Published On: Fri, May 11th, 2018

ವಿಧಾನಸಭಾ ಚುನಾವಣೆ: ಬೆಳ್ತಂಗಡಿಯಲ್ಲಿ 48 ನಕ್ಸಲ್ ಬಾಧಿತ ಮತಗಟ್ಟೆಗಳು

voting_election_nnr_newsk_61218

ಬೆಳ್ತಂಗಡಿ: ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 243 ಮತದಾನ ಕೇಂದ್ರಗಳಿದ್ದು, 70 ಕೇಂದ್ರಗಳನ್ನು ಕ್ಲಿಷ್ಟ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಅದರಲ್ಲಿ 48 ಮತಗಟ್ಟೆ ನಕ್ಸಲ್ ಬಾಧಿತ ಮತಗಟ್ಟೆಯಾಗಿದೆ. ಬಿಎಸ್ಎಫ್ ಮತ್ತು ಹೊರರಾಜ್ಯಗಳ ಮೀಸಲು ಪಡೆಗಳು ತಾಲೂಕಿಗೆ ಆಗಮಿಸಿದ್ದು ಅತ್ಯಂತ ಬಿಗು ಬಂದೋಬಸ್ತ್ ಮಾಡಲಾಗಿದೆ.

ಶುಕ್ರವಾರ ಉಜಿರೆಯ ಎಸ್.ಡಿ.ಎಂ. ಪಿಯು ಕಾಲೇಜಿನಲ್ಲಿ ಚುನಾವಣೆಯ ಅಂತಿಮ ಸಿದ್ದತೆಗಳು ನಡೆದಿದ್ದು ಮಧ್ಯಾಹ್ನದ ವೇಳೆಗೆ ಮತಯಂತ್ರಗಳೊಂದಿಗೆ ಚುನಾವಣಾ ಸಿಬಂದಿಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು.

ಸುಗಮ ಮತದಾನಕ್ಕೆ ವ್ಯವಸ್ಥೆ ಮಾಡಲು ಪೋಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ 20 ಸೆಕ್ಟರ್ ಗಳನ್ನಾಗಿ ವಿಂಗಡಿಸಲಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ 3 ಮಂದಿ ಇನ್ಸ್ ಪೆಕ್ಟರ್ ಗಳು, 10 ಮಂದಿ ಸಬ್ ಇನ್ಸ್ ಪೆಕ್ಟರ್ ಗಳು, 36 ಮಂದಿ ಎಎಸ್ಐಗಳು, 152 ಮಂದಿ ಪುರುಷ ಪೋಲಿಸ್ ಪೇದೆಗಳು, 46 ಮಂದಿ ಮಹಿಳಾ ಪೇದೆಗಳು ಹಾಗೂ 82 ಮಂದಿ ಹೋಮ್ಗಾರ್ಡ್ ಗಳನ್ನು, ಬಿಎಸ್ಎಫ್ ನ 92 ಮಂದಿ ಯೋಧರು, ಸೀಮಾ ಸುರಕ್ಷ ಪಡೆಯ 86 ಮಂದಿ ಯೋಧರು, ಐ.ಆರ್.ಬಿ ಪಡೆಯ 104 ಮಂದಿ ಯೋಧರನ್ನು ನಿಯೋಜಿಸಲಾಗಿದೆ.

ಅತೀ ಸೂಕ್ಷ್ಮ ಎಂದು ಗುರುತಿಸಲಾಗಿರುವ ನಕ್ಸಲ್ ಬಾಧಿತ ಪ್ರತಿ ಬೂತ್ ಗಳಲ್ಲಿ ಎಕೆ 47 ಹೊಂದಿರುವ 5 ಮಂದಿ ಪ್ಯಾರ ಮಿಲಿಟರಿಯ ಯೋಧರನ್ನು ನಿಯೋಜಿಸಲಾಗಿದೆ. ತಾಲೂಕಿನ 243 ಮತಗಟ್ಟೆಗಳಿಗೆ 1500 ಮಂದಿ ಸಿಬಂದಿಗಳನ್ನು ನಿಯೋಜಿಸಲಾಗಿದೆ. 70 ಬೂತ್ ಗಳಲ್ಲಿ ವಿಡೀಯೋ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ.

243 ಮತಗಟ್ಟೆಗಳಿಗೆ 260 ಮೆಡಿಕಲ್ ಕಿಟ್ ಗಳನ್ನು ನೀಡಲಾಗಿದೆ. 69 ವೀಲ್ ಚೇರ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ 12 ಪ್ರಾಥಮಿಕ ಆರೋಗ್ಯ ಕೇಂದ್ರ ವೈದರು ಹಾಗೂ ಸಿಬ್ಬಂದಿಗಳು ನಿರಂತರವಾಗಿ ಸೇವೆಯಲ್ಲಿರುತ್ತಾರೆ. 2 ಅಂಬ್ಯುಲೆನ್ಸ್ ಇದ್ದು 3 ಮಂದಿ ವೈದ್ಯರು ಹಾಗೂ 2 ಶುಶ್ರೂಕಿಯರನ್ನು ನಿಯೋಜಿಸಲಾಗಿದೆ.

ಮತಗಟ್ಟೆಗೆ ತೆರಳಲು 35 ಸರ್ಕಾರಿ ಬಸ್ ಗಳು, 48 ಜೀಪುಗಳು ಹಾಗೂ 18 ಟೆಂಪೋಗಳನ್ನು ಬಳಸಿಕೊಳ್ಳಲಾಗಿದೆ. ಅಶಕ್ತರನ್ನು, ದೂರದ ಪ್ರದೇಶದಿಂದ ಮತದಾರರನ್ನು ತರಲು ಹಾಗೂ ಬಿಡಲು ಇದೇ ವಾಹನವನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter