Published On: Thu, Oct 1st, 2015

ಬ್ಯಾಡ್ಮಿಂಟನ್ ಮಿನುಗು ತಾರೆ ಉಡುಪಿ ಮೂಲದ ನೇಹಾ ಶೆಟ್ಟಿ

ಮುಂಬಯಿ: ಕ್ರೀಡಾ ಲೋಕದ ಪುಚ್ಚದ ಆಟ ಪ್ರಸಿದ್ಧಿಯ ಬ್ಯಾಡ್ಮಿಂಟನ್ ರಂಗದಲ್ಲಿ ತುಳು ಕನ್ನಡತಿ ನೇಹಾ ಶೆಟ್ಟಿಮಿಂಚುಳ್ಳಿಯಾಗಿ ಮಿನುಗುವ ಕನ್ನಡತಿ ಕ್ರೀಡಾತಾರೆ ಆಗಿದ್ದಾರೆ. ಹನ್ನೆರಡು ವಯದ ಈ ಬೆಡಗಿ ಇದೀಗ ವಿಶ್ವದಾದ್ಯಂತ ಹೆಸರುವಾಸಿ ಆಗಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಉಡುಪಿ ವಳಕಾಡು ನಿವಾಸಿ ಪ್ರಸ್ತುತ ದೋಹಾ ಕತಾರ್ನಲ್ಲಿ ನೆಲೆಯಾಗಿರುವ ನರೇಶ್ ಶೆಟ್ಟಿ ವಿಜಯಾ ಎನ್.ಶೆಟ್ಟಿ ದಂಪತಿ ಸುಪುತ್ರಿ ಹಾಗೂ ಶ್ರೀ ಗುರು ಛಾಯಾ ವಳಕಾಡು ನಿವಾಸಿ ಶ್ರೀನಿವಾಸ ಶೆಟ್ಟಿ ಮತ್ತು ಸುಂದರಿ ಶೆಟ್ಟಿ ಮೊಮ್ಮಗಳು ಆಗಿದ್ದಾರೆ. ಪ್ರಸಕ್ತ ಡಿಪಿಎಸ್-ಎಂಐಎಸ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದ ಈ ಬಾಲೆ ಈಗಾಗಲೇ ಶಾಲೆಗೆ ಹಲವಾರು ಪ್ರಶಸ್ತಿಗಳನ್ನು ತಂದು ಕೊಟ್ಟಿದ್ದಾಳೆ. ಬ್ಯಾಡ್ಮಿಂಟನ್ನಲ್ಲಿ ಅದ್ಭುತ ಸಾಧನೆಗೈದ 12ರ ಬಾಲೆ ನೇಹಾ ಶೆಟ್ಟಿ.
Neha Shetty Kuwait-2

Neha Shetty Kuwait-1
ಹನ್ನೆರಡರ ಬಾಲೆ ನೇಹಾ ಶೆಟ್ಟಿ ಕತಾರ್ ಬ್ಯಾಡ್ಮಿಂಟನ್ ಅಸೋಸಿಯೇಷನ್ಗೆ ಜಿಸಿಸಿ ಮಟ್ಟದಲ್ಲಿ ಇದು ವರೆಗೆ ಕಂಡಿರದ ಅದ್ಭುತವಾದ ಯಶಸ್ಸನ್ನು ತಂದು ಕೊಟ್ಟಿದ್ದಾರೆ. ಕುವೈಟ್ನಲ್ಲಿ ಇತ್ತೀಚೆಗೆ ನಡೆದ ಜಿಸಿಸಿ ದೇಶಗಳ 12ವರ್ಷದೊಳಗಿನ ಸಿಂಗಲ್ಸ್ ಮತ್ತು 14 ವರ್ಷದೊಳಗಿನ ಹುಡುಗಿಯರ ಡಬಲ್ಸ್ ಬ್ಯಾಡ್ಮಿಂಟ ನ್
ಪಂದ್ಯಾಟದಲ್ಲಿ ಅದ್ಭುತ ವಿಜಯ ಸಾಧಿಸಿದ್ದಾರೆ ಮಾತ್ರವಲ್ಲದೆ 12 ವರ್ಷದೊಳಗಿನ ಸಿಂಗಲ್ಸ್ ಪಂದ್ಯಾಟದ ಆಟಗಾರರಲ್ಲಿ ನೇಹಾ ಶೆಟ್ಟಿ ನಂಬರ್ ವನ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
2011ರಲ್ಲಿ ಈಕೆ ಬ್ಯಾಡ್ಮಿಂಟನ್ ತರಗತಿಗೆ ಸೇರಿಕೊಂಡಿದ್ದಳು. ಪ್ರಾರಂಭದಲ್ಲಿಯೇ ಆಕೆ ತನ್ನ ಕ್ರೀಡಾಸಕ್ತಿಯನ್ನು ಬ್ಯಾಡ್ಮಿಂಟನ್ ಆಟದಲ್ಲಿ ತೋರಿಸಿ ಕೊಟ್ಟಿದ್ದಳು. ಕತಾರ್ನಲ್ಲಿ ನಡೆದ ಹಲವಾರು ಸ್ಪಧರ್ೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದು ಕೊಂಡಿದ್ದಾಳೆ. ನೇಹಾ 12 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಮತ್ತು 14 ವರ್ಷದೊಳಗಿನ ಹುಡುಗಿಯರ ಡಬಲ್ಸ್ ಪಂದ್ಯಾಟದಲ್ಲಿ ಕತಾರನ್ನು ಪ್ರತಿನಿಧಿನಿಧಿಸಿ ಈ ಸಾಧನೆಯನ್ನು ಮಾಡಿದ್ದಾರೆ.

ಕತಾರ್ನಲ್ಲಿ ಗಳಿಸಿದ ಈ ಸಾಧನೆಗಳು ಕುವೈಟ್ನ ಜಿಸಿಸಿ ಮುಕ್ತ ಪಂದ್ಯಾಟದಲ್ಲಿ ಭಾಗವಹಿಸುವ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. 2013 ಕಿಂಗ್ಸ್ (ಕ್ವಾರ್ಟರ್ ಬ್ಯಾಡ್ಮಿಂಟನ್ ಓಪನ್) ನಲ್ಲಿ ಸಿಂಗಲ್ಸ್ ಪ್ರಥಮ, 2014 ಕಿಂಗ್ಸ್ (ಕ್ವಾರ್ಟರ್ಬ್ಯಾಡ್ಮಿಂಟನ್ ಓಪನ್) ನಲ್ಲಿ ಸಿಂಗಲ್ಸ್ನಲ್ಲಿ ದ್ವಿತೀಯ ಮತ್ತು ಡಬಲ್ಸ್ನಲ್ಲಿ ಪ್ರಥಮ, ಜಿಸಿಸಿ (ಓಪನ್ಕ್ವಾರ್ಟರ್)ಡಬಲ್ಸ್ನಲ್ಲಿದ್ವಿತೀಯ, 2015 (ಕ್ವಾರ್ಟರ್ ಓಪನ್)ನಲ್ಲಿ ಸಿಂಗಲ್ಸ್ ದ್ವಿತೀಯ ಮತ್ತು ಕ್ವಾರ್ಟರ್ ಓಪನ್ ಪ್ರಥಮ ಸ್ಥಾನ ಪಡೆದಿರುವರು.12 ವರ್ಷದೊಳಗಿನ ಸಿಂಗಲ್ಸ್ ಪಂದ್ಯಾಟದ ಫೈನಲ್ಸ್ ರಣರಂಗದಲ್ಲಿ ನೇಹಾ ಶೆಟ್ಟಿ ಅಗ್ರ ಕ್ರಮಾಂಕದ ಆಟಗಾರ್ತಿ ರೀಮ್ ಸಿರಜ್ರನ್ನು 3 ಸೆಟ್ಸ್ಗಳಿಂದ ಸೋಲಿಸಿದ್ದಾರೆ.

(ಸ್ಕೋರ್ಸ್ 12-21, 21-16, 21-6) ಹಾಗೂ 14 ವರ್ಷದೊಳಗಿನ ಹುಡುಗಿಯರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ನೇಹಾ ಶೆಟ್ಟಿ, ಸಾಧ್ವಿ ಕೃಷ್ಣರನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿದ್ದಾರೆ. ಈ ಮೂಲಕ ಸಾಧ್ವಿ ಕೃಷ್ಣ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.ಸಾಧಕಿ ನೇಹಾ ಶೆಟ್ಟಿಗೆ 2014 ಜುಲೈ 6 ರಿಂದ ಖತರ್ ಬ್ಯಾಡ್ಮಿಂಟನ್ ಅಸೋಸಿಯನ್ನಿನಲ್ಲಿ ಮನೋಜ್ ಶಹಿಬ್ಜನ್ ತರಬೇತಿ ನೀಡುತ್ತಿದ್ದಾರೆ. ಖತರ್ ಬ್ಯಾಡ್ಮಿಂಟನ್ ಅಸೋಸಿಯನ್ ಇತಿಹಾಸದಲ್ಲಿ ಖತರ್ನಿಂದ ಹೊರಗೆ ನಡೆದ ಜಿಸಿಸಿ ಮಟ್ಟದ ಪಂದ್ಯಾಟದಲ್ಲಿ ಇದೇ ಮೊದಲ ಬಾರಿಗೆ ಈ ಯಶಸ್ಸು ದೊರೆತಿದೆ ಎಂದು ಮನೋಜ್ ಶಹಿಬ್ಜನ್
ಉದ್ಘರಿಸಿದ್ದಾರೆ.`ಇದು ನನ್ನ ಜೀವನದ ಒಂದು ಅಮೂಲ್ಯವಾದ ಹಂತ. ಈ ಸಂತೋಷದ ಕ್ಷಣದಲ್ಲಿ ಆಡಲು ಮಾತುಗಳೇ ಸಿಗುತ್ತಿಲ್ಲ, ನನ್ನ ಈ ಸಾಧನೆಗೆ ಹೆತ್ತವರು, ಗರು-ಹಿರಿಯರು ಮತ್ತು ಸ್ನೇಹಿತರ ಆಶೀರ್ವಾದ ಮತ್ತು ಸಹಕಾರ ಕಾರಣ” ಎಂದು ಹೆಮ್ಮೆಯಿಂದ ಹೇಳಿದ್ದಾಳೆ ನೇಹಾ ಶೆಟ್ಟಿ..

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter