Published On: Sat, Nov 21st, 2015

ನ.22 ರಂದು. ಕಟೀಲಿನಲ್ಲಿ ತಪ್ತ ಮುದ್ರಾಧಾರಣೆ ಯಕ್ಷವಸತಿಗೃಹ ಉದ್ಘಾಟನೆ, ಗಿಡಿಗೆರೆ ರಾಮಕ್ಕ ಅವರಿಗೆ ಸನ್ಮಾನ

ಬಜಪೆ: ಕಟೀಲು ಶ್ರೀ ದುರ್ಗಪರಮೇಶ್ವರೀ ದೇವಸ್ಥಾನಕ್ಕೆ ಭಾನುವಾರ ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥ ಸ್ವಾಮಿಜಿ ಅವರು ಆಗಮಿಸಿ ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಲಿದ್ಧಾರೆ.
ದೇವಳದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡ ಬಳಿಕ 11.30 ರಿಂದ 12.30 ಗಂಟೆಗೆ ಸ್ವಾಮಿಜಿ ಅವರು ಸಾಮೂಹಿಕವಾಗಿ ಮುದ್ರಾಧಾರಣೆ ನಡೆಸಿ ಅನುಗ್ರಹಿಸಲಿದ್ಧಾರೆ ಮುದ್ರಾಧಾರಣೆ ಹಾಕಿಸಲು ಸ್ತ್ರೀ ಪುರುಷ ಜಾತಿ ಮತ ನಿರ್ಬಧ* ಇರುವುದಿಲ್ಲ.
20vm Yaksha Vashathi2

20vm Yaksha Vashathi1
ಏಕಾಹಭಜನೆ
ನ.22 ಭಾನುವಾರ ಕಾರ್ತಿಕ ಶುದ್ಧ ಏಕಾದಶಿ (ದೇವ ಪ್ರಬೋದಿನೀ ಏಕಾದಶಿ) ಸೋರ್ಯೋದಯದಿಂದ ಮಾರನೆಯದಿನ ಸೂರ್ಯೋದಯದವರೆಗೆ ನಿರಂತರ 24 ಗಂಟೆಗಳ ಏಕಾಹಭಜನೆ ನಡೆಯಲಿದ್ಧು ನಾಡಿನೆಲ್ಲೆಡೆಯ ಭಜನಾ ಮಂಡಳಿಗಳು ಪಾಲ್ಗೊಳ್ಳಲಿದೆ
ಯಕ್ಷ ವಸತಿಗ್ರಹ ಉದ್ಘಾಟನೆ:
ಕಟೀಲು ಪರಿಸರದಲ್ಲಿ ಯಕ್ಷಗಾನ ನಡೆಯುವ ವೇಳೆ ಮೇಳದವರ ವ್ಯವಸ್ಥಿತ ವಾಸ್ತವ್ಯಕ್ಕಾಗಿ ಸುಸಜ್ಜಿತ ಯಕ್ಷ ವಸತಿಗೃಹವನ್ನು ದೇವಳದ ಆಡಳಿತ ಮಂಡಳಿ ರೂ.50 ಲಕ್ಷ ರೂ ವೆಚ್ಚದಲ್ಲಿ ಸಕಲ ಅಗತ್ಯ ಸೌಕರ್ಯಗಳ ಸಹಿತ ನಿರ್ಮಾಣಗೊಂಡಿದೆ.
ವಸತಿಗ್ರಹದಲ್ಲಿ ದೇವರ ಪೂಜೆ, ಅಡುಗೆಗೆ, ಅರ್ಚಕರಿಗೆ, ಕಲಾವಿದರ ಊಟ, ವಿಶ್ರಾಂತಿ ಕೊಠಡಿ, ಆರು ಸ್ನಾನಗ್ರಹಗಳು, ಎಂಟು ಶೌಚಾಲಯಗಳನ್ನೊಳಗೊಂಡ ಸುಸಜ್ಜಿತ 9 ವಸತಿ ವ್ಯವಸ್ಥೆಯಿಂದ ಮೇಳದವರ ಅವ್ಯವಸ್ಥೆ ಸಂಕಷ್ಠಗಳು ನಿವಾರಣೆಯಾಗಬಹುದು.
ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ ಸದಸ್ಯ ಈಶ್ವರ ಕಟೀಲು , ದೇವಳದ ಅನುವಂಶಿಕ ಮೊಕ್ತೆಸರ ವಾಸುದೇವ ಅಸ್ರಣ್ಣ ಆಡಳಿತಾಕಾರಿ ನಿಂಗಯ್ಯ, ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ ಮೇಳಗಳ ಅಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮುಂತಾದವರು ಉಪಸ್ಥಿತಿಯಲ್ಲಿ ರಾತ್ರಿ 9.30ಕ್ಕೆ ಹಿರಿಯರಾದ ಬಲಿಪನಾರಾಯಣ ಭಾಗವತ ಅವರು ಉದ್ಘಾಟಿಸಲಿದ್ಧಾರೆ.
ಗಿಡಿಗೆರೆ ರಾಮಕ್ಕ ಅವರಿಗೆ ಸನ್ಮಾನ:
ಜಾನಪದ ಕಲಾವಿದೆ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಟೀಲು ಗಿಡಿಗೆರೆಯ ರಾಮಕ್ಕ ಅವರಿಗೆ ಭಾನುವಾರ ರಾತ್ರಿ 10ಕ್ಕೆ ಕಟೀಲು ರಥಬೀದಿಯಲ್ಲಿ ಯಕ್ಷಗಾನ ವೇದಿಕೆಯಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ. ಗಿಡಿಗೆರೆ ರಾಮಕ್ಕ ಅವರ ಜೀವನದ ಮೊದಲ ಸನ್ಮಾನ ನಡೆದಿರುವುದು 2001ರಲ್ಲಿ ಕಟೀಲು ದೇವಳದ ಜಾತ್ರೆಯ ಸಂದರ್ಭ ಅನ್ನುವುದು ಉಲ್ಲೇಖನೀಯ ಅಂಶ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter