Published On: Fri, Mar 13th, 2015

ಮೂರನೇ ಮಹಾಯುದ್ಧದ ಭೀಕರತೆ; ಅಗ್ನಿಹೋತ್ರದ ಮಹತ್ವ

ಮೂರನೇ ಮಹಾಯುದ್ಧದಲ್ಲಿ ಪೃಥ್ವಿಯ ಮೇಲಿನ ಶೇ. ೨೦ ರಷ್ಟು ಜನಸಂಖ್ಯೆ, ಅಂದರೆ ೧೩೦ ಕೋಟಿ ಜನರು ನಾಶವಾಗುವವರಿದ್ದಾರೆ; ಜೊತೆಗೆ ಯುದ್ಧದಲ್ಲಿ ಅಣುಬಾಂಬಿನ ವಿಕಿರಣಗಳಿಂದಾಗುವ ಪ್ರದೂಷಣೆಯಿಂದ ಇನ್ನೂ ೨ ಕೋಟಿ ಜನರು ಸಾಯುವರು. ಅದರಲ್ಲಿ ನಮ್ಮ ಜೀವ ಹೋಗಬಾರದು ಮತ್ತು ಇತರರ ಜೀವ ಉಳಿಯಬೇಕು ಎಂಬುದಕ್ಕಾಗಿ ಅಗ್ನಿಹೋತ್ರ ಸಾಧನೆಯನ್ನು ಮಾಡಿರಿ ! – ಡಾ.ಆಠವಲೆ (೩೦.೯.೨೦೦೭)

agnihotra

ಅಗ್ನಿಹೋತ್ರದ ಮಹತ್ವ
೧. ಅಗ್ನಿಹೋತ್ರದಿಂದ ನಿರ್ಮಾಣವಾಗುವ ಅಗ್ನಿಯು ರಜ-ತಮ ಕಣಗಳನ್ನು ವಿಘಟನೆ ಮಾಡುತ್ತದೆ ಮತ್ತು ವಾಯುಮಂಡಲದಲ್ಲಿ ದೀರ್ಘಕಾಲ ಉಳಿದುಕೊಳ್ಳುತ್ತದೆ, ಆದುದರಿಂದ ಅಗ್ನಿಹೋತ್ರವನ್ನು ಸತತವಾಗಿ ಮಾಡಿದರೆ ಅದು ಮಾನವನ ಸುತ್ತಲೂ ೧೦ ಅಡಿ ದೂರದಲ್ಲಿ ಸಂರಕ್ಷಣಾ ಕವಚವನ್ನು ನಿರ್ಮಾಣ ಮಾಡುತ್ತದೆ. ಈ ಕವಚವು ತೇಜದ ಸ್ಪರ್ಶಕ್ಕೆ ಅತ್ಯಂತ ಸಂವೇದನಾಶೀಲವಾಗಿರುತ್ತದೆ. ಸೂಕ್ಷದಲ್ಲಿ ಈ ಕವಚವು ನಸುಗೆಂಪು ಬಣ್ಣದಲ್ಲಿ ಕಾಣಿಸುತ್ತದೆ.
೨. ಯಾವಾಗ ಒಳ್ಳೆಯ ವಿಷಯಗಳಿಗೆ ಸಂಬಂಧಿಸಿದ ತೇಜವು ಈ ಕವಚದ ಸಮೀಪ ಬರುತ್ತದೆಯೋ, ಆಗ ಕವಚದಲ್ಲಿನ ನಸುಗೆಂಪು ಬಣ್ಣದ ತೇಜದಲ್ಲಿನ ಕಣಗಳು ಈ ತೇಜವನ್ನು ತಮ್ಮಲ್ಲಿ ಸಮಾವೇಶಗೊಳಿಸಿಕೊಂಡು ಕವಚವನ್ನು ಬಲಶಾಲಿಯಾಗಿ ಮಾಡುತ್ತವೆ.
೩. ರಜ-ತಮಾತ್ಮಕ ತೇಜಕಣಗಳು ಕರ್ಕಶ ಸ್ವರೂಪದಲ್ಲಿ ಆಘಾತವನ್ನು ನಿರ್ಮಾಣ ಮಾಡುತ್ತವೆ; ಆದುದರಿಂದ ಅವು ಹತ್ತಿರ ಬರುವುದು ಕವಚಕ್ಕೆ ಮೊದಲೇ ತಿಳಿಯುತ್ತದೆ ಮತ್ತು ಅದು ಪ್ರತ್ಯುತ್ತರವೆಂದು ತನ್ನಿಂದ ಅನೇಕ ತೇಜಲಹರಿಗಳನ್ನು ವೇಗದಿಂದ ಹೊರಸೂಸಿ ಆ ಕರ್ಕಶ ನಾದವನ್ನೇ ನಾಶ ಮಾಡುತ್ತದೆ ಮತ್ತು ಅದರಲ್ಲಿನ ನಾದವನ್ನು ಉತ್ಪನ್ನ ಮಾಡುವ ತೇಜಕಣಗಳನ್ನೂ ನಾಶ ಮಾಡುತ್ತದೆ. ಇದರಿಂದ ಆ ಲಹರಿಗಳಲ್ಲಿನ ತೇಜವು ಆಘಾತ ಮಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ; ಅಂದರೆ ಬಾಂಬ್‌ನಲ್ಲಿನ ಆಘಾತ ಮಾಡುವ ವಿಘಾತಕ ಸ್ವರೂಪದಲ್ಲಿ ಹೊರಸೂಸುವ ಶಕ್ತಿಯ
ವಲಯಗಳು ಮೊದಲೇ ನಾಶವಾಗುವುದರಿಂದ ವಿಕಿರಣಗಳನ್ನು ಹೊರಸೂಸುವ ದೃಷ್ಟಿಯಿಂದ ಬಾಂಬ್ ನಿಷ್ರಿಯವಾಗುತ್ತದೆ. ಆದುದರಿಂದ ಅದನ್ನು ಸ್ಫೋಟಿಸಿದರೂ ಮುಂದೆ ಆಗುವ ಮನುಷ್ಯಹಾನಿಯು ಸ್ವಲ್ಪ ಪ್ರಮಾಣದಲ್ಲಿಯಾದರೂ ತಡೆಗಟ್ಟಲ್ಪಡುತ್ತದೆ. ಬಾಂಬ್ ಸ್ಫೋಟವಾದರೂ, ಅದರಿಂದ ವೇಗವಾಗಿ ಹೋಗುವ ತೇಜರೂಪಿ ರಜ-ತಮಾತ್ಮಕ ಲಹರಿಗಳು ವಾಯುಮಂಡಲದಲ್ಲಿನ ಸೂಕ್ಷತರ ಅಗ್ನಿಕವಚಕ್ಕೆ ಅಪ್ಪಳಿಸಿ ಅಲ್ಲಿಯೇ ವಿಘಟನೆಯಾಗುತ್ತವೆ ಮತ್ತು ಅವುಗಳ ಸೂಕ್ಷ-ಪರಿಣಾಮವೂ ಅಲ್ಲಿಯೇ ಕೊನೆಗೊಳ್ಳುವುದರಿಂದ ವಾಯು
ಮಂಡಲವು ಮುಂದಿನ ಪ್ರದೂಷಣೆಯ ಅಪಾಯದಿಂದ ಮುಕ್ತವಾಗುತ್ತದೆ.
– ಓರ್ವ ವಿದ್ವಾಂಸ (ಪೂ. ಅಂಜಲಿ ಗಾಡಗೀಳರು ಓರ್ವ ವಿದ್ವಾಂಸರು ಈ ಬರಹನಾಮದಿಂದ ಲೇಖನ ಬರೆಯುತ್ತಾರೆ ೧೮.೨.೨೦೦೮, ಸಾಯಂ. ೬.೫೫)
ಭಗವದ್ಗೀತೆಯಲ್ಲಿ ಹೇಳಿದ ನಿತ್ಯ ಅಗ್ನಿಹೋತ್ರದ ಮಹತ್ವ
ಅಗ್ನಿಹೋತ್ರದಲ್ಲಿ ಆಹುತಿಯನ್ನು ಅರ್ಪಿಸದೇ, ತಾವೇ ಭಕ್ಷಣ ಮಾಡುವವರು ಸ್ವಾರ್ಥಿಗಳಾಗಿದ್ದಾರೆ, ಇಂತಹ ಶಬ್ದಗಳಲ್ಲಿ ಭಗವದ್ಗೀತೆಯು ನಿತ್ಯ ಅಗ್ನಿಹೋತ್ರದ ಮಹತ್ವವನ್ನು ಹೇಳಿದೆ.
ಅಗ್ನಿಹೋತ್ರದಲ್ಲಿ ಆಹುತಿಯನ್ನು ಕೊಡುವುದರ ಭಾವಾರ್ಥ
ಅಗ್ನಿಹೋತ್ರದಲ್ಲಿ ಕೊಡಲಾಗುವ ಆಹುತಿಯೆಂದರೆ, ಪರಮಾತ್ಮನ ಬಗ್ಗೆ ನಮ್ಮ ಮನಸ್ಸಿನಲ್ಲಿರುವ ಕೃತಜ್ಞತೆ. ಯಾವನು ಸಂಪೂರ್ಣ ಸೃಷ್ಟಿಯನ್ನು ನಿರ್ಮಿಸಿದ್ದಾನೆಯೋ, ಆ ಸರ್ವಶಕ್ತಿವಂತ ಈಶ್ವರನಿಗೆ ನಮ್ಮಂತಹ ಪಾಮರರೇನು ಕೊಡಬಹುದು ? ನಾವು ಈಶ್ವರನು ಕೊಟ್ಟಿದನ್ನೇ ಮತ್ತೆ ಈಶ್ವರನಿಗೆ ಅರ್ಪಿಸುತ್ತೇವೆ. ಸೃಷ್ಟಿಯಲ್ಲಿ ಏನೆಲ್ಲ ಇದೆಯೋ ಮತ್ತು ಏನೆಲ್ಲ ಕಾಣಿಸುತ್ತದೆಯೋ, ಅದು ಆ ಪರಮಶಕ್ತಿವಂತ ಈಶ್ವರನದ್ದೇ ಆಗಿದೆ. ನಿಮ್ಮ ಬಳಿ ಏನೇನು ಇದೆಯೋ, ಅದನ್ನು ಅವನಿಗೆ ಮತ್ತು ಇತರರಿಗೆ ಕೊಡಿ. ದಾನದಿಂದ ಮತ್ತು ತ್ಯಾಗದಿಂದ ಆನಂದಿತ ಮತ್ತು ತೃಪ್ತರಾಗಿರಿ. ತ್ಯಾಗ ಮಾಡಿ ಇದನ್ನು ಉಪಭೋಗಿಸಿರಿ. – ಪರಮಸದ್ಗುರು ಶ್ರೀಗಜಾನನಮಹಾರಾಜ
ಅಗ್ನಿಹೋತ್ರದ ಲಾಭಗಳು
ಜಗತ್ತಿನಲ್ಲಿ ಅಗ್ನಿಹೋತ್ರದ ಆಚರಣೆಯನ್ನು ಮಾಡುವ ವಿಭಿನ್ನ ವಂಶ, ವಿಭಿನ್ನ ಭಾಷೆ, ವಿಭಿನ್ನ ಧರ್ಮ ಮತ್ತು ಆಧ್ಯಾತ್ಮಿಕ ಗುಂಪುಗಳಿವೆ. ಅವರು ಮುಂದಿನ ಲಾಭಗಳನ್ನು ಅನುಭವಿಸಿದ್ದಾರೆ.
೧. ಚೈತನ್ಯದಾಯಕ ಮತ್ತು ಔಷಧೀಯ ವಾತಾವರಣ ನಿರ್ಮಾಣವಾಗುತ್ತದೆ.
೨. ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರ ಧಾನ್ಯಗಳು ಬೆಳೆಯುತ್ತವೆ.
೩. ಪ್ರಾಣಿಜೀವಗಳ ಪೋಷಣೆ : ಹೇಗೆ ಅಗ್ನಿಹೋತ್ರವು ವನಸ್ಪತಿಗಳ ಪೋಷಣೆಯನ್ನು ಮಾಡುತ್ತದೆಯೋ, ಅದೇ ರೀತಿ ಮನುಷ್ಯರ ಮತ್ತು ಎಲ್ಲ ಪ್ರಾಣಿಗಳ ಪೋಷಣೆಯನ್ನೂ ಮಾಡುತ್ತದೆ.
೪. ನರವ್ಯೆಹದ ಮೇಲಾಗುವ ಪರಿಣಾಮ: ಜ್ವಾಲೆಯಿಂದ ಹೊರಬರುವ ಹೊಗೆಯು ಮೆದುಳು ಮತ್ತು ನರವ್ಯೆಹದ ಮೇಲೆ ಪ್ರಭಾವೀ ಪರಿಣಾಮವನ್ನು ಬೀರುತ್ತದೆ.
೫.ರೋಗಜಂತುಗಳ ಪ್ರತಿರೋಧ : ಅಗ್ನಿಹೋತ್ರದ ಔಷಧಿಯುಕ್ತ ವಾತಾವರಣದಿಂದಾಗಿ ರೋಗಕಾರಿ ಜಂತುಗಳ ಬೆಳವಣಿಗೆಯ ಮೇಲೆ ಪ್ರತಿಬಂಧ ಬರುತ್ತದೆ ಎಂದು ಕೆಲವು ಸಂಶೋಧಕರಿಗೆ ತಿಳಿದು ಬಂದಿದೆ.
೬.ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ : ನಮ್ಮ ಸುತ್ತಲೂ ಒಂದು ರೀತಿಯ ಸಂರಕ್ಷಣಾಕವಚವಿರುವುದರ ಅರಿವಾಗುತ್ತದೆ.
೭. ಅಗ್ನಿಹೋತ್ರದಿಂದ ಪ್ರಾಣಶಕ್ತಿಯು ಶುದ್ಧವಾಗಿ, ಆ ವಾತಾವರಣದಲ್ಲಿನ ವ್ಯಕ್ತಿಗಳ ಮನಸ್ಸು ಕೂಡಲೇ ಪ್ರಸನ್ನ ಮತ್ತು ಆನಂದಿತವಾಗುವುದು ಹಾಗೂ ಆ ವಾತಾವರಣದಲ್ಲಿ ಧ್ಯಾನಧಾರಣೆಯು ಸಹಜವಾಗಿ ಸಾಧ್ಯವಾಗುತ್ತದೆ.
ಅಗ್ನಿಹೋತ್ರದ ಸ್ವರೂಪ ಮತ್ತು ಪ್ರಕ್ರಿಯೆ
ಸೂರ್ಯನು ಶಕ್ತಿಯನ್ನು ಕೊಡುತ್ತಾನೆ ಮತ್ತು ಶಕ್ತಿ ಯನ್ನು ತೆಗೆದುಕೊಳ್ಳುತ್ತಾನೆ. ಇದರಿಂದ ಪ್ರದೂಷಣೆಯನ್ನು ನಾಶಗೊಳಿಸಲು ಯಾವ ಸ್ಥಿತಿಯು ಆವಶ್ಯಕ ಮತ್ತು ಪೂರಕವಾಗಿರುತ್ತದೆಯೋ, ಅದು ತಾನಾಗಿಯೇ ನಿರ್ಮಾಣವಾಗುತ್ತದೆ. ಇದರಿಂದ ಪೃಥ್ವಿಗೆ ಶಾಂತಸ್ಥಿತಿ ಪ್ರಾಪ್ತವಾಗುತ್ತದೆ. ಅಗ್ನಿಹೋತ್ರವು ಜನಿತ್ರವಾಗಿದೆ (ಜನರೇಟರ್) ಮತ್ತು ಅದರಲ್ಲಿನ ಅಗ್ನಿಝೋತವು ಯಂತ್ರವಾಗಿದೆ (ಟರ್ಬೈನ್). ಅಗ್ನಿಯ ಮಾಧ್ಯಮದಿಂದ ಆಕಳ ಬೆರಣಿ, ಆಕಳ ತುಪ್ಪ ಮತ್ತು ಅಕ್ಷತೆಯ ಅಕ್ಕಿ ಈ ಘಟಕಗಳು ಪರಸ್ಪರ ಸಂಯೋಗಗೊಂಡು ಒಂದು ಅಪೂರ್ವ ಶಕ್ತಿಯು ನಿರ್ಮಾಣವಾಗುತ್ತದೆ. ಅದು ಸುತ್ತಮುತ್ತಲಿನ ವಸ್ತುಗಳ ಮೇಲೆ ಅಪ್ಪಳಿಸುತ್ತದೆ, ಅವುಗಳ ಸುತ್ತಲೂ ಹರಡುತ್ತದೆ, ಅವುಗಳಲ್ಲಿನ ವಿಘಾತಕ ಶಕ್ತಿಯನ್ನು ನಿಷ್ರಿಯಗೊಳಿಸುತ್ತದೆ. ಇದರಿಂದ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಆ ಮೇಲೆ ಆ ವಾತಾವರಣದಲ್ಲಿನ ಸಾವಯವ (ಜೈವಿಕ) ದ್ರವ್ಯಗಳಿಗೆ ಬದುಕಲು, ವೃದ್ಧಿಯಾಗಲು ಮತ್ತು ವಿಸ್ತಾರವಾಗಲು ಪೂರಕ ಇಂಧನಗಳ ಪೂರೈಕೆಯನ್ನು ಮಾಡಲಾಗುತ್ತದೆ. ಈ ರೀತಿಯಲ್ಲಿ ಅಗ್ನಿಹೋತ್ರ ಪ್ರಕ್ರಿಯೆಯು ವಾಯುಮಂಡಲದ ಹಾನಿಯನ್ನು ಪರೋಕ್ಷವಾಗಿ ತುಂಬಿಸುತ್ತದೆ.
ಹವನದ್ರವ್ಯಗಳು
ಹವನವನ್ನು ಮಾಡುವಾಗ ಆಕಳ (ಹಸುವಿನ) ಬೆರಣಿ, ಆಕಳ ತುಪ್ಪ ಮತ್ತು ಅಖಂಡ ಅಕ್ಕಿಯನ್ನು ಉಪಯೋಗಿಸಿದರೆ, ಈ ಘಟಕಗಳು ಆಯಾಯ ತತ್ತ್ವದ ಸ್ತರದಲ್ಲಿ ಅಗ್ನಿಯ ಸಂಯೋಗದಿಂದ ಸೂಕ್ಷ ವಾಯುವನ್ನು ನಿರ್ಮಿಸುತ್ತವೆ.
ಅಗ್ನಿಹೋತ್ರ ಮಂತ್ರ
೧. ವ್ಯಾಖ್ಯೆ : ಮಂತ್ರವೆಂದರೆ ವಿಶಿಷ್ಟ ಅರ್ಥ ಮತ್ತು ವಿಶಿಷ್ಟ ಧ್ವನಿಲಹರಿಗಳಿಂದ ವೇದಗಳು ಸಿದ್ಧಗೊಳಿಸಿದ ಸೂತ್ರ.
೨. ಪಠಿಸಬೇಕಾದ ಮಂತ್ರ
ಅ.ಸೂರ್ಯೋದಯದ ಸಮಯದಲ್ಲಿ
೧. ಸೂರ್ಯಾಯ ಸ್ವಾಹಾ ಸೂರ್ಯಾಯ ಇದಮ್ ನ ಮಮ
೨. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಮ್ ನ ಮಮ
ಆ. ಸೂರ್ಯಾಸ್ತದ ಸಮಯದಲ್ಲಿ
೧. ಅಗ್ನಯೇ ಸ್ವಾಹಾ ಅಗ್ನಯೇ ಇದಮ್ ನ ಮಮ
೨. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಮ್ ನ ಮಮ…

ಕೃಪೆ: ಕನ್ನಡ ಸನಾತನ ಪ್ರಭಾತ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter