ಮುಂಬೈ: ಪುನಃ ಚಿತ್ರರಂಗದಲ್ಲಿ ತನ್ನ ಪ್ರತಿಭೆ ತೋರಲು ಸಿದ್ಧತೆ ನಡೆಸಿರುವ ಐಶ್ವರ್ಯ ರೈ ಬಗ್ಗೆ ದಿನಕ್ಕೊಂದು ಕಥೆ ಹುಟ್ಟುತ್ತಲೇ ಇದೆ. ಸಾಮಾನ್ಯವಾಗಿ ಸ್ವಲ್ಪ ವಯಸ್ಸಾದ ಹೆಣ್ಣುಮಕ್ಕಳಿಗೆ ಅಮ್ಮ ಇನ್ನು ಸ್ವಲ್ಪ ದಿನ ಆದ ಬಳಿಕ ಅಜ್ಜಿ ಪಾತ್ರ ನೀಡಿ ಸಂಭ್ರಮಿಸುವ ಸಿನಿಮಂದಿ ಅದೇ ಹೀರೊಗಳಿಗಿಂತ 20 – 30 ವರ್ಷಗಳಷ್ಟು ಕಡಿಮೆ ಇರುವ ಹೆಣ್ಣುಮಕ್ಕಳನ್ನು ಹೀರೋಯಿನ್ಗಳನ್ನಾಗಿ ಮಾಡಿ ‘ಅಂಕಲ್ಲು -ಬಾಲಕಿ’ ಡ್ಯುಯೆಟ್ ಹಾಡುವಂತೆ ಮಾಡಿ ಬಿಡ್ತಾರೆ.
ಆದರೆ ಐಶ್ ಚಿತ್ರರಂಗದವರ ಪಾಲಿಗೆ ಇನ್ನು ಹರೆಯ ಚೆಲುವೆ. ಆಕೆಗೆ ಮದುವೆ ಮಗಳು ಸ್ವಲ್ಪ ಹೆಚ್ಚೇ ಅನ್ನಿಸುವ ದಪ್ಪ ಎಲ್ಲವೂ ಜೊತೆಗಿದ್ದರೂ ಸಹಿತ ಐಶ್ ಜೊತೆ ನಟಿಸಲು ಯಂಗ್ ಹೀರೋಗಳು ತುದಿಗಾಲಲ್ಲಿ ನಿಂತಿದ್ದಾರೆ. ಬಾಲಿವುಡ್ನ ಪ್ರಸಿದ್ಧ ನಿರ್ದೇಶಕ ಡೇವಿಡ್ ಧವನ್ ಅವರ ಪುತ್ರ ವರುಣ್ ಜೊತೆ ನಟಿಸುವ ಅವಕಾಶ ದೊರಕಿತ್ತು. 27 ರ ಹರೆಯದ ವರುಣ್ ಜೊತೆ ಬಾದಲ್ಪೂರ್ ಚಿತ್ರದಲ್ಲಿ ನಟಿಸಲು ಐಶ್ ಆಸಕ್ತಿ ತೋರಿಸಿಲ್ಲ.



