ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಸಭೆ
ಸುರತ್ಕಲ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸುರತ್ಕಲ್ ಘಟಕದ ಸಭೆ ಇತ್ತೀಚೆಗೆ ಇಲ್ಲಿನ ಬಂಟರ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಕೋಶಾಧಿಕಾರಿ ಸತೀಶ್ ಶೆಟ್ಟಿ ಬಾಳಿಕೆ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು.
ಮೇ ೨೭ರಂದು ಅಡ್ಯಾರ್‌ನಲ್ಲಿ ನಡೆಯುವ ಪಟ್ಲ ಸಂಭ್ರಮದ ಕುರಿತು ಘಟಕದ ಸಲಹೆಗಾರ ಉಲ್ಲಾಸ್ ಆರ್ ಶೆಟ್ಟಿ ಮಾಹಿತಿ ನೀಡಿದರು. ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಸುರತ್ಕಲ್ ಘಟಕದಿಂದ ೨೦೦ಕ್ಕೂ ಮಿಕ್ಕಿದ ಸದಸ್ಯರು ಭಾಗವಹಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ವೇಳೆ ದ್ವಿತೀಯ ಪಿಯುಸಿಯಲ್ಲಿ ರ್ಯಾಂ ಕ್ ಗಳಿಸಿದ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸದಸ್ಯೆ ಯಕ್ಷಗಾನ ಕಲಾವಿದೆ ಬಿಂದಿಯಾ ಎಲ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸುರತ್ಕಲ್ ಘಟಕದ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಘಟಕದ ಉಪಾಧ್ಯಕ್ಷ ಸುಧಾಕರ ಪೂಂಜಾ ಹೊಸಬೆಟ್ಟು, ಸಂಚಾಲಕ ರವಿಶೆಟ್ಟಿ ಸುರತ್ಕಲ್, ಶಿವರಾಮ ಪಣಂಬೂರು, ರಾಕೇಶ್ ರೈ ಅಡ್ಕ, ಸಹನಾ ರಾಜೇಶ್ ರೈ, ಸುಜಾತಾ ಶೆಟ್ಟಿ, ಜಯ ದೇವಾಡಿಗ, ಗಂಗಾಧರ ಪೂಜಾರಿ ಚೇಳ್ಯಾರ್, ಅನಂತ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.