ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಚಲನ ಚಿತ್ರ ನಟಿ ಅಮೂಲ್ಯ
ಕಲ್ಲಡ್ಕಃ ಅಳಿಸಿ ಹೋಗುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮತ್ತು ಕೃಷಿ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸವನ್ನು ಕಲ್ಲಡ್ಕ ಶ್ರೀ ರಾಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಮಾಡುತ್ತಿರುವುದು ದೇಶಕ್ಕೆ ಮಾದರಿ ಎಂದು ಖ್ಯಾತ ಚಲನ ಚಿತ್ರ ನಟಿ ಅಮೂಲ್ಯ ಹೇಳಿದರು. ಅವರು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ವಸುಧಾರ ಗೋಶಾಲೆಯಲ್ಲಿ ನಡೆದ ಗೋಪೂಜೆಯಲ್ಲಿ ಭಾಗವಹಿಸಿ ಬಳಿಕ ಶಿಶು ಮಂದಿರದ ಸೀತಾ ಕುಟೀರದ ಉದ್ಘಾಟನೆಯನ್ನು ನೆರವೇರಿಸಿ, ಮಹೇಂದ್ರ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ದಲ್ಲಿ ಭಾಗವಹಿಸಿ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಶಿಕ್ಷಣ ಸಂಸ್ಥೆಯಿಂದ ನಾನು ಕಲಿತು ಕೊಳ್ಳಲು ಬಹಳಷ್ಟು ಇದೆ. ವಿದ್ಯಾ ಕೇಂದ್ರ ನೋಡಿ ಬಹಳಷ್ಟು ಖುಷಿ ತಂದಿದೆ. ಇಲ್ಲಿನ ಸಂಸ್ಕಾರಯುತವಾದ ಶಿಕ್ಷಣ ರಾಜ್ಯಕ್ಕೆ ಪಸರಿಸಲಿ ಮತ್ತು ಮುಖ್ಯವಾಗಿ ಬೆಂಗಳೂರು ನಗರಕ್ಕೆ ಸಂಸ್ಕಾರದ ಶಿಕ್ಷಣ ಅಗತ್ಯವಿದೆ ಎಂದರು.
ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾವರ್ಧಕ ಸಂಘದ ಅದ್ಯಕ್ಷ ಡಾ.ಪ್ರಭಾಕರ ಭಟ್ ಮಾತನಾಡಿ, ಸಾಧನೆಯನ್ನು ಮಾಡುವ ವಿಧ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಣ ಸಂಸ್ಥೆಗಳು ಬೇಕಾಗಿದೆ. ಮಗುವನ್ನು ಧರ್ಮ ಸಂಸ್ಕ್ರತಿಯ ಜೊತೆಗೆ ಪರಿವರ್ತನೆ ಮಾಡುವ ಕೆಲಸ ಶಿಕ್ಷಣ ಈ ಸಂಸ್ಥೆಯಿಂದ ಮಾಡಲಾಗುತ್ತಿದೆ. ಮಣ್ಣಿನ ಸತ್ವವನ್ನು ಮತ್ತು ಜೀವನದ ಉದ್ದೇಶವನ್ನು ತಿಳಿಸುವ ವಿಶಿಷ್ಠವಾದ ಶಿಕ್ಷಣವನ್ನು ವಿದ್ಯಾಕೇಂದ್ರದಲ್ಲಿ ನೀಡಲಾಗುತ್ತಿದೆ. ಸರಕಾರದಲ್ಲಿ ಮತ್ತೆ ಅನ್ನಕ್ಕಾಗಿ ಭಿಕ್ಷೆ ಬೇಡುವ ಕೆಲಸಕ್ಕೆ ಹೋಗುವುದಿಲ್ಲ. ಈ ದೇಶದ ಮಣ್ಣಿನ ಸಂಸ್ಕ್ರತಿ, ಚಿಂತನೆ, ಅಧಾರದ ಮೇಲೆ ಸ್ವಾಭಿಮಾನದಿಂದ ಬದುಕುವುದನ್ನು ಈ ಸಂಸ್ಥೆ ಕಲಿಸಿಕೊಡುತ್ತದೆ, ಐದು ಕಿಂಟ್ವಾಲ್ ಅಕ್ಕಿ ಈ ಬಾರಿ ಶಾಲೆಯ ಗದ್ದೆಯಲ್ಲಿ ಬೆಳೆಯಲಾಗಿದೆ ಅಮೂಲಕ ಅನ್ನ ಕಸಿದ ಸರ್ಕಾರಕ್ಕೆ ಸಂದೇಶ ನೀಡಲಾಗಿದೆ ಎಂದು ಅವರು ಹೇಳಿದರು .
ವೇದಿಕೆಯಲ್ಲಿ ಅಮೂಲ್ಯ ಅವರ ಪತಿ ಉದ್ಯಮಿ ಜಗದೀಶ್ ,ಬೆಂಗಳೂರು ಲಹರಿ ಕಂಪೆನಿಯ ಮಾಲಕ ಜಿ.ವೇಲು , ಉದ್ಯಮಿ ರಾಮಚಂದ್ರ ,ಬೆಂಗಳೂರು ಮಹಿಳಾ ಮೋರ್ಚಾದ ಅದ್ಯಕ್ಷೆ ಸುನೀತಾ ಮಂಜುನಾಥ, ಮೈಸೂರಿನ ಸುಬ್ರಹ್ಮಣ್ಯ ತಂತ್ರಿ,ಎಸ್.ಸಿ. ಮೋರ್ಚಾದ ಉಪಾಧ್ಯಕ್ಷ ಮುರಳಿಮೋಹನ್, ವಕೀಲರಾದ ಗಿರೀಶ್, ಹಾಲೂರಿನ ಪತ್ರಕರ್ತ ಎಚ್.ವಿ.ಪ್ರಥ್ವಿ , ಬ್ಯಾಡಗಿ ಕ್ಷೇತ್ರದ ಬಿಜೆಪಿ ಮುಖಂಡ ಬಾಲಚಂದ್ರ ಎಸ್ ಪಾಟೀಲ. ಸಕಲೇಶಪುರ ದ ಬಿಜೆಪಿ ಮುಂಖಂಡ ಹೇಮಂತ್ ಕುಮಾರ್, ಬಿಜಾಪುರದ ಪಿ.ಎಸ್.ಐ ಮಹೇಂದ್ರ ನಾಯಕ್, ತಿಪಟೂರು ಕ್ಷೇತ್ರದ ಬಿಜೆಪಿ ಮುಖಂಡ ಕೆ.ಟಿ. ಶಾಂತಕುಮಾರ್, ದಾರವಾಡದ ಮಾಜಿ ಮೇಯರ್ ಶಿವು ಹಿರೆಮಠ, ಶಿವರೂರು ಪಿ.ಎಲ್.ಡಿ ಬ್ಯಾಂಕ್ ನ ಅಧ್ಯಕ್ಷ ಶಿವಯೋಗಿ, ದಿನಕರ್ಜೋಶಿ , ನಿಕೇಶ್ ಸಕಲೇಶಪುರ, ಸುನಿಲ್ ಕುಲಕರ್ಣಿ,ಮೈಸೂರು ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ನಾರಾಯಣ ಗೌಢ ,ಮಂಗಳೂರು ವಿಕಾಸ ಕಾಲೇಜಿನ ಸಲಹೆಗಾರ ಅನಂತ ಪ್ರಭು ಜಿ, ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಅದ್ಯಕ್ಷ ನಾರಾಯಣ ಸೋಮಾಯಾಜಿ, ಸಂಚಾಲಕ ವಸಂತ ಮಾದವ, ಪದ್ಮನಾಭ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು. ಆಶಾ ಪ್ರಸಾದ್ ರೈ ಸ್ವಾಗತಿಸಿ, ಮಲ್ಲಿಕಾ ಶೆಟ್ಟಿ ವಂದಿಸಿದರು. ರಾಜೀವಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ : ಕಿಶೋರ್ ಪೆರಾಜೆ