Published On: Thu, Apr 12th, 2018

ಕೊಲ್ಲರಕೋಡಿ: ನೂತನ ನೂರುಲ್ ಹುದಾ ಮದ್ರಸ ಉದ್ಘಾಟನೆ

DSC08405

ಮಂಜನಾಡಿ: ಒರ್ವ ಮುಸ್ಲಮಾನನಾಗಬೇಕಾದರೆ ಆತನಿಗೆ ಮದ್ರಸ ವಿದ್ಯೆ ಅತ್ಯಗತ್ಯವಾಗಿದೆ. ಮದ್ರಸ ವಿದ್ಯೆ ಪಡೆದರೆ ಮಾತ್ರ ಆತ ಸಂರ್ಪೂಣ ಮುಸ್ಲಮಾನನಾಗಿರ ಬಾಳಲು ಸಾಧ್ಯ ಎಂದು ಉಳ್ಳಾಲ ಖಾಝಿ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಕೂರತ್ ತಂಙಳ್ ಅಭಿಪ್ರಾಯಪಟ್ಟಿದ್ದಾರೆ.

DSC08400

ಇಲ್ಲಿನ ನರಿಂಗಾನ ಗ್ರಾಮದ ಕೊಲ್ಲರಕೋಡಿ ನೂರುಲ್ ಹುದಾ ಮಸೀದಿ ತಖ್ವಾ, ಎಸ್‍ವೈಎಸ್ ಮತ್ತು ಎಸ್ಸೆಸ್ಸೆಫ್ ಕೊಲ್ಲರಕೋಡಿ ಶಾಖೆ ವತಿಯಿಂದ ನಿರ್ಮಿಸಿದ ನೂತನ ಮದ್ರಸ ಕಟ್ಟಡ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.

ಪೋಷಕರ ತಮ್ಮ ಮಕ್ಕಳನ್ನು ಲೌಕಿಕ ವಿದ್ಯೆ ಕೊಡಿಸುವ ಜತೆಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡದಿದರೆ ಮಾತ್ರ ಉತ್ತಮ ನಾಗರಿಕನ್ನಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.

ಮಂಜನಾಡಿ ಅಲ್-ಮದೀನಾ ವಿದ್ಯಾ ಸಂಸ್ಥೆಯ ಶಿಲ್ಪಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ವಿದ್ಯೆ ಇಲ್ಲದವನ್ನು ಪ್ರಾಣಿಗೆ ಸಮಾನವಾಗಿದ್ದು, ಮದ್ರಸ ವಿದ್ಯೆ ಪಡೆಯಲು ಅನುಕೂಲವಾಗಲು ಕಟ್ಟಡ ನಿರ್ಮಿಸಿ ವಿದ್ಯೆ ಪಡೆಯುವ ವಿದ್ಯಾರ್ಥಿಗಳಿಗೆ ಸೌಕರ್ಯ ನೀಡುವ ಮೂಲಕ ಪ್ರೋತ್ಸಾಹ ನೀಡಿದಾಗ ಮಾತ್ರ ಇಸ್ಲಾಂ ಧರ್ಮ ಅಂತ್ಯ ದಿನದವರೆಗೆ ನೆಲೆನಿಲ್ಲಲು ಸಾಧ್ಯ ಎಂದರು.

DSC08392

ಕಾರ್ಯಕ್ರಮದಲ್ಲಿ ಕೊಡಿಯಮ್ಮ ಮುದರ್ರಿಸ್ ಝಕರಿಯ್ಯಾ ಫೈಝಿ, ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಪಿ.ಎ ಅಹ್ಮದ್ ಬಾಖವಿ ನೂರುಲ್ ಹುದಾ ಮಸೀದಿ ತಖ್ವಾ ಅಧ್ಯಕ್ಷ ಅಬ್ದುಲ್ ರಝಾಕ್ ಪಾರೆ, ಉಪಾಧ್ಯಕ್ಷರಾದ ಮುಹಮ್ಮದ್ ಪಾರೆ, ಮುಹಮ್ಮದ್ ಎನ್.ಐ, ಮೂಸಾ ಹಾಜಿ, ಕಾರ್ಯದರ್ಶಿ ಹಮೀದ್ ತಟ್ಲ, ಕೊಲ್ಲರಕೋಡಿ ಸದರ್ ಮುಅಲ್ಲಿಂ ಉಮರ್ ಮದನಿ, ಮುಅಲ್ಲಿಂ ಅಬ್ಬಾಸ್ ಸಖಾಫಿ, ದ.ಕ ಎಸ್‍ಎಂಎ ಕತರ್ ಬಾವ ಹಾಜಿ, ಎಸ್‍ವೈಎಸ್ ಕೋಲ್ಲಕೋಡಿ ಅಧ್ಯಕ್ಷ ಎನ್.ಎಂ ಅಬ್ದುಲ್ ರಹ್ಮಾನ್ ಹಾಜಿ, ನೂರಾನಿ ಯತೀಂ ಖಾನ ಕುಂಪಲದ ಪ್ರ.ಕಾರ್ಯದರ್ಶಿ ಇಕ್ಬಾಲ್ ಹಾಜಿ, ನರಿಂಗಾನ ಗ್ರಾ.ಪಂ ಅಧ್ಯಕ್ಷ ಇಸ್ಮಾಈಲ್ ಮೀನಾಕೋಡಿ, ಸದಸ್ಯ ಅಬ್ದುಲ್ ಖಾದರ್ ಚೌಕ, ಮದ್ರಸ ಕಟ್ಟಡ ಸಮಿತಿ ಅಧ್ಯಕ್ಷ ಬಶೀರ್ ಎನ್.ಎಂ, ಎಸ್ಸೆಸ್ಸೆಫ್ ಕೋಲ್ಲರಕೋಡಿ ಶಾಖಾಧ್ಯಕ್ಷ ಅನೀಸ್ ಬಳಪು,  ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ ಸ್ವಾಗತಿಸಿದರು. ಎಸ್ಸೆಸ್ಸೆಫ್ ಕೋಲ್ಲರಕೋಡಿ ಶಾಖಾ ಕಾರ್ಯದರ್ಶಿ ಶೆಬೀರ್ ಚೌಕ ವಂದಿಸಿದರು.

 DSC08403

DSC08395

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter