
ದೆಹಲಿ: ಗೂಗಲ್ ಭಾರತೀಯ ಪೇಜ್ನಲ್ಲಿ ಇಂದು ಭಾರತದ ಗಾನಕೋಗಿಲೆ(ನೈಟಿಂಗೇಲ್) ಎಂದೇ ಪ್ರಸಿದ್ಧರಾಗಿರುವ ದಿ. ಸರೋಜಿನಿ ನಾಯ್ಡು ಅವರ 135ನೇ ಹುಟ್ಟುಹಬ್ಬದ ಪ್ರಯುಕ್ತ ತನ್ನ ಚಿಹ್ನೆಯಲ್ಲಿ ಆಕೆಯ ಮುಖವನ್ನು ಅಂಟಿಸುವ ಮೂಲಕ ಗೌರವ ಸಲ್ಲಿಸಿದೆ.
ಒಬ್ಬ ಕವಯಿತ್ರಿ, ಸ್ವಾತಂತ್ರ ಹೋರಾಟಗಾತಿ ಮತ್ತು ಸಮಾಜ ಸೇವಕಿಯಾಗಿದ್ದ ನಾಯ್ಡು ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು. ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅವರು ಜಲಿಯನ್ವಾಲಾ ಬಾಗ್ ಘಟನೆಯಿಂದ ಮನನೊಂದು ಕವಿತೆಗಳನ್ನು ಬರೆಯುವುದನ್ನೇ ಬಿಟ್ಟಿದ್ದರು. 1949ರ ಮಾಚರ್್ 2ರಂದು ಹೃದಯಾಘಾತದ ಕಾರಣ ಅವರು ಮೃತಪಟ್ಟಿದ್ದರು. ಆಕೆಯ ಕವಿತೆಗಳಿಗೆ ಗೌರವ ಸೂಚಿಸುವ ಸಲುವಾಗಿ ಗೂಗಲ್ ತನ್ನ ಚಿಹ್ನೆಯಲ್ಲಿ ಒಂದು ಪೆನ್ನನ್ನು ಕೂಡಾ ಚಿತ್ರಿಸಿದೆ
