ಕೈಕಂಬ: ಜಗತ್ತಿನ ಬಹುಸಂಖ್ಯಾತ ಜನರು ಆಡುವ ಆಟವಾಗಿದೆ ಫುಟ್ಬಾಲ್. ಕ್ರೀಡೆಗಳ ರಾಜ ಎನಿಸಿಕೊಂಡಿರುವ ಫುಟ್ಬಾಲ್ ಈಗ ರಷ್ಯಾದಲ್ಲಿ ನಡೆಯುತ್ತಿದೆ .ವಿಶ್ವಕಪ್ ಫುಟ್ಬಾಲ್ ನ ಈ ಸಂದರ್ಭದಲ್ಲಿ ಮಕ್ಕಳಿಗೂ ಅದರ ಅರಿವು ಲಭಿಸುವುದು ಅತಿ ಅಗತ್ಯವಾಗಿದೆ .ಇದರ ಅಂಗವಾಗಿ ಆಟದ ಪರಿಚಯಕ್ಕಾಗಿ ಎ . ಯು . ಪಿ ಶಾಲೆ ಪಳ್ಳತ್ತಡ್ಕದ ಮಕ್ಕಳಿಗೂ ಫುಟ್ಬಾಲ್ ಆಟವನ್ನು ಆಡಿಸಲಾಯಿತು .
ಮುಖ್ಯೋಪಾಧ್ಯಾಯರಾದ ಮಣಿ.ಎಂ. ಆಟವನ್ನು ಉದ್ಘಾಟಿಸಿದರು .ಎರಡು ಟೀಮ್ ಗಳಾಗಿ ಮಕ್ಕಳನ್ನು ವಿಭಾಗಿಸಿ ಶಾಸ್ತ್ರಿಯವಾದ ರೀತಿಯಲ್ಲಿಯೇ ಮಕ್ಕಳಿಗೆ ಆಡಲು ನಿರ್ದೇಶನ ನೀಡಲಾಯಿತು . ಇದರ ಮುಂದಾಳುತ್ವವನ್ನು ಅಧ್ಯಾಪಕ ವಿಘ್ನೇಶ್ ಪ್ರಸಾದ ರವರು ವಹಿಸಿಕೊಂಡು ಮಾದರಿಯಾಗಿ ಆಟವಾಡುವ ಮೂಲಕ ಆಸಕ್ತಿಯನ್ನು , ಹುರುಪನ್ನೂ ಮಕ್ಕಳಲ್ಲಿ ತುಂಬಿದರು . ಶರತ್ ಕೃಷ್ಣ ಭರನ್ಯಾ ಮಾಸ್ಟರ್ ಸಹಕರಿಸಿದರು. ಆಟಗಾರರನ್ನು ಪ್ರೇಕ್ಷಕರನ್ನು ಒಳಗೊಂಡ ಫುಟ್ಬಾಲ್ ಆಟವು ಅತ್ಯಂತ ಹರ್ಷದಿಂದಲೇ ಮುಕ್ತಾಯ ಗೊಂಡಿತು . ನೋಡುಗರ ಮನಸೆಳೆದ ಆಟವು ಎಲ್ಲರಿಗೂ ರಸದೌತಣವನ್ನು ನೀಡಿತು ಎಂಬುವುದರಲ್ಲಿ ಎರಡು ಮಾತಿಲ್ಲ . ಸರಿಯಾದ ಯೋಜನೆ ಹಾಗೂ ಸಾಮಗ್ರಿಗಳಿದ್ದರೆ ಯಾವುದೂ ಸಾದ್ಯ ಎಂಬುವುದಕ್ಕೆ ಇದೊಂದು ನಿದರ್ಶನ .



