ವಾಮಂಜೂರು : ವಾಮಂಜೂರಿನ ಶ್ರೀ ಕ್ಷೇತ್ರ ಅಮೃತೇಶ್ವರ ದೇವಸ್ಥಾನಕ್ಕೆ ಭಕ್ತರು ನೀಡಿರುವ ನೂತನ ಚಂದ್ರಮಂಡಲ ರಥ ಸಮರ್ಪಣೆ ಕಾರ್ಯಕ್ರಮ ಎ. 12ರಂದು ಜರುಗಲಿದೆ. ಎ.11ರಂದು ಸಂಜೆ 6ಕ್ಕೆ ದೇವತಾ ಪ್ರಾರ್ಥನೆ, ವಾಸ್ತುಬಲಿ, ರಥಾಧಿವಾಸ ಹೋಮ ಹಾಗೂ ಎ. 12ರಂದು ಬೆಳಿಗ್ಗೆ 8ಕ್ಕೆ ಏಕಾದಶರುದ್ರಾಭಿಷೇಕ, ಗಣಪತಿ ಹೋಮ, ಚಂದ್ರಮಂಡಲ ರಥಶುದ್ಧಿ ಕಲಶ, ಸಂಜೆ 7ಕ್ಕೆ ಬಲಿಉತ್ಸವ, ಶ್ರೀ ದೇವರ ಚಂದ್ರಮಂಡಲ ರಥೋರೋಹಣ, ಚಂದ್ರಮಂಡಲ ರಥೋತ್ಸವ ಜರುಗಲಿದೆ. ಸಂಜೆ 6ರಿಂದ ಸಭಾ ಕಾರ್ಯಕ್ರಮ ಜರುಗಲಿದೆ. ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ, ಗೋಪಾಲ ಭಟ್ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸೀತಾರಾಮ ಜಾಣುಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷ್ಣರಾಜ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಚಂದ್ರಹಾಸ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ಕುಸುಮೋದರ ಶೆಟ್ಟಿ, ಪದ್ಮನಾಭ ಕೋಟ್ಯಾನ್, ಚಿತ್ತರಂಜನ ರೈ, ಡಾ. ದಯಾಕರ ಪೂಂಜ, ಮೋಹನ ಅಮೀನ್, ನಾಗರಾಜ ಪಂಡಿತ್, ರಮೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಚಂದ್ರಮಂಡಲ ರಥದ ಶಿಲ್ಪಿ ಹರೀಶ ಆಚಾರ್ಯ ಸಂಪಿಗೆ ಅವರಿಗೆ ಸನ್ಮಾನ ಏರ್ಪಡಿಸಲಾಗಿದೆ. ಎ. 13ರಿಂದ ಎ.23ರವರೆಗೆ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಜರುಗಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಹಾಗೂ ಚಂದ್ರಮಂಡಲ ನಿರ್ಮಾಣ ಸಮಿತಿ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿಯವರ ಜಂಟಿ ಪ್ರಕಟಣೆ ತಿಳಿಸಿದೆ.


