ಪೊಳಲಿ : ಈ ವರ್ಷ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ವಿಶೇಷ ಸಮೀಕ್ಷೆ ಆರಂಭಗೊಂಡಿದೆ. ಇದರಲ್ಲಿ ಹಳೆ ವಿದ್ಯಾರ್ಥಿಗಳು, ಪಾಲಕರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಊರವರು ಸಹಕರಿಸಬೇಕು. ವಿವಿಧ ಇಲಾಖೆಗಳಿಂದ ಈ ಸಮೀಕ್ಷೆ ಲಿಖಿತ ಬೆಂಬಲ ವ್ಯಕ್ತವಾಗಿದ್ದು, 16 ವರ್ಷದೊಳಗಿನ ಪ್ರತಿಯೊಂದು ಮಕ್ಕಳೂ ಶಾಲಾ ಶಿಕ್ಷಣ ಪಡೆಯಬೇಕು ಎಂದು ಮಕ್ಕಳ ಗ್ರಾಮ ಸಭೆಯನ್ನುದ್ದೇಶಿಸಿ ಸಿಆರ್‍ಪಿ ಉಷಾ ಹೇಳಿದರು.001

ಅವರು ಕರಿಯಂಗಳ ಗ್ರಾಮ ಪಂಚಾಯತ್ ಸಭಾಗೃಹದಲ್ಲಿ ನ. 19ರಂದು ಆಯೋಜಿಸಲಾದ 2018-19ನೇ ಸಾಲಿನ ಪ್ರಥಮ ಹಂತದ ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿದರು.

ಈ ಸಭೆಯಲ್ಲಿ ಕರಾಟೆ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಗ್ರಾಮ ವ್ಯಾಪ್ತಿಯ ಶಾಲೆಗಳ ನಾಲ್ವರು ವಿದ್ಯಾರ್ಥಿಗಳಾದ ತ್ರಿಶಾನ್, ಮಹಾನ್, ತ್ರಿಶೂಲ್ ಹಾಗೂ ಪ್ರೀತಿಕಾ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.20vpmakkala gramasabe

 

00-2ವೇದಿಕೆಯಲ್ಲಿ ಕರಿಯಂಗಳ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಚಂದ್ರಶೇಖರ್ ರಾವ್, ತಾ.ಪಂ ಸದಸ್ಯ  ಯಶವಂತ ಪೂಜಾರಿ ಸದಸ್ಯರಾದ , ಲೋಕೇಶ್ ಭರಣಿ, ವೀಣಾ ಉಪೇಂದ್ರ ಆಚಾರ್ಯ,ಇಬ್ರಾಹಿಂ ನವಾಜ್ ಮತ್ತು ಪಂಚಾಯತಿ ಸಿಬ್ಬಂದಿ ದಾಕ್ಷಾಯಿಣಿ,ಅಕ್ಷಯ್, ಆರೋಗ್ಯ ಇಲಾಖೆ ಅಧಿಕಾರಿ ದೇವಕಿ, ಶಾಲಾ ಮುಖ್ಯ ಶಿಕ್ಷಕರಾದ  ಸುಬ್ರಾಯ ಕಾರಂತ, ಸುಪ್ರೀಯ ಕಾಮತ್   ಹಾಗೂ ವಿದ್ಯಾರ್ಥಿನಿಯರಾದ ಸುನೇಹ,ಆಸ್ರಾ ಉಪಸ್ಥಿತರಿದ್ದರು. ಕರಿಯಂಗಳ ಗ್ರಾಪಂ ಪಿಡಿಒ ಪದ್ಮಾ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ಚಂದ್ರಶೇಖರ ರಾವ್ ವಂದಿಸಿದರು.

 

By Suddi9

Leave a Reply

Your email address will not be published. Required fields are marked *