Published On: Thu, Jun 15th, 2017

ಶಿಕ್ಷಣಕ್ಕೆ ಸಹಕಾರ ನೀಡಿದರೆ ಒಂದು ದೇವಸ್ಥಾನವನ್ನು ನಡೆಸಿದಂತೆ: ಮಂಜುಳಾ ಮಾವೆ

ಬಂಟ್ವಾಳ :  ಶಿಕ್ಷಣಕ್ಕೆ ಸಹಕಾರ ನೀಡಿದರೆ ಒಂದು ದೇವಸ್ಥಾನವನ್ನು ನಡೆಸಿದಂತೆ, ಸಹಕಾರ ಮನೋಭಾನೆಯು ದೈವಿಕ ಕಲೆಯಾಗಿದೆ. ಯಾವುದೇ ಫಲಾಪೇಕ್ಷೆಗಳಿಲ್ಲದೇ ಸಾಮಾಜಿಕ ಕಳಕಳಿಯಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಿಂದ ಅವರ ಸಬಲೀಕರಣಕ್ಕೆ ಸಹಾಯ ನೀಡುವಂತೆ ಒಂದು ಉತ್ತಮ ಕೆಲಸವಾಗಿದೆ ಎಂದು ಜಿ.ಪಂ. ಸದಸ್ಯೆ ಮಂಜುಳಾ ಮಾವೆಯವರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಜಿ ವೀರಕಂಭ ಇಲ್ಲಿ ವಿವಿಧ ಸಂಘ ಸಂಸ್ಥೆ ಹಾಗೂ ದಾನಿಗಳಿಂದ ಉಚಿತ ಕೊಡುಗೆ ಕಾರ್ಯಕ್ರಮವನ್ನು ದೀಪಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.DSC_6264 01

ಮುಖ್ಯ ಅತಿಥಿಯಾಗಿದ್ದ ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಉದ್ಯಮಿ ಮಂಗಳೂರು ಇವರು ಇಂದು ಮಾಧ್ಯ,ಮಗಳ ಅಭಿ ವೃದ್ಧಿಯಿಂದ ಕಲಿಕೆಯು ಹೆಚ್ಚು ನಿಕಟವಾಗಿದೆ, ಗ್ರಾಮೀಣ ಭಾಗದ ವಿದ್ಯಾಭಿಮಾನಿಗಳು ಹೆಚ್ಚು ಸಮಾಜ ಮುಖಿ ಸೇವೆಯಲ್ಲಿ ತೊಡಗುತ್ತಿದ್ದಾರೆ. ಶಿಕ್ಷಣದ ಮೂಲದ್ಯೇಯ ಶಿಸ್ತು ಇದರಿಂದ ಜಗತ್ತನ್ನೇ ಗೆಲ್ಲಲು ಸಾಧ್ಯವಿದೆ. ದೇವ ಸಮಾನವಾದ ಮಗು ಇಂದು ಉತ್ತಮ ಪರಿಸರ, ಶಿಕ್ಷಣದೊಂದಿಗೆ ಬೆಳೆದಾಗ ದೇಶದ ಬೆಳವಣಿಗೆ ಸಾಧ್ಯವೆಂದು ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಳಪದ ಮೂಲಕ ಅಕ್ಷರಗಳನ್ನು ಬರೆಸಿ ತನ್ನಿಂದ ಒದಗಿಸುವ ಉಚಿತ ಪಠ್ಯ ಪುಸ್ತಕ ಸಮವಸ್ತ್ರಗಳನ್ನು ಹಗೂ ಸಹೋದರ ಸಂದೀಪ್ ಕುಮಾರ ಶೆಟ್ಟಿ ಅರೆಬೆಟ್ಟು ಇವರು ಒದಗಿಸಿದ ಊಟದ ತಟ್ಟೆ ಹಾಗೂ ಲೋಟಗಳನ್ನು ಹಸ್ತಾಂತರಿಸಿ ಮಾತನಾಡಿದರು.

ಎಸ್.ಕೆ.ಪಿ.ಎ ನ ಜಿಲ್ಲಾ ಸಲಹಾ ಸಮಿತಿಯ ಸದಸ್ಯರು, ನಿಕಾಟ ಪೂರ್ವ ಉಪಾಧ್ಯಕ್ಷರು ಆಗಿರುವ ಶ್ರೀಯುತ ಜಯಕರ್ ಸುವರ್ಣ ರವರು ತಮ್ಮ ಅನುಭವದ ವಲಸೆ ಕುಟುಂಬದ ನಿದರ್ಶನವನ್ನು ನೀಡಿ ದಾನ, ಧರ್ಮ, ಸಮಾಜ ಸೇವೆಯಂತಹ ಗುಣಗಳು ನಮ್ಮಲ್ಲಿದ್ದಾಗ ಇತರರ ಕಷ್ಟಗಳನ್ನು ತಿಳಿದು ಬದುಕಿದಾಗ ಮಾನವ ಧರ್ಮದ ಪರಿಚಯವಾಗುತ್ತದೆ. ಸಂಘ ಸಂಸ್ಥೆಗಳು ಶೈಕ್ಷಣಿಕ ವಿಕಾಸಕ್ಕೆ ಸಹಕರಿಸಿದಾಗ ವೃತ್ತಿಧರ್ಮ ಪಾಲಿಸಿದಂತೆಯೇ ಸರಿ ಎಂದು ತಿಳಿಸಿದರು.

ಎಸ್.ಕೆ.ಪಿ.ಎ ಬಂಟ್ವಾಳ ವಲಯದ ಅಧ್ಯಕ್ಷರಾದ ಸುಕುಮಾರ್ ಬಂಟ್ವಾಳರವರು ಕಲಿಕೆ ಹೊರೆಯಾಗಬಾರದು, ಕಷ್ಟಪಟ್ಟು ಕಲಿತಾಗ ಮುಂದೆ ಅದೇ ಇಷ್ಟವಾಗುತ್ತದೆ. ಪಾಲಕರು ಮಕ್ಕಳ ಕಲಿಕೆಗೆ ದಿನದ ಒಂದು ಗಂಟೆಯ ಸಮಯವನ್ನು ಮಗುವಿನ ಜೊತೆಯಾಗಿದ್ದು ಅವರಿಗೆ ಮೀಸಲಿಟ್ಟಾಗ ಫಲಿತಾಂಶ ಇನ್ನಷ್ಟು ಉತ್ತಮವಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆಯು ಸತತವಾಗಿ 4 ವರ್ಷಗಳಿಂದ ಒದಗಿಸುತ್ತಿರುವ ಬರಹ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ನೀಡಿ ತಮ್ಮ ಸಂಸ್ಥೆಯು ಶಿಕ್ಷಣದ ಜೊತೆಗೆ ಸಹಕರಿಸುತ್ತಿದೆ ಎಂದರು.

ಶಿಕ್ಷಣವು ಮಗುವಿನ ಬೆಳವಣಿಗೆಯ ಜೊತೆಗೆ ಸಮಾಜದ ಮುನ್ನಡೆಯಾಗುವಲ್ಲಿ ಸಹಕಾರಿಯಾಗಿದೆ. ಧರ್ಮ, ಜಾತಿ, ಸಂಬಂಧಗಳನ್ನು ಮೆಟ್ಟಿನಿಲ್ಲುವ ಒಂದೇ ಒಂದು ಅಸ್ತೆ ಎಂದರೆ ಅದು ಶಿಕ್ಷಣ ಇದಕ್ಕೆ ಮಿಗಿಲಾದ ಬೆರೊಂದು ಸಾಟಿಯಾಗಲಾರದು, ಅದಕ್ಕೆ ನೀಡಿದ ಸಹಕಾರವು ಒಂದು ಉತ್ತಮ ದೃಷ್ಟಾಂತವಾಗುತ್ತದೆ ಎಂದು ಕೆ,ಎಂ.ಎಫ್ ವಿಸ್ತರಣಾಧಿಕಾರಿಯಾದ ಜಗದೀಶ್‍ರವರು ವಿದ್ಯಾರ್ಥಿಗಳಿಗೆ ತಮ್ಮಿಂದ ಕೊಡಲ್ಲಟ್ಟ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.

ಸಾಂಸ್ಕøತಿಕ ಪರಂಪರೆಯು ಮನೆಯ ವಾತಾವರಣದಿಂದ ಬೆಳೆದು ಬರುವಂತೆ ಶೈಕ್ಷಣಿಕ ವಿಕಾಸವು ಶಾಲೆಗಳಿಂದ ಸಾಧ್ಯವಾಗುತ್ತದೆ. ಶಾಲೆಯ ಏಳಿಗೆಯು ಸಮಾಜದ ಮುನ್ನಡೆಗೆ ಸಹಕಾರಿಯಾಗುತ್ತದೆ. ತಮ್ಮ ವೃತ್ತಿಯ ಒಂದಂಶವನ್ನು ಶಿಕ್ಷಣಕ್ಕೆ ಮೀಸಲಿಟ್ಟ ಎಸ್.ಕೆ.ಪಿ.ಎಯ ಉದೇಶವು ಬಹಳ ಶ್ಲಾಘನೀಯ ವಾದುದು ಎಂದು ಎಸ್.ಡಿ.ಸಿ.ಸಿ. ಬ್ಯಾಂಕಿನ ನಿವೃತ ಜನರಲ್ ಮ್ಯಾನೇಜರ್ ಆಗಿರುವ ಶ್ರೀಯುತ ಉಗ್ಗಪ್ಪ ಶೆಟ್ಟಿ ಕೊಂಬಿಲ ಇವರು ಮಾತೃಶ್ರೀ ಬಳಗ ವೀರಕಂಭ ಇವರಿಂದ ಒದಗಿಸಿದ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪಠ್ಯಪುಸ್ತಕ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ದಿನಚರಿ ಪುಸ್ತಕವನ್ನು ವಿತರಿಸಿ ಮಾತನಾಡಿದರು.

ವಲಸೆ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯವಾಗುವಂತೆ ಗ್ರಾ.ಪಂ. ಸದಸ್ಯರಾದ ಶ್ರೀಯುತ ರಾಮಚಂದ್ರ ಪ್ರಭುರವರು ಬಡ ಕಾರ್ಮಿಕ ಮಕ್ಕಳಿಗೆ ಚೀಲಗಳನ್ನು ಒದಗಿಸಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್, ವೀರಕಂಭ ಗ್ರಾ.ಪಂ. ಅಧ್ಯಕ್ಷೆ ಪ್ರೆಮಲತಾ ಸದಸ್ಯರಾದ ಜಯಂತಿ, ಜನಾರ್ಧನ, ಜಯಿಂತಿ ಗಣೇಶ್ ಕೋಡಿ, ಎಸ್.ಕೆ.ಪಿ.ಎ. ಜಿಲ್ಲಾ ಕ್ರೀಡಾ ಕಾರ್ಯದಶಿ ಪ್ರವೀಣ್ ಕೊರೆಯ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಂಜೀವ ಮೂಲ್ಯ ಹಾಗೂ ಸದಸ್ಯರು, ಎಸ್.ಕೆ.ಪಿ.ಎ ಬಂಟ್ವಾಳ ವಲಯದ ಸದಸ್ಯರು, ಹಾಗೂ ಪೋಷಕರು, ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ನಾರಾಯಣ ಪೂಜಾರಿಯವರು ಪ್ರಾಸ್ತಾವಿಸಿ ಸ್ವಾಗತಿಸಿದರು, ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರ ನಿರೂಪಿಸಿ ವಂದಿಸಿದರು, ಶಿಕ್ಷಕಿಯದ ಸಿಸಿಲಿಯಾ, ಶಕುಂತಳಾ, ಜ್ಯೋತಿ ಹಾಗೂ ಜಯಲಕ್ಷ್ಮಿಯವರು ಸಹಕರಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter