ತಪ್ಪತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ರೈ ಸೂಚನೆ
ಸುದ್ದಿ9 ಕೈಕಂಬ; ಮಂಗಳೂರು ಉಳ್ಳಾಲ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಅಹಿತಕರ ಘಟನೆಗೆ ಕಾರಣರಾದವರನ್ನು ಕಠಿಣ ಕ್ರಮ ಕೈಗೊಳ್ಳುವಂತೆಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವರಿ ಸಚಿವ ರಮಾನಾಥ ರೈ ತಿಳಿಸಿದರು. ಅವರು ಗಲಭೆಗೆ ಸಂಚು ನಡೆಸುವವರ ವಿರುದ್ದ ಕಠಿಣ ಕ್ರಮಕ್ಕೆ ಸೂಚನೆ ನಿಡಲಾಗಿದೆ ಗಲಭೆಯಲ್ಲಿ ಹಾನಿ ಆದವರಿಗೆ ಜಿಲ್ಳಾಡಳಿತದಿಂದ ಸೂಕ್ತ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಎಂದು ಶನಿವಾರ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.ry

 

ಗಲಭೆ ಸಂಧರ್ಭ ಸುಳ್ಳು ಸುದ್ದಿ ಹಭ್ಬಿಸುವ ತಂತ್ರವನ್ನು ಸಮಾಜ ಘಾತುಕ ಶಕ್ತಿಗಳು ರೂಪಿಸುತ್ತಿವೆ ಇವರ ವಿರುದ್ದವು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು. ಉಳ್ಳಾಲ ಗಲಭೆಯಲ್ಲಿ ಒಟ್ಟು 76 ಮಂದಿಯನ್ನು ಬಂದಿಸಲಾಗಿದೆ .ಇನ್ನೂಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರ ಬಂದನಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಮಿಷನರೇಟ್ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ 400 ಜನರನ್ನು ತಹಸೀಲ್ದಾರ್ ಮುಂದೆ ಹಾಜರು ಮಾಡಿ ಮುಚ್ಚಳಿಕೆ ಪಡೆಯಲಾಗಿದೆ. ಇನ್ನೂ40 ಜನರಿಗೆ ವಾರಂಟ್ ಜಾರಿ ಮಾಡಲಾಗಿದೆ. ಎಂದು ಕಮಿಷನರ್ ಆರ್.ಹಿತೇಂದ್ರ ತಿಳಿಸಿದರು. ಫೆ.18ರಂದು ಮಂಗಳೂರಿಗೆ ನರೇಂದ್ರಮೋದಿ ಬರಲಿದ್ದು ಸೂಕ್ತ ಬಿಗಿ ಬಂದೋಬಸ್ತ್ ಮಾಡಲಾಗುವುದು. ಎಂದು ಅವರು ತಿಳಿಸಿದರು. ಶಾಸಕ ಜೆ.ಆರ್ ಲೋಬೋ, ಜಿಲ್ಲಾಧಿಕಾರಿ ಬಿ.ಎ.ಇಬ್ರಾಹಿಂ, ಎಸ್. ಪಿ ಶಂತನು ಸಿನ್ಹ ಪತ್ರ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *