ಬೆಂಗಳೂರು: ಬಾಲ್ಯದ ಶಿಕ್ಷಣದ ಬದ್ಧತೆಯನ್ನು ಆಚರಿಸುವ ಸಲುವಾಗಿ ಕ್ರೀಡೋ ಅರ್ಲಿ ಚೈಲ್ಡ್ ಹುಡ್ ಸೊಲ್ಯೂಷನ್ಸ್ ಜನವರಿ 22 ರಂದು 2019ರ ಮಂಗಳವಾರ ಬೆಂಗಳೂರಿನ, ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ಶಿಕ್ಷಾರಂಭದ ಪ್ರಮುಖ ಸಮಾವೇಶ ಹಮ್ಮಿಕೊಂಡಿತ್ತು.

ಇದು 2 ರಿಂದ 6ರ ವಯಸ್ಸಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿರುವ ಶಿಕ್ಷಣ ತಜ್ಞರು ಹಾಗೂ ಸಮುದಾಯದ ಪಾಲುದಾರರನ್ನು ಒಟ್ಟುಗೂಡಿಸಿದ ಕ್ರೀಡೋ ಅರ್ಲಿ ಚೈಲ್ಡ್ ಹುಡ್ ಸೊಲ್ಯೂಷನ್, ಅವರ ಸಾಧನೆಯನ್ನು ಗುರುತಿಸಿ ಗೌರವಿಸಿತು.

ಚಟುವಟಿಕೆ ಆಧಾರಿತ ಕಲಿಕೆ , ಉತ್ತಮ ಗುಣಮಟ್ಟದ ಬಾಲ್ಯದ ಶಿಕ್ಷಣ ಒದಗಿಸುವ ಹಾಗೂ ಕಡಿಮೆ ಆದಾಯ ಹೊಂದಿರುವ ಪಾಲಕರಿಗೆ ಕೂಡ ಶಿಕ್ಷಣದ ಮಹತ್ವದ ಅರಿವು ಮೂಡಿಸಲು ಹಾಗೂ ‘ಭಾರತದಲ್ಲಿ ಬಾಲ್ಯದ ಶಿಕ್ಷಣವನ್ನು ಮರು ವ್ಯಾಖ್ಯಾನ ನೀಡುವುದು‘ ಕುರಿತು ತಜ್ಞರಿಂದ ಚರ್ಚೆ ನಡೆಯಿತು.

ಬಾಲ್ಯದ ಶಿಕ್ಷಣದ ಗುಣಮಟ್ಟ ಮಕ್ಕಳ ಭವಿಷ್ಯವನ್ನು ನಿರ್ಧರಿಸುವುದರಿಂದ ಸಂಸ್ಥೆ ಉತ್ತಮ ಬಾಲ್ಯದ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದೆ. ಇದು ಮಕ್ಕಳಿಗೆ ಉತ್ತಮ ತಳಪಾಯ ಒದಗಿಸಿ ಅವರು ಬೆಳೆದಂತೆ ಹಾಗೂ ಉನ್ನತ ತರಗತಿಗಳಿಗೆ ಹೋದಾಗ ಕಲಿಕೆಗೆ ನೆರವಾಗುತ್ತದೆ, ಉತ್ತಮ ಬೆಂಬಲದಿಂದ, ಮಕ್ಕಳು ಬೌತಿಕವಾಗಿ ಬೆಳೆಯುವುದರ ಜೊತೆಗೆ, ಉತ್ತಮ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಬದಲಾಗುತ್ತಾರೆ.

ಸಮಾವೇಶದಲ್ಲಿ ಕ್ರೀಡೋ ಅರ್ಲಿ ಚೈಲ್ಡ್ ಹುಡ್ ಸೊಲ್ಯೂಷನ್ ನ ಸಹ ಸಂಸ್ಥಾಪಕಿ ಹಾಗೂ ನಿರ್ದೇಶಕಿ ಮೃದುಲಾ ಶ್ರೀಧರ್ ಮಾತನಾಡಿ, ಗುಣಮಟ್ಟದ ಬಾಲ್ಯದ ಶಿಕ್ಷಣದ ಮಕ್ಕಳಿಗೆ ಐಷಾರಾಮಿಯಲ್ಲ ಬದಲಿಗೆ, ಅತಿ ಅಗತ್ಯವಾಗಿದೆ. ಇದು ಮಕ್ಕಳ ಚಿಂತನೆ, ಆತ್ಮವಿಶ್ವಾಸ, ಸಂವಹನ ಹಾಗೂ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಉತ್ತಮ ಕೌಶಲ್ಯಗಳನ್ನೊಳಗೊಂಡ ಶಿಕ್ಷಕರು ಹಾಗೂ ಇತರ ಶಾಲೆಗಳೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ , ಮುಂದಿನ ಪೀಳಿಗೆಯ ಬೆಳವಣಿಗೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಬಹುದು ಎಂಬುದು ನಮ್ಮ ವಿಶ್ವಾಸ. ದೇಶದಲ್ಲಿನ ಕೈಗೆಟಕುವ ಖಾಸಗಿ ಶಾಲೆಗಳು ಅತಿ ಹೆಚ್ಚಿನ ಮಕ್ಕಳನ್ನು ಹೊಂದಿದ್ದು, ನಾವು ನಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಈ ಶಾಲೆಗಳನ್ನು ಆಯ್ದುಕೊಂಡಿದ್ದೇವೆ ಎಂದರು.

ಬಾಲ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಶಾಲೆಯ ಮಾಲೀಕರು, ಪೋಷಕರು ಹಾಗೂ ಇತರ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕ್ರೀಡೋದ ದೃಢವಾದ ಅಭಿಮತ. ಮಕ್ಕಳ ಬೆಳವಣಿಗೆಯಲ್ಲಿ ಇವೆರಲ್ಲರ ಪಾತ್ರ ಬಹಳ ಮಹತ್ವದ್ದು.

ಕ್ರೀಡೋ ಅರ್ಲಿ ಚೈಲ್ಡ್ ಹುಡ್ ಸೊಲ್ಯೂಷನ್‌ ಬಗ್ಗೆ

ಕ್ರೀಡೋ ಅರ್ಲಿ ಚೈಲ್ಡ್ ಹುಡ್ ಸೊಲ್ಯೂಷನ್, ಕ್ರೀಡೋ ಎಂಟರ್‌ ಪ್ರೈಸಸ್‌ ನ ಒಂದು ಭಾಗ. ಇದು ಕಳೆದ 25 ವರ್ಷಗಳಿಂದ ಮಕ್ಕಳಿಗೆ ಉತ್ತಮ ಶಾಲೆಗೆ ಪೂರ್ವ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದು ಯುವ ಮನಸ್ಸುಗಳ ಬೆಳವಣಿಗೆಗೆ ತನ್ನ ಗ್ರಾಹಕರಿಗೆ ವಿಭಿನ್ನ ಪರಿಹಾರಗಳನ್ನು ನೀಡುವ ಮೂಲಕ ಬಾಲ್ಯದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾಗಿದೆ.

ಕ್ರೀಡೋ ಸಂಸ್ಥೆ ಪರಿಣಾಮಕಾರಿ ಪಠ್ಯಕ್ರಮ, ಕಲಿಕಾ ವಸ್ತುಗಳು ಹಾಗೂ ಪಠ್ಯಕ್ರಮ ಜಾರಿಗೆ ಅಗತ್ಯ ಪುಸ್ತಕಗಳನ್ನು ಒದಗಿಸುವುದು ಹಾಗೂ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡುವಂತಹ ಸಮಗ್ರ ಪರಿಹಾರಗಳನ್ನು ಒದಗಿಸು್ತದೆ. ಉತ್ತಮ ಶಿಕ್ಷಣವು, ಸರಿಯಾದ ಪಠ್ಯಕ್ರಮ, ವಿಧಾನ ಹಾಗೂ ಚಟುವಟಿಕೆಗಳ ಮಿಶ್ರಣದಿಂದ ಮಾತ್ರ ಒದಗಿಸಲು ಸಾಧ್ಯ. ಇದು ಮಕ್ಕಳ ಜೀವನವನ್ನು ಸುಧಾರಿಸುವ ಶಕ್ತಿ ಹೊಂದಿದೆ ಎಂಬುದು ಕ್ರೀಡೋ ನಂಬಿಕೆ.

By suddi9

Leave a Reply

Your email address will not be published. Required fields are marked *