ಪೊಳಲಿ :ಶ್ರೀಕ್ಷೇತ್ರ ಪೊಳಲಿಗೆ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ ಹಾಗೂ ಮೂಡಬಿದಿರೆಯ ಚೌಟರಸರ ಅರಮನೆಯಿಂದ ಹೊರೆಕಾಣಿಗೆ ಆಗಮಿಸಿದ್ದು, ದೇವಸ್ಥಾನದ ವತಿಯಿಂದ ಅದ್ಧೂರಿ ಸ್ವಾಗತಿಸಲಾಯಿತು.

5vp horekanike
ಪುತ್ತಿಗೆ ಹಾಗು ಚೌಟರಸರಿಗೆ ಪೊಳಲಿಗೆ ಒಂದು ರೀತಿಯ ವಿಶೇಷ ಸಂಬಂಧವಿದೆ. ಪೊಳಲಿಯ ಜಾತ್ರೆಯ ದಿನ ನಿಗದಿಪಡಿಸುವ ಮುನ್ನ ಪೊಳಲಿಯ ನಟ್ಟೋಜರು ಪುತ್ತಿಗೆ ಜೋಯಿಸರಲ್ಲಿಗೆ ತೆರಳಿ ದಿನ ನಿಗದಿ ಮಾಡಿ ಬರುತ್ತಾರೆ.

5vp horekanike ಅದೇ ರೀತಿ ಚೌಟರಸರ ಕಾಲದಲ್ಲಿ ಪೊಳಲಿ ಕ್ಷೇತ್ರವು ಅವರ ಅಧೀನಕ್ಕೆ ಒಳಪಟ್ಟಿತ್ತು. ಪುತ್ತಿಗೆ ಜ್ಯೋತಿಷಿ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಮೆರವಣಿಗೆಯಲ್ಲಿ ಆಗಮಿಸಿದ್ದು ಅವರನ್ನು ಪೊಳಲಿಯ ಅರ್ಚಕ ವೃಂದದವರು ವಿಶೇಷ ರೀತಿಯಲ್ಲಿ ಸ್ವಾಗತಿಸಿದರು.

5vp horekanike-2 5vp horekanike-3

By suddi9

Leave a Reply

Your email address will not be published. Required fields are marked *