಸೂರ್ ಎಂಬವರು ಗುರುಪುರ ಅಲೈಗುಡ್ಡೆಯಲ್ಲಿ ಇತ್ತೀಚೆಗೆ ಗೋಲಿ ಸೋಡಾ ಫ್ಯಾಕ್ಟರಿ ಆರಂಭಿಸಿದ್ದಾರೆ. ಇವರು ಗುರುಪುರ, ಕೈಕಂಬ, ಪರಾರಿ ಸುತ್ತಲ ಪ್ರದೇಶಕ್ಕೆ ಝಿಂಜರ್, ಆರೆಂಜ್, ಪನೀರ್, ಜೀರ ಹಾಗೂ ನನ್ನಾರಿ ಎಂಬ ನಾಲ್ಕು ಬಗೆಯ ಗೋಲಿ ಸೋಡಾ ಮಾರಾಟ ಮಾಡುತ್ತಿದ್ದಾರೆ. “ಎಲ್ಲೆಡೆ ಗೋಲಿ ಸೋಡಾಕ್ಕೆ ಉತ್ತಮ ಬೇಡಿಕೆ ಇದೆ. ಎಸೆನ್ಸ್ ಮಿಶ್ರಿತ ಪಾನೀಯಗಳಿಗಿಂತ ಸೋಡಾ ಗ್ಯಾಸ್ ಬಳಸಿ ಶುಂಠಿಯಿಂದ(ಝಿಂಜರ್) ಮಾಡುವ ಗೋಲಿ ಸೋಡಾ ಆರೋಗ್ಯಕ್ಕೆ ಉತ್ತಮ. ಆದ್ದರಿಂದ ನಾವು ಗುರುಪುರ ಸುತ್ತಲ ಪ್ರದೇಶದ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಗೋಲಿ ಸೋಡಾ ತಯಾರಿಸಿ ಮಾರಾಟ ಮಾಡುತ್ತಿದ್ದೇವೆ” ಎಂದು ಮನ್ಸೂರ್ ಹೇಳುತ್ತಾರೆ

By suddi9

Leave a Reply

Your email address will not be published. Required fields are marked *