ಪೊಳಲಿ :ಇಂದು ಮನುಜರು ಧಾರ್ಮಿಕ ಪ್ರಜ್ಞೆ ಕಳೆದುಕೊಂಡು, ಸಂಸ್ಕಾರವಿಹೀನರಾಗುತ್ತಿದ್ದಾರೆ. ಇಂತಹ ಕಳವಳಕಾರಿ ಸಂದರ್ಭಗಳಲ್ಲಿ ಬ್ರಹ್ಮಕಲಶೋತ್ಸವದಂಥಾ ಧಾರ್ಮಿಕ ಕಾರ್ಯಕ್ರಮಗಳು ಜನರಿಗೆ ಧಾರ್ಮಿಕ ಪ್ರಜ್ಞೆಯನ್ನುಂಟುಮಾಡುತ್ತಿದೆ ಎಂದು ಧಾರ್ಮಿಕ ಉಪನ್ಯಾಸಗೈದ ವೇದಮೂರ್ತಿ ಕೋಡಿಮಜಲು ಕೆ. ಅನಂತಪದ್ಮನಾಭ ಉಪಧ್ಯಾಯ ಅವರು ಹೇಳಿದರು.
ಅವರು ಮಾ.4ರಂದು ಪೊಳಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸಗೈದು ಮಾತನಾಡಿದರು.

RAN_8786
ದೇವಸ್ಥಾನಗಳು ಸಂಸ್ಕಾರವನ್ನು ಉಳಿಸುವ ಕೇಂದ್ರಗಳಾಗಿದ್ದು, ಮನುಷ್ಯ ಸತತ ದೇವಸ್ಥಾನಕ್ಕೆ ತೆರಳಿ ಸಂಸ್ಕಾವಂತನಾಗಬೇಕು ಯಾಕೆಂದರೆ ಮನುಷ್ಯನಿಗೆ ಸಂಸ್ಕಾರವೇ ಮುಖ್ಯ. ಬ್ರಹ್ಮಕಲಶೋತ್ಸವದಂಥಾ ಪುಣ್ಯ ಕಾರ್ಯಗಳಿಂದ ಸಾನಿಧ್ಯ ವೃದ್ಧಿಯಾಗುವುದರ ಜೊತೆಗೆ ಭಕ್ತರು ಭಗವಂತನ ಕೃಪೆಗೂ ಒಳಗಾಗುತ್ತಿದ್ದಾರೆ. ಬ್ರಹ್ಮಕಲಶೋತ್ಸವದ ದಿನಗಳಲ್ಲಿ ಯಾವುದೇ ಕೊರತೆಗಳು ಉಂಟಾಗದಂತೆ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಸಂಪುಟ ಶ್ರೀ ನರಸಿಂಹ ಮಠ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿ ಹರಸಿದರು.
ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಮುಖ್ಯಸ್ಥರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ದೀಪಪ್ರಜ್ವಲನೆಗೈದು ಕಾರ್ಯಕ್ರಮ ಉದ್ಘಾಟಿಸಿ ಪೊಳಲಿಯ ಬ್ರಹ್ಮಕಲಶೋತ್ಸವದ ಭಾಗ್ಯ ದೊರಕಿರುವುದು ನಮ್ಮ ಪುಣ್ಯ. ಮಾತೆ ಶ್ರೀರಾಜರಾಜೇಶ್ವರಿ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು. 4vp darmika sabeಬಂಟ್ವಾಳ ಶಾಸಕ-ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ನಾಯ್ಕ್ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಕಾರ್ಯದರ್ಶಿ-ಮೊಕ್ತೇಶರ ಯು. ತಾರನಾಥ ಆಳ್ಬ, ಡಾ| ಎಂ. ಮೋಹನ್ ಆಳ್ವ, ಚೇರ ಸೂರ್ಯನಾರಾಯಣ ರಾವ್, ರಾಜ್ಯ ವಿಧಾನ ಪರಿಷತ್ ವಿರೋóಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಂಟರ ಯಾನೆ ನಾಡವರ ಸಂಘದ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕರ್ಣಾಟಕ ಬ್ಯಾಂಕ್ ಅಧ್ಯಕ್ಷರಾದ ಪಿ. ಜಯರಾಮ್ ಭಟ್ ಪೊಳಲಿ, ಮೊಕ್ತೇಸರುಗಳಾದ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯು. ತಾರನಾಥ ಆಳ್ವ, ಶೆಡ್ಡೆ ಮಂಜುನಾಥ ಭಂಡಾರಿ, ಕಾರ್ಯನಿರ್ವಹಣಾದಿಕಾರಿ ಪ್ರವೀಣ್ ಸೇರಿ ಹಲವರು ಉಪಸ್ಥಿತರಿದ್ದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಉದಯ ಮಂಜುನಾಥ್ ಸಮಗ್ರ ಕಾರ್ಯಕ್ರಮ ನಿರ್ವಹಿಸಿದರು.

4vp darmika sabe-1

By suddi9

Leave a Reply

Your email address will not be published. Required fields are marked *