ಬಂಟ್ವಾಳ:ಪ್ರಪಂಚದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪತ್ರಿಕೆ ಹಾಗೂ ಮಾಧ್ಯಮ ವರ್ಗದವರಿಗೆ ಬಹುದೊಡ್ಡ ಸ್ಥಾನವಿದೆ. ಅವರೊಂದಿಗೆಆಚರಿಸುತ್ತಿರುವ ಈ ರಕ್ಷಾಬಂಧನವು ಬಹುಮಹತ್ವವನ್ನು ಪಡೆದಿದೆ. ರಕ್ಷೆಯ ಹಿಂದಿರುವುದು ಸಂಘಟನೆಯ ಭಾವನೆಯೇ ಹೊರತು ಮತ್ತೇನೂ ಅಲ್ಲ ಎಂದು ಪುತ್ತೂರುವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ನುಡಿದರು.IMG-20190816-WA0078

ಶ್ರೀರಾಮ ಪದವಿಪೂರ್ವ ಮತ್ತು ಪದವಿ  ಕಾಲೇಜಿನಲ್ಲಿ ಶುಕ್ರವಾರ  ಪತ್ರಕರ್ತರೊಂದಿಗೆ  ರಕ್ಷಾಬಂಧನ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸ್ತುತ ರಕ್ಷಾಬಂಧನದ ಆಚರಣೆಯ ಅನಿವಾರ್ಯತೆಯನ್ನು ನೆನಪಿಸಿ ನಮ್ಮ ಧರ್ಮ, ಸಂಸ್ಕೃತಿ, ಆಚರಣೆ, ವಿಜ್ಞಾನ, ಯೋಚನಾ ಶೈಲಿ ಹಾಗೂ ನಡವಳಿಕೆಗಳು ಎಲ್ಲಿದಾರಿ ತಪ್ಪಿದೆ ಎಂಬುದನ್ನು ವಿವರಿಸುವುದರ ಜೊತೆಗೆ ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು.IMG-20190816-WA0078

ಬಂಟ್ವಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಇತಿಹಾಸ ಪುರಾಣದಿಂದಲೇ ರಕ್ಷೆಯು ಮಹತ್ತ್ವವನ್ನು ಪಡೆದಿದ್ದು, ಇದು ಬಾಂಧವ್ಯವನ್ನು ಜೋಡಿಸುವುದರೊಂದಿಗೆ ಜೀವದಾನದಂತಹ ಕೊಡುಗೆಯನ್ನು ನೀಡುವ ಶಕ್ತಿ ರಕ್ಷೆಗಿದೆ ಎಂದರು.        ಈ ಸಂದರ್ಭ ಮಾತನಾಡಿದ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮಾತನಾಡಿ ರಕ್ಷಾಬಂಧನದಿಂದ ಯುವ ಶಕ್ತಿಗಳಲ್ಲಿ ಸನ್ನಡತೆ, ಸನ್ಮಾರ್ಗವನ್ನು ಮೂಡಿಸುವುದು ಮತ್ತು ಅಖಂಡ ಭಾರತದ ಪರವಾಗಿ ಚಿಂತಿಸುವ ಕಾರ್ಯವನ್ನು ಮಾಡುವುದು ಎಂದರು.

ಬಂಟ್ವಾಳ ತಾಲೂಕು ಕಾರ್ಯನಿರತ  ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಮಾತನಾಡಿ ರಕ್ಷೆಯು ಪರಸ್ಪರರಿಗೆ ರಕ್ಷಣೆಯನ್ನು ಮತ್ತು ಅಭಯವನ್ನು ನೀಡುವುದು. ದೇಶದ ಒಳಗಿನ ಮತ್ತು ಹೊರಗಿನ ಶತ್ರುಗಳ ಎದುರಿಸುವ ಶಕ್ತಿ ರಕ್ಷಾಬಂಧನದಿಂದ ಆಗಲಿ ಎಂದರು.

ಹಿರಿಯರಿಂದ ಆರತಿ ಬೆಳಗಿ ತಿಲಕ ಇಟ್ಟು, ಅಕ್ಷತೆ ಹಾಕಿ ಶಾಲುಹೊದಿಸಿ ಪತ್ರಕರ್ತರನ್ನು     ಗೌರವಿಸಲಾಯಿತು.ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಪತ್ರಕರ್ತಬಂಧುಗಳಿಗೆ ರಕ್ಷೆ ಕಟ್ಟಿ ಸಿಹಿ ಹಂಚಿದರು. ಈ ಸಂಧರ್ಭದಲ್ಲಿ ಕಾಲೇಜಿನ ೧೦೦೦ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದ ಪರಸ್ಪರ ರಕ್ಷೆಯನ್ನು ಕಟ್ಟಿ ಸಿಹಿ ತಿನ್ನಿಸಿಶುಭಾಶಯ ಕೋರಿದರು. 

ಹೊಸದಿಗಂತದ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಪತ್ರಕರ್ತರಾದಜಿತೇಂದ್ರ ಕುಂದೇಶ್ವರ, ವೆಂಕಟೇಶ ಬಂಟ್ವಾಳ, ಮೋಹನ್ ಕೆ. ಶ್ರಿ ಯಾನ್, ಸಂದೀಪ್ ಸಾಲ್ಯಾನ್, ಶ್ಯಾಮ್‌ಸುದರ್ಶನ ಹೊಸಮೂಲೆ, ರತ್ನದೇವ್ ಪೂಂಜಾಲಕಟ್ಟೆ,ಯಾದವ ಅಗ್ರಬೈಲ್, ಕಿಶೋರ್ ಪೆರಾಜೆ, ಚಂದ್ರಶೇಖರ ಕಲ್ಮಲೆ, ರಾಷ್ಟ್ರಸೇವಿಕಾ ಸಮಿತಿಯ ಹೊಯ್ಸಳ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ ಕಮಲಾ ಪ್ರಭಾಕರಭಟ್, ಪ.ಪೂರ್ವ ಕಾಲೇಜಿನ ಪ್ರಾಂಶುಪಾಲ ವಸಂತ ಬಲ್ಲಾಳ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಪದವಿ ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಪ್ರಸ್ತಾವನೆಗೈದು, ಸ್ವಾಗತಿಸಿ, ವಿದ್ಯಾರ್ಥಿಗಳಾದ  ಹರ್ಷಿತಾ ವಂದಿಸಿ, ಸುಭಾಷಿಣಿಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *