Published On: Fri, Dec 22nd, 2017

ಸೇವಾ ಸಂಸ್ಥೆಗಳಿಂದ ಸರಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿ: ರಮಾನಾಥ ರೈ

22vp iscon 1

 ಬೆಂಜನಪದವು: ಸೇವಾ ಸಂಸ್ಥೆಗಳು ಸರಕಾರದ ಜತೆ ಕೈ ಜೋಡಿಸಿದಾಗ ಸರಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳುತ್ತದೆ ಎಂದು  ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ.

22-6

ಶುಕ್ರವಾರ ಇಲ್ಲಿನ ಕೆನರಾ ಕಾಲೇಜಿನ ಹಿಂಬಾಗದ ಜಾಗದಲ್ಲಿ ಅಕ್ಷಯ ಪತ್ರ ಅಡುಗೆ ಮನೆಯ ಶಿಲಾನ್ಯಾಸದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಗಯಾಗಿ ಭಾಗವಹಿಸಿ ಮಾತನಾಡಿದ ಅವರು, ಸರಕಾರ ಶಾಲೆಗಳಿಗೆ ಮಧ್ಯಾಹ್ನ ಬಿಸಿಯೂಟ ನೀಡುತ್ತಿದ್ದು, ಆದರೆ ಸರಕಾರವೇ ಎಲ್ಲ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಸರಕಾರಕ್ಕೆ ಶಾಲೆಗಳಿಗೆ ಬಿಸಿಯೂಟ ನೀಡಲು ಕಷ್ಟವಾದಾಗ ಅದನ್ನು ಸೇವಾ ಸಂಸ್ಥೆಗಳು ವಹಿಸಿಕೊಳ್ಳುತ್ತದೆ ಎಂದು ಹೇಳಿದರು.22vp akshaya patra2

ಸರಕಾರದ ಕಾರ್ಯಕ್ರಮವನ್ನು ಇಸ್ಕಾನ್ ಮೂಲಕ ಮಕ್ಕಳಿಗೆ ಬಿಸಿಯೂಟ ಒದಗಿಸುತ್ತಿದೆ. ಆದ್ದರಿಂದ ಇಸ್ಕಾನ್ ಸಂಸ್ಥೆಗೂ ಹಾಗೂ ಈ ಅಡುಗೆ ಕೋನೆ ನಿರ್ಮಾಣಕ್ಕೆ ಸಹಾಯ ಮಾಡಿದ ಡಾ. ರವಿಚಂದ್ರನ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಆಹಾರ ಮತ್ತು ನಾಗರಿಕ ಸಚಿವ ಯು.ಟಿ.ಖಾದರ್ ಮಾತನಾಡಿ, ಮಾರ್ಗ ಬದಿ ನಿಂತು ಯಾರಿಗಾದರು ಬೈದರೆ ಅದು ದೇಶ ಪ್ರೇಮವಲ್ಲ. ಇಸ್ಕಾನ್ ಸಂಸ್ಥೆ ತನ್ನ ವಿಶ್ವಾಸದಿಂದ ಕೈಗೊಳ್ಳುತ್ತಿರುವ ಕಾರ್ಯಳೇ ನಿಜವಾದ ದೇಶ ಪ್ರೇಮ ಎಂದರು.

ಇಸ್ಕಾನ್ ಸಂಸ್ಥೆಯ ಎಲ್ಲ ಸ್ವಾಮೀಜಿಗಳು ಯಾವತ್ತು ದ್ವೇಷದಿಂದ ಮಾತನಾಡಿದ್ದನ್ನ ನಾನು ನೋಡಿಲ್ಲ. ಅವರಲ್ಲಿರುವ ಸೌಮ್ಯತೆ, ಪ್ರೀತಿ, ವಿಶ್ವಾಸ ಹಾಗೂ ತಾಳ್ಮೆ ಇವೆಲ್ಲವು ಸನಾತನ ಹಿಂದು ಧರ್ಮದ ಪ್ರತೀಕ ಎಂದು ಶ್ಲಾಘಿಸಿದರು.

ಇಶಾಪ್ರಿಯಾ ತೀರ್ಥ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿ ಆರಾಧನೆಯ ವಿಯದಲ್ಲಿ ಬೇರೆ ಬೇರೆ ರೀತಿಯ ಆರಾಧನೆಗಳಿದ್ದು, ಮೂರ್ತಿಯನ್ನಿಟ್ಟು ಆರಾಧನೆ ಮಾಡುವುದು ಒಂದು ಬಗೆ, ಯಜ್ಞಯಾಗಾಧಿಗಳನ್ನು ಇನ್ನೊಂದು ಬಗೆ ಎಂದು ವಿವರಿಸಿದರು.

ವಿದ್ಯಾದೀಶ ತೀರ್ಥ ಸ್ವಾಮೀಜಿ  ಮಾತನಾಡಿ, ಬಾಲಕ ಹಾಗೂ ಮಕ್ಕಳಲ್ಲಿ ಭಗವಂತ ವಿಶೇಷವಾಗಿ ಸ್ಪಂದಿಸುತ್ತಾ ಇರುತ್ತಾನೆ. ಹಾಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ಇನ್ನಿತರ ಮಾಡುವ ಎಲ್ಲ ದಾನಗಳು ನೇರ ಕೃಷ್ಣನಿಗೆ ಮುಟ್ಟುವಂತದ್ದು ಎಂದು ನುಡಿದರು.

 

 

22-7

22-19

22-16

ಅಕ್ಷಯ ಪತ್ರಕ್ಕೆ ಜಾಗ ಒದಗಿಸಿಕೊಟ್ಟ ಡಾ.ವಿ.ರವಿಚಂದ್ರನ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಂಚಲಪತಿ ಸ್ವಾಮೀಜಿ, ಫಾದರ್ ಡಾ.ಅಲೋಶಿಯಸ್ ಪಾವುಲ ಡಿಸೋಜಾ ಆಶೀರ್ವಚನ ನೀಡಿ ಮಾತನಾಡಿದರು. ಹುಬ್ಬಳ್ಳಿ-ಧಾರವಾಡ ಅಕ್ಷಯ ಪತ್ರ ಫೌಂಡೇಶ್ ಅಧ್ಯಕ್ಷ ರಾಜೀವ್ ಲೋಕನ್ ದಾಸ್, ದ.ಕ.ಜಿಲ್ಲೆಯ ಅಕ್ಷಯ ಪತ್ರ ಫೌಂಡೇಶ್ ಅಧ್ಯಕ್ಷ ಕಾರುಣ್ಯ ಸಾಗರ ದಾಸ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿ, ಶ್ರೀ ಶ್ರೀ  ಈಶಾಪ್ರಿಯಾ ತೀರ್ಥ ಸ್ವಾಮೀಜಿ, ಚಂಚಲಪತಿ ದಾಸ, ಎಮ್ ಆರ್ ಪಿ ಎಲ್ ಮ್ಯಾನಜಿಂಗ್ ಡೈರೆಕ್ಟರ್ ಎಚ್.ಕುಮಾರ್, ಕರ್ಣಾಟಕ ಬ್ಯಾಂಕ್ ಜ.  ಮ್ಯಾನೆಜರ್  ನಾಗರಾಜ್ ರಾವ್  ಬಿ., ಯನಪೋಯ ವಿವಿಯ ಚ್ಯಾರ್ ಮ್ಯಾನ್ ಯನಪೋಯ ಅಬ್ದುಲ್ಲಾ ಕುಂಞಿ,  ಜಿ.ಪಂ. ಅಧ್ಯಕ್ಷೆ ಮೀನಾಕ್ಷೀ ಶಾಂತಿಗೋಡ್,  ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಂಗಳೂರು ಶಾಸಕ ಜೆ.ಆರ್. ಲೋಬೋ ಮತ್ತಿತರರು ಗಣ್ಯರು  ಉಪಸ್ಥಿತರಿದ್ದರು.22-8

22-5

22-7

22-13

22-15

22-9

22-11

22-10

22-4

22-20

ಕಾರುಣ್ಯಸಾಗರ್ ದಾಸ್  ಸ್ವಾಗತಿಸಿ ರಾಜೀವ ಲೋಚನ್ ದಾಸ  ವಂದಿಸಿ ಮನೋಹರ್ ಪ್ರಸಾದ್  ಕಾರ್ಯಕ್ರಮ ನಿರೂಪಿಸಿದರು.

 

 

 

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter