ಅಮೃತ ಸಂಜೀವಿನಿ ಸಹಾಯಹಸ್ತ
ಮಂಗಳೂರು : ಮನುಷ್ಯ ಬೆಳೆದಂತೆ ಮನುಷ್ಯನ ಭಾವನೆಗಳು, ಆಸೆಗಳು ಬೆಳೆಯುತ್ತವೆ. ಅವನ ಆ ಆಸೆಗಳು ಭಾವನೆಗಳು ಮುಂದಕ್ಕೆ ಅವನು ಪ್ರಖ್ಯಾತಿ ಅಥವಾ ಕುಖ್ಯಾತಿ ಪಡೆಯಲು ಸಹಕಾರವಾಗುತ್ತದೆ.ಹೀಗೆ ಅಶಕ್ತರ ಕಷ್ಟದ ದಿನಚರಿಗೆ ಹೆಗಲಾಗಿ ನಿಲ್ಲಬೇಕೆಂಬ ಭಾವನೆ ಹಾಗೂ ಈ ಮೂಲಕ ಸಮಾಜವನ್ನು ಬದಲಾಯಿಸಬಹುದೆಂಬ ಆಸೆ ಇಂದು #ಅಮೃತಸಂಜಿವಿನಿಲ ಎಂಬ ಸಂಸ್ಥೆಯ ಉಗಮಕ್ಕೆ ಕಾರಣವಾಯಿತು. ವಜ್ರದೇಹಿ ಮಠದ ಯತಿವರ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಉತ್ತಮ ಮಾರ್ಗದರ್ಶನ ಹಾಗೂ ಮುತುವರ್ಜಿಯಲ್ಲಿ ಒಟ್ಟಾದ ಯುವಶಕ್ತಿ ಇಂದು ಅಶಕ್ತ ಸಮಾಜಕ್ಕೊಂದು ನಂದಾ ದೀಪವಾಗಿ ಬೆಳಗುತ್ತಿದೆ.ಕಳೆದ 22 ತಿಂಗಳಲ್ಲಿ ಅಮೃತಸಂಜೀವಿನಿಲ ಒಮ್ಮೆಯೂ ತಿರುಗಿ ನೋಡದೆ ಕೇವಲ ಸೇವೆಯೊಂದನ್ನೇ ದ್ಯೇಯವಾಗಿಸಿ ಮುನ್ನಡೆಯುತ್ತಿದೆ. ಎದುರಿಗೆ ಬಂದ ಟೀಕೆ-ಟಿಪ್ಪಣಿಗಳನ್ನೆಲ್ಲಾ ಏರೋ ಏಣಿಯಾಗಿಸಿ ತನ್ನ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಸಾಗಿರುವ ಪರಿಣಾಮ ಸಂಸ್ಥೆ ಇಂದಿಗೆ ಫಲಾಪೇಕ್ಷೆ ಇಲ್ಲದ ಸಂಘಟಿತ ಯುವ ಮನಸ್ಸುಗಳಿಂದ ಸಹಾಯಧನ ಸಂಗ್ರಹಿಸಿ 22 ಮಾಸಿಕ ಯೋಜನೆ ಹಾಗೂ 37 ತುರ್ತು ಸೇವಾ ಯೋಜನೆಯ ಮೂಲಕ 16,23,500 ರೂಪಾಯಿಗಳನ್ನು ಅಶಕ್ತ ಸಮಾಜದ ಏಳಿಗೆಗಾಗಿ ವಿನಿಯೋಗಿಸಿದೆ ಎನ್ನಲು ಹಮ್ಮೆ ಆಗುತ್ತಿದೆ.ಅಮೃತಸಂಜೀವಿನಿ ತನ್ನ 22ನೇ ಮಾಸಿಕ ಯೋಜನೆಯನ್ನು ಇದೀಗ ಯಶಸ್ವಿಯಾಗಿ ಪೂರೈಸಿದೆ. ಬೆಳ್ತಂಗಡಿ ತಾಲೂಕಿನ ಬೆದ್ರ ಬೆಟ್ಟು ಎಂಬ ಗ್ರಾಮದಲ್ಲಿ ಹೊಟ್ಟೆ ಪಾಡಿಗಾಗಿ ಟೈಲರಿಂಗ್ ಉದ್ಯೋಗ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತಿದ್ದ ತನಿಯಪ್ಪ ಎಂಬವರು 2 ವರ್ಷಗಳ ಮೊದಲು ಜೋರಾದ ಕಾಲು ನೋವಿನಿಂದ ಬಳಲುತಿದ್ದು ನೋವಿನ ನಿವಾರಣೆಗೆ ಮೆಡಿಕಲಿನಲ್ಲಿ ಸಿಗುವ ಮಾತ್ರೆ ತಿನ್ನುತಿದ್ದ ಪರಿಣಾಮ ಕಳೆದ ಒಂದು ವರ್ಷದ ಹಿಂದೆ ಲಿವರ್ ಸಮಸ್ಯೆಗೆ ತುತ್ತಾದರು. ಪರಿಣಾಮ ಮನೆಗೆ ಆದಾರ ಸ್ಥಂಭವಾಗಿದ್ದ ತನಿಯಪ್ಪ ಕೆಲಸಕ್ಕೂ ಹೋಗಲಾರದೆ ಮನೆಯಲ್ಲಿ ಕೂರ ಬೇಕಾಯಿತು. ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿರುವ ಇವರ ಮನೆಯು ಈಗಲೋ ಆಗಲೋ ಬಿದ್ದು ಹೋಗುವ ಪರಿಸ್ಥಿತಿಯಲ್ಲಿ ಇದೆ. ವಾರಕ್ಕೆ 3 ಸಲ ಡಯಾಲಿಸಿಸ್ ಮಾಡಿಸಿಕೊಳ್ಳ ಬೇಕಾದರೆ ವಾರಕ್ಕೆ 7 ರಿಂದ 8 ಸಾವಿರ ಖರ್ಚು ಬೀಳುವುದರಿಂದ ವಾರಕ್ಕೆ 2 ಸಲ ಡಯಾಲಿಸಿಸ್ ಮಾಡಿಸಿ ಕೊಳ್ಳುತಿದ್ದಾರೆ. ಊರಿನ ಯುವಕರ ಸಹಾಯದಿಂದ ದಿನದ ಖರ್ಚು ಹೋಗುತ್ತಿದೆಯಾದರೂ ಈ ಕುಟುಂಬ ಮನೆಯಲ್ಲಿ ದುಡಿಯುವವರಾರು ಇಲ್ಲದೆ ತುಂಬಾ ಸಂಕಷ್ಟದಲ್ಲಿ ಇದೆ.
ಇವರ ಈ ನೋವಿನ ಮಾತು ಸಂಜೀವಿನಿಗಳ ತಂಡ ಕೇಳಿ ಅವರ ಕುಟುಂಬಕ್ಕೆ ಧೈರ್ಯ ತುಂಬಿ ಇವರ ಸಮಸ್ಯೆಗೆ ಹೆಗಲಾಗುವ ಉದ್ದೇಶದಿಂದ 22ನೇ ಮಾಸಿಕ ಯೋಜನೆಯನ್ನಾಗಿ ಆರಿಸಿ ಸಮಾಜದ ಮುಂದಿಟ್ಟು ಅದರಿಂದ ಒಟ್ಟಾದ 80,000₹ಗಳ ಚೆಕ್ ಊರಿನ ಹಿರಿಯರ ಹಾಗೂ ಸಂಜೀವಿನಿ ಪರಿವಾರ ಸಂಸ್ಥೆಗಳ ಘನ ಉಪಸ್ಥಿತಿಯಲ್ಲಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿತು.ಹೆಚ್ಚಿನ ಮಾಹಿತಿಗಾಗಿ : ವಸಂತ್ ಮೂಡುಬಿದಿರೆ +919535628131 ಮಂಗಳೂರು