ಬೆಳಕು( ಕವನ)
ಬೆಳಕನ್ನೇ ಹಿಡಿಯಲು
ಹೊರಟಿದೆ ಬೆಳದಿಂಗಳು
ಕಣ್ಣಲ್ಲಿ ಹೊಸ ಕನಸು ಕಟ್ಟುತ್ತಾ
ಕಾಣುವ ಕಣ್ಗಳಿಗೆ
ಮೊದವ ನೀಡುತ್ತಾ ..!
ಹೂವು ಕಟ್ಟಿದ ಬೆಳಕ
ಚಿಗುರಿನ ಮುಗ್ದ ತುಟಿಗಳಲಿ
ಮನ ಸೆಳೆವ ಮಂದಹಾಸ ..!
ಮೂಡಿದ ಆ ಎಳೆ ಕಿರಣದ
ತಂಪಾದ ಅನುಭೂತಿಗೆ
ನೋವು ಸೇರಿತು ಇತಿಹಾಸ .!
ಅರಳಿದ ಹೂವಿನ ನಗುವಲಿ
ಗಂಧ ಹರಡಿ ಕನಸಿನರಮನೆ
ಸೇರಿ ಹಳದಿ ಎಲೆಗಳಲ್ಲಿ ಸಂತಸ ತುಂಬಿತು
ನೇಸರನ ನಾಚಿಸುವ
ದೀಪದ ಹೊಳಪಿಗೆ ಮಣಿದ
ನಕ್ಷತ್ರಗಳು ಈಗ ಅವಳಲ್ಲಿ ಬೆಳಕ ತುಂಬಿತು..!
ಕವಿ: ಪ್ರೇಮಾತ್ಮ ಗಣೇಶ್ ಅದ್ಯಪಾಡಿ, ಮಂಗಳೂರು
ಚಿತ್ರ : ವರ್ಷಿಲ್ ಅಂಚನ್
Thanks for publishing my photo . (Ganesh & suddi9)