ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ನಿರ್ಮಿಸುತ್ತಾ ಕೊಹ್ಲಿ ಪಡೆ?
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಇನ್ನೊಂದು ಇತಿಹಾಸ ನಿರ್ಮಿಸುವ ತಯಾರಿಯಲ್ಲಿದೆ. ಈವರೆಗೂ ಸಾಕಷ್ಟು ದಾಖಲೆ ನಿರ್ಮಿಸಿರುವ ಕೊಹ್ಲಿ ಪಡೆ ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಲು ತುದಿಗಾಲಿನಲ್ಲಿ ನಿಂತಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಈವರೆಗೂ ಟೀಂ ಇಂಡಿಯಾ ಏಕದಿನ ಸರಣಿಯನ್ನು ಗೆದ್ದಿಲ್ಲ. ಇಂದು ನಡೆಯುವ ಪಂದ್ಯ ಟೀಂ ಇಂಡಿಯಾ ಪಾಲಾದಲ್ಲಿ ಸರಣಿ ಭಾರತದ ಮಡಿಲು ಸೇರಲಿದೆ. ಈ ಮೂಲಕ ಭಾರತ ಇತಿಹಾಸ ನಿರ್ಮಿಸಿಲಿದೆ. ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 3-0 ರಿಂದ ಮುಂದಿದೆ. ಟೀಂ ಇಂಡಿಯಾ ಫಾರ್ಮ್ ನಲ್ಲಿದ್ದು ನಾಲ್ಕನೇ ಪಂದ್ಯ ಕೂಡ ಭಾರತದ ಪಾಲಾಗುವ ನಿರೀಕ್ಷೆಯಿದೆ.
ವಾಂಡರರ್ಸ್ನಲ್ಲಿ ಇಂದು ನಾಲ್ಕನೇ ಏಕದಿನ ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ ಫಾರ್ಮ್ ನಲ್ಲಿದ್ದು ಹಿಂದಿನ ಎರಡು ಪಂದ್ಯಗಳಲ್ಲಿ 2 ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣವಾಗಿದ್ದಾರೆ. ಶಿಖರ್ ಧವನ್ ಕೂಡ ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ಆದ್ರೆ ರೋಹಿತ್ ಶರ್ಮಾ ಆಟ ಸ್ವಲ್ಪ ಚಿಂತೆಯ ವಿಷ್ಯವಾಗಿದೆ.