Published On: Tue, Feb 7th, 2017

ತುಳುವ ಚಾವಡಿ ದಾಸಕೋಡಿ ಬೆಳ್ಳಿ ಸಂಭ್ರಮ

ಕಲ್ಲಡ್ಕ: ನಾಟಕ ಕಲಾವಿದರು ತಮ್ಮ ಜೀವನಲ್ಲಿ ಕಷ್ಟವನ್ನು ಅನುಭವಿಸಿದರು ಪ್ರೇೀಕ್ಷಕರಿಗೆ ಆನಂದವನ್ನು ನೀಡುತ್ತಾರೆ. ತುಳು ಸಂಸ್ಕøತಿ ಹಾಗೂ ನಾಟಕ ರಂಗದಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ತುಳುವ ಚಾವಡಿ ದಾಸಕೋಡಿ ನೂರಾರು ಯುವ ಕಲಾವಿದರಿಗೆ ವೇದಿಕೆಯನ್ನು ಒದಗಿಸಿದೆ.ಕಲಾ ಸಾಧಕರನ್ನು ಸನ್ಮಾನಿಸಿದೆ ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಹೇಳಿದರು.ಅವರು ಬಾಳ್ತಿಲ ದಾಸಕೋಡಿ ಗ್ರಾಮ ಪಂಚಾಯತ್ ವಠಾದಲ್ಲಿ ತುಳುವ ಚಾವಡಿ ದಾಸಕೋಡಿ ಇದರ ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Untitled-1ಮುಖ್ಯ ಅತಿಥಿಯಾಗಿ ಕ.ಸಾ.ಪ ನಿಕಟ ಪೂರ್ವಾಧ್ಯಕ್ಷ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಮಾತನಾಡಿ ತುಳುವ ಚಾವಡಿ ದಾಸಕೋಡಿಯ ಹಲವು ಕಲಾವಿದರಿಗೆ ವೇದಿಕೆಯಾಗಿ ಪ್ರೋತ್ಸಾಹ ನೀಡಿದೆ. ತುಳುನಾಡಿನ ಸಂಸøತಿ ಭಾಷೆ ಜಗತ್ತಿನಲ್ಲಿಯೇ ವಿಶಿಷ್ಟ ವಾಗಿದ್ದು ಇದು ಮುಂದಿನ ಜನಾಂಗಕ್ಕೆ ಕಲಾವೇದಿಕೆಯ ಮೂಲಕ ಹರಿದು ಬರಬೇಕು ಎಂದರುಕೆಲವರು ಸಂಸ್ಕøತಿಯನ್ನು ಉಳಿಸಲು ಹೊರಟರೆ ಮತ್ತೆ ಕೆಲವರು ನಾಶ ಮಾಡಲು ಪ್ರಯತ್ನಿಸುತ್ತಾರೆ. ಯುವ ಜನತೆ ದೇಶ ಭಕ್ತಿಯೊಂದಿಗೆ ನಮ್ಮ ಸಂಸ್ಕøತಿಯನ್ನು ಗೌರವಿಸಬೇಕು ಎಂದು ಜಿಲ್ಲಾ ಬಿ.ಜೆ.ಪಿ ವಕ್ತಾರ ಜಿತೇಂದ್ರ ಎಸ್ ಕೊಟ್ಟಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಿ.ಜೆ.ಪಿ ರೈತ ಮೋರ್ಚ ಜಿಲ್ಲಾ ಉಪಾಧ್ಯಕ್ಷ ಬಿ.ಕೆ ಪೂಜಾರಿ, ಕೊರಗಪ್ಪ ಪಂಡಿತ್ ಏಳ್ತಿಮಾರು , ಪಂಚಾಯತ್ ಸದಸ್ಯ ಮೋಹನ್ ಪಿ.ಎಸ್ , ನಾಟಿ ವೈದ್ಯ ಎಮ್. ದಾಮೋದರ್ , ನಿವೃತ ಶಿಕ್ಷಕಿ ಅನುಸೂಯ ಈಶ್ವರಚಂದ್ರ ರಾವ್ , ಶ್ಯಾಮ್ ಜಾದೂಗಾರ್ ಉಪಸ್ಥಿತರಿದ್ದರು. ಸಾಧಕರಾದ ಅಣ್ಣಪ್ಪ ಅಂಚನ್ ಕುದ್ರೆಬೆಟ್ಟು, ಈಶ್ವರ ಪೂಜಾರಿ ಕುರ್ಮಾನು, ಕಿಟ್ಟಣ್ಣ ಪೂಜಾರಿ ಕುದ್ರೆಬೆಟ್ಟು, ಚಿ.ರಮೇಶ್ ಕಲ್ಲಡ್ಕ , ಸೋಮಣ್ಣ ನಲಿಕೆ, ನಾಗೇಶ ಕುದ್ರೆಬೆಟ್ಟು ಇವರನ್ನು ಸನ್ಮಾನಿಸಲಾಯಿತು.

ಚಾವಡಿ ಅಧ್ಯಕ್ಷ ಬಿ.ಆರ್ ಕಬಕ ಸ್ವಾಗತಿಸಿ , ರಮೇಶ ಕುದ್ರೆಬೆಟ್ಟು, ರಾಜೇಶ್ ಕಲ್ಲಡ್ಕ ನಿರೂಪಿಸಿದರು. ಮಾಯಾಲೋಕ ಜಾದೂ ಮತ್ತು ಬಂಗಾರ್‍ದ ಬಳೆ ನಾಟಕ ಪ್ರದರ್ಶನಗೊಂಡಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter