ಬಂಟ್ವಾಳ: ಬಡಕಬೈಲ್ನಲ್ಲಿ ಜಲಾಲಿಯ್ಯ ವಾರ್ಷಿಕ ಹಾಗೂ ಮದ್ರಸ ಕಟ್ಟಡವನ್ನು ಶೈಖುನಾ ಕುಂಬೋಳ್ ತಂಙಳ್ ರವರ ಸುಪುತ್ರ ಶೈಖುನಾ ಕೆ.ಎಸ್ ಮುಖ್ತಾರ್ ತಂಙಳ್ರವರು ಉದ್ಘಾಟಿಸಲಾಯಿತು.

bdakabail
ನಂತರ ಕೆ.ಎಸ್ ದುಆ: ಆಶೀರ್ವಚನ ನೆರವೇರಿಸಿದರು.ಈ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆಗೈದ ಹಾಫೀಳ್ ಅಬ್ದುಲ್ ಮಜೀದ್ , ಅಬೂಬಕ್ಕರ್ ಸಿದ್ದೀಕ್,ಮಹಮ್ಮದ್ ಸಖಾಫಿ,ಸಾಬಿತ್ ಸಖಾಫಿ,ಇರ್ಫಾನ್ ಫಾಳಿಲಿ,ಹಾಗೂ ಪಿಡಿಓ ಆಗಿರುವ ಉಸಆನ್ ,ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿರುವ ಸರಫುದ್ದೀನ್,ದ.ಕ ಜಿಲ್ಲಾ ಪಂಚಾಯತ್ ಲೆಕ್ಕಪರಿಶೋಧಕರಾಗಿರುವ ಅನ್ಸಾರ್ ರವರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಮದರಸಗಳು ಧಾರ್ಮಿಕ ಶಿಕ್ಷಣವನ್ನು ನೀಡುತ್ತದೆ.ಬಂಟ್ವಾಳದಲ್ಲಿ ಈಗ ಶಾಂತಿ ನೆಲೆಸಿದೆ.ಶಾಂತಿ ಇದ್ದರೆ ಮಾತ್ರ ಅಭಿವೃದ್ದಿ ಸಾದ್ಯ.ಜಗತ್ತಿನಲ್ಲಿ ಶಾಂತಿಯನ್ನು ಬಯಸುವ ದೇಶಗಳು ಮಾತ್ರ ಇಂದು ಅಭಿವೃದ್ಧಿ ಆಗಿದೆ ನಾವೆಲ್ಲ ಜಾತಿ ಭೇದ ಮರೆತು ಒಟ್ಟಾಗಿ ಸಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತೌಹ ತಂಙಲ್, ಮಾಜಿ ಸಚಿವ ರಮಾನಾಥ ರೈ, ಜಮಾತ್ ಖತೀಬರಾದ ಅಬೂಬಕ್ಕರ್ ಸಖಾಫಿ, ಮಾಜಿ ಖತೀಬರಾದ ಹನೀಫ್ ಮದನಿ, ಬಷೀರ್ ಸಅದಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ಶೆಟ್ಟಿ ತುಂಬೆ,ಯು.ಪಿ ಇಬ್ರಾಹಿಂ ,ಜಮಾತ್ ಅಧ್ಯಕ್ಷರಾದ ಬಷೀರ್ ಗಾಣಿಮಾರ್ ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ನವಾಝ್,ಸುರೇಶ್ ಮತ್ತಿತರ ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ನವಾಝ್,ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *