Published On: Thu, Oct 12th, 2017

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗಾಗಿ

1. ಬೇಸಿಗೆ ಸಮಯದಲ್ಲಿ ನಾವು ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತೇವೆ, ಹಾಗೂ ಆ ಸಮಸ್ಯೆಗಳಿಂದಾಗಿ ನಾವು ಹಲವಾರು ಬಾರಿ ಕಿರಿಕಿರಿಯನ್ನು ಅನುಭವಿಸಿದ್ದೂ ಇದೆ ಸಾಕಪ್ಪಾ ಈ ಬೇಸಿಗೆಯ ರಗಳೆ ಎಂದು ನಾವು ಚಿಂತೆಯಿಂದ ಬಳಲಿದ್ದೂ ಉಂಟು. ಇನ್ನು ಮುಂದೆ ಆ ಚಿಂತೆ ಬಿಡಿ ಬೇಸಿಗೆಯಲ್ಲಿ ನಿಮ್ಮ ತ್ವಚೆಗಳ ರಕ್ಷಣೆಗಾಗಿ ಮನೆಯಲ್ಲೇ ತತಯಾರಿಸಬಹುದಾದ ಕೆಲವು ಮನೆಮದ್ದುಗಳನ್ನು ನಾವು ನಿಮಗೆ ತೋರಿಸಲಿದ್ದೇವೆ.
ಬಿಸಿಲಿನಿಂದಾಗಿ ಚರ್ಮ ಕಪ್ಪಗಾಗುವುದು:
ಬೇಸಿಗೆಯ ಸಂದರ್ಭದಲ್ಲಿ ಬಿಸಿಲಿನ ಶಾಕದಿಂದಾಗಿ ಚರ್ಮದ ಮೇಲೆಲ್ಲಾ ಸುಟ್ಟಂತೆಲ್ಲಾ ಕಲೆಗಳಾಗುವುದು ಸಹಜ. ಬೇಸಿಗೆಯ ಸಂದರ್ಭದಲ್ಲಿ ಸೂರ್ಯಕಿರಣಗಳು ಹೊರಸೂಸುವ ಕೆಲವು ವಿಕಿರಣಗಳು ನಿಮ್ಮ ಚರ್ಮಕ್ಕೆ ಹಾನಿಯನ್ನುಂಟುಮಾಡಬಹುದು ಈ ಕಾರಣಗಳಿಂದಾಗಿ ಚರ್ಮದಲ್ಲಿ ಗಾಯಗಳಾಗಿ ,ತುರಿಕೆ, ವಾಕರಿಕೆಯಂತಹಾ ಲಕ್ಷಣಗಳು ಕಂಡುಬರಬಹುದು ,ದೇಹವು ಸೂರ್ಯರಶ್ಮಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲಾಗದಂತಹಾ ಪರಿಸ್ಥಿತಿ ಉಂಟಾದಾಗ ಮಾತ್ರ ಈ ರೀತಿಯ ಸಮಸ್ಯೆಗಳು ಕಂಡುಬರುತ್ತವೇ.. ನೀವು ಇಂತಹಾ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಇನ್ನು ಮುಂದೆ ಚಿಂತೆ ಬಿಡಿ.. ನಾವು ಕೆಲವು ಮನೆ ಮದ್ದುಗಳನ್ನು ನಿಮಗೆ ತೋರಿಸಲಿದ್ದೇವೆ.
* ಎರಡು ಟೇಬಲ್ ಸ್ಪೂನ್ ಓಟ್ಸ್ ಜೊತೆಗೆ ಒಂದು ಬೌಲ್ ಪಪ್ಪಾಯ ಹಣ್ಣಿನ , ಒಂದು ಟೇಬಲ್‍ಸ್ಪೂನ್ ಜೇನುತುಪ್ಪ ಬೆರೆಸಿ ಚೆನ್ನಾಗಿ ಕಲಸಿ ಆ ಪೇಸ್ಟ್ ಅನ್ನು ಚರ್ಮದ ಮೇಲೆಲ್ಲಾ ಹಚ್ಚಿ ಇಪತ್ತರಿಂದ ಮೂವತ್ತು ನಿಮಿಷ ಬಿಟ್ಟ ಬಳಿಕ ಶುದ್ಧವಾದ ನೀರಿನಲ್ಲಿ ತೊಳೆಯಿರಿ , ಇದೇ ರೀತಿ ಪ್ರತಿದಿನ ಮಾಡಿದಲ್ಲಿ ನಿಮ್ಮ ಚರ್ಮದ ತ್ವಚೆ ಕಾಂತಿಯುತವಾಗಿ ಹೊಳೆಯುವುದು.
* ಒಂದು ಬೌಲ್‍ನಲ್ಲಿ ಚೆನ್ನಾಗಿ ತುರಿದ ಮುಳ್ಳುಸೌತೆಯನ್ನು ತೆಗೆದುಕೊಂಡು ಅದರ ರಸವನ್ನು ಹಿಂಡಿ, ಅದಕ್ಕೆ ಎರಡು ಟೇಬಲ್‍ಸ್ಪೂನ್ ನಿಂಬೇರಸವನ್ನು ಸೇರಿಸಿ ಚೆನ್ನಾಗಿ ಕಲಸಿ , ತೆಳುವಾದ ಹತ್ತಿಯ ಮೂಲಕ ನಿಮ್ಮ ಚರ್ಮದ ಮೇಎಲ ಹಚ್ಚಿ ಹದಿನೈದರಿಂದ ಇಪ್ಪತ್ತು ನಿಮಮ್ಮಿಷ ಬಿಟ್ಟ ಬಳಿಕ ಶುದ್ಧವಾದ ನೀರಿನಿಂದ ತೊಳೆಯಿರಿ.
*ಎರಡು ಟೇಬಲ್ ಸ್ಪೂನ್ ನಿಂಬೇರಸಕ್ಕೆ ನಾಲ್ಕು ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಸಿ ಚರ್ಮದ ಮೇಲೆ ಹಚ್ಚಿ ಇಪ್ಪತ್ತು ನಿಮಿಷ ಬಿಟ್ಟನಂತರ ಶುದ್ಧವಾದ ನೀರಿನಲ್ಲಿ ಮುಖ ತೊಳೆಯಿರಿ .
* ಒಂದು ಬೌಲ್‍ನಲ್ಲಿ ಸಣ್ಣಗೆ ಹೆಚ್ಚಿದ ಟೊಮ್ಯಾಟೋವನ್ನು ತೆಗೆದುಕೊಂಡು ಚೆನ್ನಾಗಿ ಹಿಂಡಿ ರಸ ತೆಗೆದು ,ಸ್ವಲ್ಪ ಮೊಸರು ಸೇರಿಸಿ , ಚರ್ಮದ ಮೇಲೆ ಹಚ್ಚಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಬಿಟ್ಟ ಬಳಿಕ ಚೆನ್ನಾಗಿ ಮುಖ ತೊಳೆಯಿರಿ.
ನಾವು ತಿಳಿಸಿದ ಮನೆಮದ್ದುಗಳ ಜೊತೆಯಲ್ಲಿ ಚೆನ್ನಾಗಿ ನೀರು ಕುಡಿಯಿರಿ.

skin

2. ಬಿಸಿಲಿನನ ಹೊಡೆತದಿಂದದ ರಕ್ಷಣೆಗಾಗಿ
ಬೇಸಿಗೆಯಲ್ಲಿ ಅಧಿಕವಾಗಿ ಸೂರ್ಯರಶ್ಮಿಯ ಸಂಪರ್ಕದಲ್ಲಿರುವ ಎಲ್ಲರಿಗೂ ಬಿಸಿಲಿನ ಹೊಡೆತದ ಅನುಭವವಾಗಿರುತ್ತದೆ. ಬಿಸಿಲಿನ ಬೇಗೆಯಿಂದಾಗಿ ತಲೆಸುತ್ತು, ಭ್ರಮೆ ,ವಾಕರಿಕೆ ಇತ್ಯಾದಿಗಳು ನಿಮ್ಮನ್ನು ಕಾಡಬಹುದು, ಆದರೆ ಅವೆಲ್ಲದರಿಂದ ಮುಕ್ತಿ ಹೊಂದುವ ಸಾಮಾನ್ಯ ಮನೆದ್ದುಗಳು ಇಲ್ಲಿವೆ,
* ಒಂದು ಲೀಟರ್ ನೀರಿಗೆ ಆರರಿಂದ ಏಳು ಮಾವಿನಹಣ್ಣು ಸೇರಿಸಿ ಹದಿನೈದು ನಿಮಿಷಗಳ ಕಾಲ ಕುದಿಸಿ , ನಂತರ ಮಾವಿನಹಣ್ಣುಗಳನ್ನು ತೆಗೆದು ಅವುಗಳನ್ನು ಸುಲಿದು ನಂತರೆ 250 ಮಿಲೀ ಲೀಟರ್ ನೀರು ಸೇರಿಸಿ,ಒಂದು ಚಮಚ ಜೀರಿಗೆ ಹುಡಿ, ಒಂದು ಚಮಚ ಉಪ್ಪು,ಎರಡು ಚಮಚ ಸಕ್ಕರೆ , ಎರಡು ಚಮಚ ಜಜ್ಜಿದ ಪುದೀನಾ ಸೇರಿಸಿ ಪೇಸ್ಟ್ ತಯಾರಿಸಿ ಫ್ರಿಡ್ಜ್‍ನಲ್ಲಿ ತೆಗೆದಿರಿಸಿ , ದಿನಕ್ಕೆರಡು ಬಾರಿ ಸೇವಿಸಿದರೆ ಬಿಸಿಲಿನ ಹೊಡೆತದಿಂದ ರಕ್ಷಣೆ ಪಡೆಯಬಹುದು.
* ಒಂದು ಗ್ಲಾಸ್ ಹಾಲಿಗೆ , ಎರಡು ಚಮಚ ಬದಾಮಿ ಹುಡಿ, ಎರಡು ಚಮಚ ಒಣಗಿದ ಗುಂಆಬಿ ದಳಗಳನ್ನು ಸೇರಿಸಿ ಚೆನ್ನಾಗಿ ಕಲಸಿ.. ಬಾಯಾರಿಕೆಯಾದಾಗ ಇದನ್ನು ಸವಿದರೆ ಬಿಸಿಲಿನ ಹೊಡೆತದಿಂದ ರಕ್ಷಣೆ ಪಡೆಯಬಹುದು.
*ಈ ಎಲ್ಲಾ ಮನೆಮದ್ದುಗಳ ಜೊತೆಯಲ್ಲಿ ತಲೆಗೆ ತೆಂಗಿನ ಎಣ್ಣೆಯನ್ನು ಹಚ್ಚಿ, ಆದಷ್ಟು ಟೀ ಕಾಫಿಗಳಿಂದ ದೂರವಿದ್ದು , ಸಾಧ್ಯವಾದಷ್ಟು ಮಜ್ಜಿಗೆ ಕುಡಿಯಿರಿ ಜೊತೆಯಲ್ಲಿ ನೀರಿನಂಶವಿರುವ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು

skin 1

3. ಬೇಸಿಗೆ ಸಂದರ್ಭದಲ್ಲಿ ಅಧಿಕವಾದ ಬೆವರಿನಿಂದಾಗಿ ,ನಿಮ್ಮ ಮೈ ತುಂಬಾ ಬೆವರುಸಾಲೆ ಉಂಟಾಗಿ ಕಿರಿಕಿರಿ ಅನುಭವಿಸುತ್ತಿದ್ದೀರಾ? ಬೆವರುಸಾಲೆಯಿಂದಾಗಿ ಬೇಸರವನ್ನು ಅನುಭವಿಸುತ್ತಿದ್ದೀರಾ? ಹಾಗಾದರೆ ಚಿಂತೆ ಬಿಡಿ ಇನ್ಮುಂದೆ ಮನೆಯ್ಲೇ ತಯಾರಿಸಬಹುದಾದ ಕೆಲ ಮನೆ ಮದ್ದುಗಳನ್ನು ನಾವು ನಮಗೆ ತೋರಿಸ್ತೀವಿ.
* ಅರ್ಧ ಕಪ್ ಕಡ್ಲೆಹುಡಿಗೆ ಹದಿನೈದರಿಂದದ ಇಪ್ಪತ್ತು ಚೆನ್ನಾಗಿ ಜಜ್ಜಿದ ಕಹಿಬೇವಿನ ಎಲೆಯನ್ನು ಸೇರಿಸಿ ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಬೆವರುಸಾಲೆಯಾದ ಜಾಗದಲ್ಲೆಲೇ ಹಚ್ಚಿ ಹದಿನೈದರಿಂದ ಇಪತ್ತು ನಿಮಿಷ ಬಿಟ್ಟ ಬಳಿಕ ಶುದ್ಧವಾದ ನೀರಿನ್ಲಿ ಚೆನ್ನಾಗಿ ತೊಳೆಯಿರಿ .
* ಒಂದು ಪಪ್ಪಾಯ ಪೀಸ್ ಅಥವಾ ಮುಳ್ಳುಸೌತೆಯ ಪೀಸ್ ಅನ್ನು ಬೆವರುಸಾಲೆಯ ಮೇಲೆ ಚೆನ್ನಾಗಿ ಉಜ್ಜಿ ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ಚೆನ್ನಾಗಿ ಶುದ್ಧವಾದ ನಿರಿನಿಂದ ತೊಳೆಯಿರಿ.
* ಈ ಎಲ್ಲಾ ಮನೆಮದ್ದುಗಳ ಜೊತೆಯಲ್ಲಿ ಬೇಸಿಗೆಯ ಸಮಯದಲ್ಲಿ ಆದಷ್ಟು ಬಿಗಿತವಿಲ್ಲದ ಹತಿಯ ಬಟ್ಟೆಗಳನ್ನು ಬಳಸುವುದು ಒಳ್ಳೆಯದು.

4. ನಿರ್ಜಲೀಕರಣ.
ಮಾನವನ ದೇಹದ 75% ರಚನೆಯು ನೀರಿನಿಂದಾಗಿದೆ.ದೇಹದ ಎಲ್ಲಾ ಕೆಲಸ ಕಾರ್ಯಗಳಿಗೂ ನೀರು ಬಹಳ ಮುಖ್ಯ , ಆದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಆರೊಗ್ಯದಲ್ಲಿ ಏರುಪೇರಾಗುವುದು ಸಹಜ . ಅಧಿಕ ಬೆವರು, ಮೂತ್ರ, ಅತಿಸಾರ ದಿಂದ ಸಹಾ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವ ಸಂಭವವಿದೆ. ನಿರ್ಜಲೀಕರಣದಿಂದಾಗಿ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ನೀವೂ ಇಂತಹಾ ಸಮಸ್ಯೆಗಳಿಂದ ಬಳಲುತತ್ತಿದ್ದರೆ ನೀವಿನ್ನು ಚಿಂತಿಸುವ ಅವಶ್ಯಕತೆಯಿಲ್ಲ ನಿರ್ಜಲೀಕರಣವನ್ನು ತಡೆಗಟ್ಟುವ ಕೆಲವು ಮನೆ ಮದ್ದುಗಳನ್ನು ನಾವು ನಿಮಗೆ ತೋರಿಸಲಿದ್ದೇವೆ.
* ಒಂದು ಲೀಟರ್ ನೀರಿಗೆ ಎಂಟು ಟೇಬಲ್‍ಸ್ಪೂನ್ ಸಕ್ಕರೆ , ಒಂದು ಟೀಸ್ಪೂನ್ ಉಪ್ಪು ಸೇರಿಸಿ ಕುಡಿಯುವುದರಿಂದ ನಿರ್ಜಲಿಕರಣದ ಸಮಸ್ಯೆ ಕಾಡುವುದಿಲ್ಲ.
*ಒಂದು ಗ್ಲಾಸ್ ಮಜ್ಜಿಗೆಗೆ ಒಂದು ಟೀಸ್ಪೂನ್ ಶುಂಠಿ ಹುಡಿಯನ್ನು ಸೇರಿಸಿ ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಸೇವಿಸುವುದರಿಂದ ನಿರ್ಜಲಲಿಕರಣದ ಸಮಸ್ಯೆ ದೂರವಾಗಬಹುದು.
* ಇವೆಲ್ಲಾ ಪ್ರಯತ್ನದ ಜೊತೆಯಲ್ಲಿ ಬೇಸಿಗೆಯಲ್ಲಿ ತಂಪು ಪಾನೀಯ, ಕಾಫಿ, ಟೀ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.

ಮೂಗಿನಿಂದ ರಕ್ತ ಸೋರುತ್ತಿದ್ದರೆ.
ಬೇಸಿಗೆಯಲ್ಲಿ ಸೂರ್ಯನ ತಾಪದಿಂದಾಗಿ ಮೂಗಿನಿಂದ ರಕ್ತ ಒಸರುತ್ತಿದೆಯೇ ? ಈ ರೀತಿಯ ಸಮಸ್ಯೆಯಿಂದಾಗಿ ನೀವು ಬೇಸ್ತು ಹೋಗಿರುವಿರಾ? , ಹಲವಾರು ಸಂದರ್ಭಗಳಲ್ಲಿ ಮಕ್ಕಳನ್ನು ಈ ತೊಂದರೆಗಳು ಕಾಡುವುದು ಇದೆ , ಅತಿಯಾದ ತೇವ ಸಹಾ ಮೂಗಿನಿಂದ ರಕ್ತ ಸೋರುವ ಸಮಸ್ಯೆಗೆ ಕಾರಣವಾಗಬಹುದು, ನಾವಿಂದು ಕೆಲವು ಮನೆಮದ್ದುಗಳ ಮೂಲಕ ಈ ಸಮಸ್ಯೆಗಳಿಂದ ಮುಕ್ತಿ ಹೊಂದೋಣ.
ಒಂದು ಶುಚಿಯಾದ ಬಟ್ಟೆಯಲ್ಲಿ ನಾಲ್ಕೈದು ಐಸ್ ಕ್ಯೂಬ್ಗಳನ್ನು ಇಟ್ಟು ಬಟ್ಟೆಯನ್ನು ಮಡಚಿ ಮೂಗಿನ ಮೇಲೆ ಐದರಿಂದ ಆರು ನಿಮಿಷಗಳ ಕಾಲ ಮೂಗಿನ ಮೇಲೆ ಇಟ್ಟರೆ ಮೂಗಿನಿಂದ ರಕ್ತ ಒಸರುವುದು ನಿಲ್ಲುವುದು .

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter