ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಚಟುವಟಿಕೆಯ ಉದ್ಘಾಟನೆ ಹಾಗೂ ದೇವಸ್ಥಾನಗಳ ಸರ್ವೇಕ್ಷಣ-ಕೃತಿ ಬಿಡುಗಡೆ ಕಾರ್ಯಕ್ರಮವು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ನಡೆಯಿತು. ಕಾಲೇಜಿನ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು.

alvas nss
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ  ಅವರು ವಿದ್ಯಾರ್ಥಿ ಜೀವನದ ನಂತರ ಎನ್‍ಎಸ್‍ಎಸ್ ನಲ್ಲಿ ಮುಂದುವರೆಯುವುದು ಕಷ್ಟ ಸಾಧ್ಯ. ಸೇವೆ ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಅದನ್ನು ವಿದ್ಯಾರ್ಥಿ ಜೀವನದಲ್ಲೇ ಅಳವಡಿಕೊಳ್ಳುವುದು ಉತ್ತಮ. ಸೇವೆ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಅದುವೇ ಒಂದು ಉತ್ತಮ ಅನುಭವ. ಸೇವೆ ಎಂದು ಹೇಳುವುದು ಸುಲಭ ಬದಲಾಗಿ ಅದನ್ನು ಕಾರ್ಯರೂಪಕ್ಕೆ ತರುವುದು ಅಷ್ಟೇ ಮುಖ್ಯ. ನಾವು ಸಣ್ಣ ಸಣ್ಣ ಕೆಲಸವನ್ನು ಮಾಡಿ ಯಶಸ್ಸನ್ನು ಕಾಣಬೇಕೇ ಹೊರತು ಇದು ಕೇವಲ ಔಪಚಾರಿಕವಾಗಿರಬಾರದು. ಪತಿಯೊಬ್ಬರು ಸಮರ್ಪಣಾ ಮನೋಭಾವದಲ್ಲಿ ಕೆಲಸ ಮಾಡಬೇಕು. ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಈಗಾಗಲೇ ಮೂಡುಬಿದಿರೆ ಆಸುಪಾಸಿನ 30 ದೇವಾಸ್ಥಾನಗಳ ಕೃತಿ ಬಿಡುಗಡೆ ಮಾಡಿದ್ದು, ಅದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕೆಲವೊಂದು ಸಂದರ್ಭಗಳಲ್ಲಿ ಅನುಕಂಪ, ಸಹಾಯ ಅಗತ್ಯವಿರುವ ಜನ ಇರುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ಸೇವೆ ಮಾಡುವುದು ನಮ್ಮೇಲ್ಲರ ಕರ್ತವ್ಯ. ಸೇವೆ ಮಾಡುವಾಗ ಕಣ್ಣು, ಕಿವಿ, ಮನಸ್ಸುಗಳ ಸ್ಪಷ್ಟತೆಯನ್ನು ಗಮನಿಸಿ ಮುಂದುವರೆಯಬೇಕು. ಸೇವೆ ಮಾಡುವುದಕ್ಕೆ ನಮ್ಮ ಒಳಮನಸ್ಸು ತಯಾರಿರಬೇಕು. ಸೇವೆ ಮಾಡುವುದನ್ನು ಅನುಭವಿಸಿ ಕೆಲಸ ಮಾಡಿದರೆ ಉತ್ತಮ ಫಲ ಸಿಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಶೋಕ್ ಕೆ.ಜಿ, ಎನ್‍ಎಸ್‍ಎಸ್ ಅಧಿಕಾರಿಗಳಾದ ವಸಂತ್ ಎ, ನವ್ಯಾ ಶೆಟ್ಟಿ ಹಾಗೂ ಎನ್‍ಎಸ್‍ಎಸ್ ಸಹಾಯಕ ಅಧಿಕಾರಿಗಳಾದ ವರುಣ ಡೊಂಗ್ರೆ ಮತ್ತು ಚೇತನಾ ಎಂ.ಜೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸ್ಪೂರ್ತಿ ಹೆಗ್ಡೆ ನಿರೂಪಿಸಿದರು. ವಿದ್ಯಾರ್ಥಿ ಚೇತನ್ ವಂದಿಸಿದರು.

By Suddi9

Leave a Reply

Your email address will not be published. Required fields are marked *