ಭೋಪಾಲ್ : ಮಧ್ಯಪ್ರದೇಶದಲ್ಲಿ ನಡೆಯಲಿರುವ ನವರಾತ್ರಿ ಸಾಂಸ್ಕೃತಿಕ ುತ್ಸವಕ್ಕೆ ಮುಸ್ಲಿಂ ಪುರುಷರ ಪ್ರವೇಶವನ್ನು ನಿಷೇಧಿಸಬೇಕೆಂದು ಮಧ್ಯಪ್ರದೇಶದ ಶಾಸಕಿ ಉಷಾ ಠಾಕೋರ್ ತಿಳಿಸಿದ್ದಾರೆ. 

dance
ಅಕ್ಟೋಬರ್ ನಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ  ನಡೆಯಲಿರುವ ಗರ್ಬಾ ನೃತ್ಯ ಎಂಬ ನೃತ್ಸ್ಯೋತ್ಸವ ಆಯೋಜಕರಿಗೆ ಬಿಜೆಪಿ ಶಾಸಕಿ ಉಷಾ ಠಾಕೂರ್ ಪತ್ರ ಬರೆಯಲು ನಿರ್ಧರಿಸಿದ್ದು ತಮ್ಮ ಕ್ಷೇತ್ರದಲ್ಲಿ ನಡೆಯಲಿರುವ ಉತ್ಸವದಲ್ಲಿ ಮುಸ್ಲಿಂ ಯುವಕರ ಪ್ರವೇಶವನ್ನು ನಿಷೇಧ ಹೇರುವಂತೆ ಮನವಿ ಮಾಡಲಿದ್ದಾರೆ ಎಂದು ಹೇಳಲಾಗಿದೆ. 

ಮಧ್ಯಪ್ರದೇಶದಲ್ಲಿ ನಡೆಯಲಿರುವ ಈ ಸಾಂಸ್ಕೃತಿಕ ಉತ್ಸವಕ್ಕೆ   ಆಗಮಿಸುವ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಲವ್ ಜಿಹಾದ್ ಗಾಗಿ ಟಾರ್ಗೆಟ್ ಮಾಡುತ್ತಿದ್ದು ಪ್ರತಿ ವರ್ಷ 4 ಲಕ್ಷ ಯುವತಿಯರು ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ನಡೆಯಲಿರುವ ಉತ್ಸವಕ್ಕೆ ಮುಸ್ಲಿಂ ಯುವಕರ ಪ್ರವೇಶವನ್ನು ನಿಷೇಧಿಸಲಲು  ನಿರ್ಧರಿಸಲಾಗಿದೆ ಎಂದು ಶಾಸಕಿ ಹೇಳಿದ್ದಾರೆ. 

ಉತ್ಸವಕ್ಕೆ ಆಗಮಿಸುವ ಪ್ರತಿಯೊಬ್ಬರೂ ಸಹ ಕಡ್ಡಾಯವಾಗಿ ಗುರುತಿನ ಚೀಟಿ ಪ್ರದರ್ಶಿಸಬೇಕೆಂಬ ನಿಯಮನವನ್ನೂ ರೂಪಿಸಲಾಗಿದೆ. ಲವ್ ಜಿಹಾದನ್ನು ಈ ಮೂಲಕ ಮಾತ್ರ ತಡೆಗಟ್ಟಬಹುದಾಗಿದೆ ಎಂಬುದು ಬಿಜೆಪಿ ಸ್ಥಳೀಯ ನಾಯಕರ ಅಭಿಪ್ರಾಯವಾಗಿದೆ. ಬಿಜೆಪಿ ಶಾಸಕಿಯ ಈ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

By suddi9

Leave a Reply

Your email address will not be published. Required fields are marked *