Published On: Sun, Mar 11th, 2018

ವರ್ಣರಂಜಿತ ಬಾಲಸಭೆ ಸಮಾರೋಪ

ಮಂಜೇಶ್ವರ: ಎ .ಯು .ಪಿ .ಶಾಲೆ ಪಳ್ಳತ್ತಡ್ಕದಲ್ಲಿ ಬಾಲಸಭೆ ಸಮಾರೋಪವು ಇತ್ತಿಚೇಗೆ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು . ವಾರ್ಡ್ ಮೆಂಬರ್ ಪುಷ್ಪ ಭಾಸ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು .
ಗಣ್ಯರಾದ ಪಿಟಿಎ ಅಧ್ಯಕ್ಷ ದಿನೇಶ್ ಹಾಗು ಮಾತೃಸಂಘದ ಅಧ್ಯಕ್ಷೆ ಬಿ.ಆರ್, ಸಿ ತರಬೇತುದಾರರಾದ ಈಶ್ವರ ಮಾಸ್ಟರ್ ಶುಭವನ್ನು ಹಾರೈಸಿದರು.
IMG-20180310-WA0062
ಅಧ್ಯಾಪಕರಾದ ಶರತ್ , ವಿಘ್ನೇಶ್ ಹಾಗೂ ಸುರೇಂದ್ರರವರು ತಯಾರಿಸಿದ ಈ ವರ್ಷದ ಶಾಲಾ ಕಾರ್ಯಕ್ರಮವನ್ನೊಳಗೊಂಡ ವೀಡಿಯೋ ಪ್ರದರ್ಶನಕ್ಕೆ ಪುಷ್ಪಾ ಚಾಲನೆ ನೀಡಿದರು . ಬಳಿಕ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು . ನಾಟಕ , ನೃತ್ಯ , ಹಾಡು , ದ್ರೃಶ್ಯಾವಿಷ್ಕಾರ , ಒಪ್ಪನ ,ಪ್ರಹಸನ ,ತಿರುವಾದಿರ , ಜಾನಪದ ನೃತ್ಯ, ಇನ್ನಿತರ ಕಾರ್ಯಕ್ರಮಗಳು ನೋಡುಗರ ಮನಸೆಳೆದವು.ಈ ಅಧ್ಬುತ ಕಾರ್ಯಕ್ರಮ ಗಳ ಯಶಸ್ವಿಗೆ ಅಧ್ಯಾಪಕರ ಹಾಗೂ ಮಕ್ಕಳ ನಿರಂತರ ಪರಿಶ್ರಮವೇ ಸಾಕ್ಷಿಯಾಗಿದೆ.ಮಧ್ಯಾಹ್ನದ ಸಮೃದ್ಧ ಭೋಜನ ವು ಎಲ್ಲರ ಹೊಟ್ಟೆಯನ್ನು ತಂಪಾಗಿಸಿತು. ಮುಖ್ಯೋಪಾಧ್ಯಾಯರಾದ ಮೋಹನನ್ ಸ್ವಾಗತಿಸಿ, ಸ್ಟಾಫ್ ಸೆಕ್ರೆಟರಿ ಲತಾ ಧನ್ಯವಾದ ವಿತ್ತರು. ಶಿಕ್ಷಕಿ ಶಾಲಿನಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter